CrimeNEWSನಮ್ಮಜಿಲ್ಲೆ

ಬಾರ್ ಮಾಲೀಕನ ಹತ್ಯೆಗೆ ಸಂಚು: ಸುಪಾರಿ ಗ್ಯಾಂಗ್ ಹೆಡೆಮುರಿ ಕಟ್ಟಿದ ಮಂಡ್ಯ ಪೊಲೀಸ್‌

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಬಾರ್ ಮಾಲೀಕನ ಹತ್ಯೆಗೆ ಸಂಚು ರೂಪಿಸಿದ್ದ ಸುಪಾರಿ ಗ್ಯಾಂಗ್‌ನ ಹೆಡೆಮುರಿ ಕಟ್ಟುವಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ (ಭಾರತೀ ನಗರ)ಯ ಸಂಕ್ರಾಂತಿ ಬಾರ್ ಮಾಲೀಕ ನಾಗರಾಜ್ ಎಂಬುವವರ ಹತ್ಯೆಗೆ ಸುಪಾರಿ ಗ್ಯಾಂಗ್ ಸಂಚು ನಡೆಸಿತ್ತು ಎನ್ನಲಾಗಿದೆ.

ಘಟನೆ ವಿವರ: ತಾಲೂಕಿನ ರಾಜೇಗೌಡನದೊಡ್ಡಿ ಬಸವೇಗೌಡ ಮತ್ತು ಸಂಕ್ರಾಂತಿ ಬಾರ್ ಮಾಲೀಕ ನಾಗರಾಜ್ ನಡುವೆ ಲೈಸೆನ್ಸ್ ವಿಚಾರವಾಗಿ ಕೆಲ ತಿಂಗಳುಗಳ ಹಿಂದೆ ಗಲಾಟೆ ನಡೆದಿತ್ತು. ನಂತರ ಸಂಕ್ರಾಂತಿ ಬಾರ್ ಮಾಲೀಕ ನಾಗರಾಜ್ ಮತ್ತು ಆತನ ಮಗ ಅರುಣ್ ಕುಮಾರ್ ಬಸವೇಗೌಡರ ಮೇಲೆ ಮಂಡ್ಯ ಅಬಕಾರಿ ಕಚೇರಿ ಬಳಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಹಲ್ಲೆಗೊಳಗಾದ ಬಸವೇಗೌಡ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಮತ್ತು ಅರುಣ್ ಕುಮಾರ್ ವಿರುದ್ಧ ದೂರು ದಾಖಲು ಮಾಡಿದ್ದರು.

ಈ ಘಟನೆ ನಡೆದ ದಿನದಿಂದ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಬಸವೇಗೌಡ ಅ.10 ರಂದು ಕೆ.ಎಂ.ದೊಡ್ಡಿ ಬಳಿಯ ಹರಳಹಳ್ಳಿ ಗ್ರಾಮದ ಬಳಿ ನಾಗರಾಜ್ ಬೈಕಿನಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಸುಪಾರಿ ಗ್ಯಾಂಗ್ ಯತ್ನಿಸಿತು. ಆದರೆ ನಾಗರಾಜ್ ಸಣ್ಣ ಪುಟ್ಟ ಗಾಯಗಳಾಗಿ
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು.

ಅಪಘಾತದ ಬಗ್ಗೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ನಾಗರಾಜ್ ಅವರ ಮಗ ಅರುಣ್ ಕುಮಾರ್ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಗೂಡ್ಸ್ ವಾಹನದ ಚಾಲಕನ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದರು.

ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್, ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಸಂತೋಷ್ ಮತ್ತು ತಂಡ ಗೂಡ್ಸ್ ವಾಹನ ಚಾಲಕ ಶರತ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿ ತೀವ್ರ ವಿಚಾರಣೆ ನಡೆಸಿತು.

ಆಗ ಬಸವೇಗೌಡ ಎಂಬುವವರು ನಾಗರಾಜ್ ಎಂಬ ವ್ಯಕ್ತಿಯನ್ನು ಗೂಡ್ಸ್ ವಾಹನದಿಂದ ಕೊಲೆ ಮಾಡಿದರೆ 50,000 ರೂಪಾಯಿ ಮತ್ತು ಅದಕ್ಕೆ ಆಗುವ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ತಿಳಿಸಿದ್ದರು. ಹಾಗಾಗಿ ನನ್ನ ಸ್ನೇಹಿತ ಅರುಣ್ ಮತ್ತು ನಾನು ಕೊಲೆ ಮಾಡಲು ಯತ್ನಿಸಿದ್ದೇವು ಎಂದು ಶರತ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಇನ್ನು ಪ್ರಕರಣದ ಪ್ರಮುಖ ಆರೋಪಿಯಾದ ಬಸವೇಗೌಡ, ಅರುಣ್, ಶರತ್ ಹಾಗೂ ಜೈಲಿನಲ್ಲಿದ್ದುಕೊಂಡೆ ಕೊಲೆ ಮಾಡಲು ಮಾರ್ಗದರ್ಶನ ನೀಡುತ್ತಿದ್ದ ಪ್ರಸನ್ನ ತೊಪ್ಪನಹಳ್ಳಿ ಎಂಬುವವರನ್ನು ಕೆ.ಎಂ.ದೊಡ್ಡಿ ಪೊಲೀಸರು ವಶಕ್ಕೆ ಪಡೆದರು.

ಇನ್ನು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 120 (ಬಿ) 34 ರೀತ್ಯಾ ಪ್ರಕರಣ ದಾಖಲು ಮಾಡಿ ನಂತರ ಆರೋಪಿಗಳನ್ನು ಮದ್ದೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಂತರ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?