NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಸಾರಿಗೆ ನೌಕರರು ಭಿಕ್ಷುಕರಲ್ಲ ಸೇವಕರು, ಅವರಿಗೂ ಬೇಕು ಸರಿಸಮಾನ ವೇತನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಪ್ರತಿ ನಾಲ್ಕು ವರ್ಷಕೊಮ್ಮೆ ಪ್ರತಿಭಟನೆ ಮಾಡುತ್ತಾರೆ. ಬಳಿಕ ಕೆಲ ಟ್ರೇಡ್‌ ಯೂನಿಯನ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಭಿಕ್ಷುಕರಿಗೆ ಕೊಡುವಂತೆ ಒಂದೆರಡು ಕಾಸು ಹೆಚ್ಚಳದೊಂದಿಗೆ ಅಗ್ರಿಮೆಂಟ್‌ ಮಾಡಿ ಆ ಅಗ್ರಿಮೆಂಟ್‌ಗೂ ಸಹಿಯಾಕದೆ ಹೊರಬಂದು ಬಿಡುತ್ತಾರೆ.

ಇದು ಕಳೆದ 4 ದಶಕಗಳಿಂದಲೂ ಸಾರಿಗೆಯ ನೌಕರರನ್ನು ವಂಚಿಸಲು ನಡೆದುಕೊಂಡು ಬಂದಿರುವ ಪರಿ. ಇದನ್ನು ಸ್ವತಃ ಸಾರಿಗೆ ಟ್ರೇಡ್‌ ಯೂನಿಯನ್‌ವೊಂದರಲ್ಲಿ ಪದಾಧಿಕಾರಿಯಾಗಿದ್ದವರು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿರುವುದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಪ್ರಮುಖವಾಗಿ ಎಐಟಿಯುಸಿಯ ಅಧ್ಯಕ್ಷರು ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಸಂಬಂಧ ನಾವು ಶೇಕಡಾ ಇಷ್ಟರಷ್ಟು ವೇತನ ಹೆಚ್ಚಳವಾಗಬೇಕು ಎಂದು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೆವು ಆದರೆ ಸರ್ಕಾರ ಇಷ್ಟು ಪರ್ಸೆಂಟ್‌ ಮಾಡಿದೆ. ಅದಕ್ಕೆ ನಾವು ಒಪ್ಪಲು ಸಾಧ್ಯವಿಲ್ಲ ಎಂದು ಹೊರಬಂದೆವು ಆದರೆ, ಸರ್ಕಾರ ಅಷ್ಟನ್ನೇ ಕೊಟ್ಟಿದೆ. ಈಗಲು ಸರ್ಕಾರದ ನಡೆಯನ್ನು ವಿರೋಧಿಸುತ್ತೇವೆ. ನಮ್ಮ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.

ಅಲ್ಲದೆ ಕಳೆದ 20 -30 ವರ್ಷಗಳಿಂದ ಸಾರಿಗೆ ನೌಕರರನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ನೌಕರರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಅನಂತ ಸುಬ್ಬರಾವ್‌ಮಾಡಿರುವುದಾದರೂ ಏನು? ನೌಕರರ ಜೀವನ ಮಟ್ಟವನ್ನು ಅತ್ಯಂತ ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.

ಸಾವರಿಗೆ ನೌಕರರು ಎಂದರೆ ಸರ್ಕಾರ ಮತ್ತು ಸ್ವತಃ ಆಡಳಿತ ಮಂಡಳಿಯೇ ಒಂದು ರೀತಿ ಭಿಕ್ಷುಕರಂತೆ ಕಾಣುತ್ತಿದೆ. ಆದರೆ ಈ ನೌಕರರು ಇಲ್ಲದೆ ಹೋದರೆ ಸಾರಿಗೆ ಬಸ್‌ಚಕ್ರ ತಿರುಗುವುದೇ ಇಲ್ಲ. ಇದರ ಅರಿವು ಇದ್ದರೂ ಸಹ ಅವರನ್ನು ಕೀಳಾಗಿ ಕಾಣುವುದು ಏಕೆ? ಟ್ರೇಡ್‌ಯೂನಿಯನ್‌ಗಳು ಆಡಳಿತದ ಪರ ಬ್ಯಾಟ್‌ಬೀಸುತ್ತಿರುವುದಕ್ಕೆ ಅಲ್ಲವೇ?

ಇದನ್ನು ಅರಿತ ಸಾರಿಗೆ ನೌಕರರು ಈಗ ನಾವು ಭಿಕ್ಷುಕರಲ್ಲ ಜನರ ಸೇವಕರು ನಾಡಿನ 7ಕೋಟಿ ಜನರ ಸೇವಕರಾಗಿ ನಿತ್ಯ ಕರ್ತವ್ಯನಿರತರಾಗಿದ್ದೇವೆ ಹಾಗಾಗಿ ನಮ್ಮನ್ನು ಭಿಕ್ಷುಕರಂತೆ ನೋಡಬೇಡಿ ಸರಿ ಸಮಾನವೇತನ ಕೋಡಿ ಎಂದು ಆಗ್ರಹಿಸುತ್ತಿದ್ದಾರೆ.

ಆದರೆ, ಇತ್ತ ನೌಕರರ ಹಿತಕಾಯಬೇಕೆಂದೆ ಜನ್ಮತಾಳಿರುವ ಈ ಟ್ರೇಡ್‌ಯೂನಿಯನ್‌ಗಳ ಕೆಲವರು ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿ ನೌಕರರನ್ನು ಕೀಳಾಗಿ ಕಾಣುತ್ತಿವೆ. ಇದರಿಂದಲೇ ನೌಕರರು ವೇತನಕ್ಕಾಗಿ ಮತ್ತು ಸಂಸ್ಥೆಯಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ಬೇಸತ್ತು ಹೋರಾಟ ಮಾಡಿದರು.

ಅದರ ಪರಿಣಾಮ ಈ ಯೂನಿಯನ್‌ಗಳ ಕೆಲ ಅಧ್ಯಕ್ಷರೇ ನೌಕರರ ವಜಾ, ವರ್ಗಾವಣೆ, ಅಮಾನತು ಮಾಡುವಂತೆ ಅಧಿಕಾರಿಗಳೀಗೆ ಸಲಹೆ ನೀಡಿದರು. ಇಂಥ ಕೀಳು ಮಟ್ಟದ ಯೂನಿಯನ್‌ಗಳು ಇರುವುದರಿಂದ ಇಂದು ನೌಕರರು ಭಿಕ್ಷುಕರಿಗಿಂತಲೂ ಕೀಳಾಗಿ ಜೀವನ ನಡೆಸುವಂತಾಗಿದೆ.

ಇನ್ನಾದರೂ ಇಂಥ ಯೂನಿಯನ್‌ಗಳ ಪದಾಧಿಕಾರಿಗಳನ್ನು ದೂರವಿಟ್ಟು ಹೋರಾಟಕ್ಕೆ ಬೆನ್ನೆಲುಬಾಗಿ ನಿಂತುಕೊಳ್ಳುವ ಯೂನಿಯನ್‌ಗಳ ಪದಾಧಿಕಾರಿಗಳನ್ನು ಬೆಂಬಲಿಸಬೇಕಿದೆ.

ಈಗಲೂ ನೌಕರ ಬಗ್ಗೆ ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂಬುವುದು ಕಿಂಚಿತ್ತಾದರೂ ಕೆಲ ಟ್ರೇಡ್‌ಯೂನಿಯನ್‌ಗಳವರಿಗೆ ಇಲ್ಲವಾಗಿದೆ. ಆದರೆ, ಸಾರಿಗೆ ನೌಕರರ ಪರವಾಗಿ ದೃಢ ನಿರ್ಧಾರ ತೆಗೆದುಕೊಂಡಿರುವ ಕೂಟವನ್ನು ದೂರುವುದು ಮುಂದುವರಿದೇ ಇದೆ. ಹೀಗೆ ನೌಕರರ ದಾರಿ ತಪ್ಪಿಸುವ ಹೇಳಿಕೆ ನೀಡಬೇಡಿ ಎಂದು ಕೆಲ ನೌಕರರೇ ಹೇಳುತ್ತಿದ್ದಾರೆ.

ಈ ಹಿಂದೆ ಮಂಗಳೂರು ವಿಭಾಗ ಸಾರಿಗೆ ನೌಕರರೊಬ್ಬರು ನೀವು ಕಳೆದ 20 ವರ್ಷಗಳಿಂದ ಸಾರಿಗೆ ನೌಕರರೂ ಕೊಟ್ಟ ಹಣದ ಜತೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳ ಜತೆಗೆ ಶಾಮೀಲಾಗಿ ನೌಕರರನ್ನು ಇಲ್ಲಿಯವರೆಗೂ ತುಳಿದು ನೀವು ನಿಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿರುವುದು ಸಾಕು. ಇನ್ನಾದರೂ ಸಾರಿಗೆ ನೌಕರರ ಋಣದಲ್ಲಿರುವ ನೀವು ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಈ ಹಿಂದಿನ ರೀತಿಯಲ್ಲೇ ಸರ್ಕಾರದ ಪರ ನೌಕರರ ವಿರುದ್ಧ ನಿಂತುಕೊಳ್ಳುವುದಾದರೆ ನಿಮ್ಮನ್ನು ಯಾವುದೇ ಒಂದು ಡಿಪೋಗೂ ಕಾಲಿಡಲು ಬಿಡುವುದಿಲ್ಲ. ನಿಮ್ಮ ಭಂಡತನ ನಮಗೆ ಈಗ ಗೊತ್ತಾಗಿದೆ. ನೀವು ಇನ್ನೊಬ್ಬರ ಬಗ್ಗೆ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದೀರಿ ಆ ನಿಟ್ಟಿನಲ್ಲಿ ನೌಕರರನ್ನು ಪಾತಾಳಕ್ಕೆ ತುಳಿದಿದ್ದೀರಿ. ಇನ್ನು ಕೊಳ್ಳೆ ಹೊಡೆಯುವುದಕ್ಕೆ ನಾವು ನಿಮಗೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.

ಇನ್ನು ಸರ್ಕಾರ ಅಗ್ರಿಮೆಂಟ್‌ನಲ್ಲಿ ಇಷ್ಟು ಪರ್ಸೆಂಟ್‌ ಕೊಡುತ್ತೇವೆ ಎಂದು ಅಂತಿಮವಾಗಿ ಹೇಳಿದ್ದನ್ನು ಈವರೆಗೂ ಈ ಅನಂತಸುಬ್ಬರಾವ್‌ ಮತ್ತಿತರ ಯೂನಿಯನ್‌ಗಳ ಪದಾಧಿಕಾರಿಗಳು  ಏಕೆ ವಿರೋಧಿಸಿಲ್ಲ ಎಂದು ಈಗ ಪ್ರಜ್ಞಾವಂತಾಗಿರುವ ಸಾರಿಗೆ ನೌಕರರು ಕೇಳುತ್ತಿದ್ದಾರೆ. ಅದಕ್ಕೆ ಉತ್ತರಕೊಡಲಾಗದೆ, ಬಾಯಿಮುಚ್ಚಿಕೊಂಡಿದ್ದಾರೆ ಎಂಬ ಮಾತುಗಳು ನೌಕರರ ಮೊಗಸಾಲೆಯಲ್ಲಿ ಹರಿದಾಡುತ್ತಿದೆ.

ಇನ್ನು ಅಗ್ರಿಮೆಂಟ್‌ ಬೇಕು ಎಂದು ಹೇಳುವ ಈ ಸಂಘಟನೆಗಳ ಮುಖಂಡರಿಗೆ ಇಷ್ಟೇ ಪರ್ಸೆಂಟ್‌ ಮಾಡಬೇಕು. ಇಲ್ಲದಿದರೆ ನಾವು ಒಪ್ಪುವುದಿಲ್ಲ ಎಂದು ಏಕೆ ಕಳೆದ ನಾಲ್ಕೂ ದಶಕಗಳಿಂದಲೂ ಪಟ್ಟು ಹಿಡಿದು ಕುಳಿತುಕೊಳ್ಳಲಿಲ್ಲ? ಈ ಬಗ್ಗೆ ನೌಕರರಿಗೆ ಅನುಮಾನವು ಕಾಡುತ್ತಿದೆ. ಈ ಬಗ್ಗೆ ಪ್ರಮುಖವಾಗಿ ಅನಂತಸುಬ್ಬರಾವ್‌ ಅವರೇ ಉತ್ತರಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC