ಬೆಂಗಳೂರು: ಡಿ.12ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳ ಸಾರಿಗೆ ನೌಕರರ ರಾಜ್ಯ ಒಕ್ಕಲಿಗ ಮುಖಂಡರ ಸಭೆ ಇಂದು (ಡಿ.9) ಮೈಸೂರು ರಸ್ತೆ ಬಿಎಚ್ಇಎಲ್ ಎದುರಿರುವ ವಿಜಯಲಕ್ಷ್ಮಿ ಪಾರ್ಟಿ ಹಾಲ್ನಲ್ಲಿ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು ಒಕ್ಕಲಿಗ ಸಮುದಾಯದ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ 4 ನಿಗಮಗಳ ಒಕ್ಕಲಿಗ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಹರೀಶ್ ಪಿ. ಗೌಡ ತಿಳಿಸಿದ್ದಾರೆ.
ಈ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ, ಖಜಾಂಜಿ ಜಗದೀಶ್, ಉಪಾಧ್ಯಕ್ಷ ಸುಧಾಕರ್ ರೆಡ್ಡಿ, ಬೆಂಗಳೂರು ನಗರ ಅಧ್ಯಕ್ಷ ಎಚ್.ಡಿ. ನಾಗೇಂದ್ರ, ಉಪಾಧ್ಯಕ್ಷ ಲೋಕೇಶ್, ಸಂಘಟನಾ ಕಾರ್ಯದರ್ಶಿ ಎಚ್.ಕೆ. ಯೋಗೇಶ್ ಸೇರಿದಂತೆ ಮತ್ತಿತರರು ಹಾಜರಾಗಲಿದ್ದಾರೆ.