ಬೆಂಗಳೂರು: ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ 10ನೇ ದಿನವಾದ (ಡಿ.8) ಇಂದು ಜಾಲಕ್ರಾಸ್ನಲ್ಲಿರುವ ಬಸವೇಶ್ವರ ಬಸ್ನಿಲ್ದಾನದಿಂದ ಸ್ವಾತಂತ್ರ್ಯ ಉದ್ಯಾನದ ಕಡೆಗೆ ಸಾಗುತ್ತಿದ್ದು, ಇದಕ್ಕೂ ಮುನ್ನ ಕತ್ತರಿಗುಪ್ಪಿ ಬಿಎಂಟಿಸಿ 13 ನೇ ಘಟಕದ ಚಾಲಕ ಮಲ್ಲೇಶಪ್ಪ ಮತ್ತು ಕುಟುಂಬದವರು ಪಾದಯಾತ್ರೆ ನಿರತರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಪಾದಯಾತ್ರೆಗೆ ಬಹುತೇಕ ಎಲ್ಲ ನೌಕರರ ಸಂಘಟನೆಗಳ ಪಾಧಿಕಾರಿಗಳ ಜತೆಗೆ ಕನ್ನಡಪರ ವಿವಿಧ ಸಂಘಟನೆಗಳು ಭಾಗವಹಿಸಿವೆ.
ಇನ್ನು ಮಂಗಳವಾರ ರಾತ್ರಿಜಾಲಹಳ್ಳಿ ಕ್ರಾಸ್ ಬಸವೇಶ್ವರ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿ ಬುಧವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಪಾದಯಾತ್ರೆ ಮುಂದುವರಿಸಿದ್ದಾರೆ. ಈ ಪಾದಯಾತ್ರೆ ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಫ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಸಂಜೆ 5ಗಂಟೆವರೆಗೆ ಸಾಂಕೇತಿಕ ಧರಣಿ ನಡೆಸಿ ಬಳಿಕ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಅವರಿಗೆ ಮನವ ಪತ್ರ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಎಂ ಅವರಲ್ಲಿ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಕೇಸ್ಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಲಾಗುವುದು ಎಂದು ನೌಕರರು ತಿಳಿಸಿದ್ದಾರೆ.
ನ.29ರಿಂದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಸಾರಿಗೆಯ ನಾಲ್ಕೂ ನಿಗಮಗಳ ನೂರಾರು ನೌಕರರು, ಕನ್ನಡಪರ ಸಂಘನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ಪಾದಯಾತ್ರೆ ಬಳ್ಳಾರಿ ಕೇಂದ್ರ ಬಸ್ನಿಲ್ದಾಣದಿಂದ ಆರಂಭವಾಗಿ- ಹಾನಗಹಲ್- ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ದಾಬಸ್ಪೇಟೆ – ನೆಲಮಂಗಲ – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್ಗುಟ್ಟಹಳ್ಳಿ- ಜಾಲಹಳ್ಳಿ ಕ್ರಾಸ್ ವರೆಗೂ ಇಲ್ಲಿಯವರೆಗೂ ಸಾಗಿದ್ದು ಇಂದು ಫ್ರೀಡಂ ಪಾರ್ಕ್ ತಲುಪಲಿದೆ.