NEWSನಮ್ಮಜಿಲ್ಲೆನಮ್ಮರಾಜ್ಯ

ದಾವಣಗೆರೆ: KSRTC ನೌಕರರ ಮಹಾ ಸಮ್ಮೇಳನ- ಮತ್ತೊಮ್ಮೆ ಹುಸಿ ಭರವಸೆ ನೀಡುತ್ತಾರೆ ಎನ್ನುವುದನ್ನು ಸುಳ್ಳು ಮಾಡಿದಕ್ಕೆ ಸಾರಿಗೆ ಸಚಿವರಿಗೆ ಧನ್ಯವಾದ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾ ಸಮ್ಮೇಳನಕ್ಕೆ ಆಹ್ವಾನಿತರಾದ ಯಾವೊಬ್ಬ ಆಡಳಿತಾರೂಢ ರಾಜಕಾರಣಿಗಳು ಆಗಮಿಸದೇ ಇದ್ದದ್ದು ನಿರೀಕ್ಷಿತವೇ ಆಗಿದ್ದರೂ ಕೊನೇ ಪಕ್ಷ ಸಾರಿಗೆ ಸಚಿವರಾದರೂ ಬಂದು ಮತ್ತೊಮ್ಮೆ ಹುಸಿ ಭರವಸೆ ನೀಡುತ್ತಾರೆ ಎನ್ನುವುದನ್ನು ಸುಳ್ಳು ಮಾಡಿದಕ್ಕೆ ಸಾರಿಗೆ ಸಚಿವರಿಗೆ ಸದಾ ಸಾರಿಗೆ ನೌಕರರ ಹಿತ ಬಯಸುವ ಮೃತ್ಯುಂಜಯ ಹಿರೇಮಠ ಧನ್ಯವಾದ ತಿಳಿಸಿದ್ದಾರೆ.

ಆಡಳಿತ ಮಂಡಳಿಯಿಂದ ಆಹ್ವಾನಿತರಾಗಿ ಸಮಾವೇಶಕ್ಕೆ  ಅಧಿಕಾರಿಗಳು ಬಾರದೇ ಮಗದೊಮ್ಮೆ ನೌಕರರು ತಮಗೆ ನಗಣ್ಯ ಎಂದು ತೋರಿಸಿಕೊದುವುದಕ್ಕೋ ಅಥವಾ ತಾವು ಏನಿದ್ದರೂ ನೌಕರರಿಗೆ ಕಿರುಕುಳ ನೀಡುವುದೇ ನಮ್ಮ ಉದ್ದೇಶ ತಮಗೆ ಹಿತವಚನ ಎಂಬ ಪದದ ಅರ್ಥ ಗೊತ್ತೇ ಇಲ್ಲ ಎನ್ನುವ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ ಎಂಬ ಕಾರಣಕ್ಕೆ ಭಾಗವಹಿಸದೇ ಇರುವುದಕ್ಕೆ ಅವರಿಗೂ ಧನ್ಯವಾದಗಳು.

ಯಾವುದೇ ಸಂಘಟನೆ ಕಳೆದ 15 ತಿಂಗಳಿನಿಂದ ಅಂದರೆ ಮುಷ್ಕರದ ನಂತರ ನೌಕರರ ಬಗ್ಗೆ ಕ್ಯಾರೇ ಎನ್ನದವರು ಮೊನ್ನೆ ಜುಲೈ 12 ರಂದು ಜಂಟಿ ಸಂಘಟನೆಗಳ ಸಭೆ ಕರೆದದ್ದನ್ನು ನೋಡಿದರೆ ಅವರಿಗೆ ಈಗ ಜ್ಞಾನೋದಯ ಆಗಿದೆ ಎಂದು ಭಾವಿಸೋಣ. ಆದರೂ ಸಹ ಅಂದಿನ ಜಂಟಿ ಸಭೆಯಲ್ಲಿ ಕೂಟದ ಸಮಾವೇಶದ ಬಗ್ಗೆ ಕೊಂಕು ಮಾತನಾಡಿದವರಿಗೆ ಈ ಸಮ್ಮೇಳನ ಎಚ್ಚರಿಕೆ ಘಂಟೆ ನೀಡಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಈ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಎಚ್ಚರಿಕೆ ಮಿಶ್ರಿತ ಆಶೀರ್ವಚನ ನೀಡಿದಕ್ಕಾಗಿ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಹಾಗೂ ಸ್ವಾಮೀಜಿಗಳು ಹೇಳಿದಂತೆ ನೌಕರರೂ ಮತ್ತು ಸಂಘಟನೆಗಳು ಬುಸುಗುಡುತ್ತಲೇ ಇರಬೇಕು. ಈ ಕೆಲಸ ಮಾಡುತ್ತಾ ಇರುವುದು ಕೇವಲ ಕೂಟ ಮಾತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಂತ ಕಚ್ಚಲೇಬಾರದು ಎಂದು ಅಲ್ಲ. ಕಚ್ಚುವ ಸಮಯ ಸಹ ದೂರ ಇಲ್ಲ. ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಕಚ್ಚಿ ಸಾರಿಗೆ ನೌಕರರ ವಿಷ ಏನು ಎನ್ನುವುದನ್ನು ತೋರಿಸೋಣ ಈಗಾಗಲೇ ಇದರ ಅನುಭವ ಕೆಲವರು ಅನುಭವಿಸಿ ಆಗಿದೆ ಎಂದು ತಿಳಿಸಿದ್ದಾರೆ.

ಈಗಲಾದರೂ ಉಳಿದ ಸಂಘಟನೆಗಳು ಇದೇ ಜುಲೈ 21 ರಂದು ಸೇರುವ ಜಂಟಿ ಸಂಘಟನೆಯ ಸಭೆಯಲ್ಲಿ ತಮ್ಮ ತಮ್ಮ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮಾವೇಶದಲ್ಲಿ ಇಟ್ಟ ಬೇಡಿಕೆಗಳ ಬಗ್ಗೆ ಒಕ್ಕೊರಲಿನ ಅಭಿಪ್ರಾಯಗಳನ್ನು ಸರಕಾರ/ ಆಡಳಿತ ಮಂಡಳಿ ಮುಂದೆ ಮಂಡಿಸಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...