ಸಿಐಟಿಯು ಫೆಡರೇಷನ್ ಪ್ರಥಮವಾಗಿ ಸೇವೆಯಿಂದ ವಜಾ ಮಾಡಿರುವ ನೌಕರರನ್ನು ಪುನರ್ ನೇಮಕ ಮಾಡಬೇಕು ಅಂತ ಸೆಪ್ಟೆಂಬರ್ 20- 2021 ರಂದು ಧರಣಿ ಸತ್ಯಾಗ್ರಹ ಮಾಡಿತು.
ನಂತರ ನವೆಂಬರ್ ನಲ್ಲಿ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಾಗ ಧರಣಿಗೆ ಹೋಗಬೇಡಿ, ಸಚಿವರು 2-3 ದಿವಸದಲ್ಲಿ ಆದೇಶ ಮಾಡುತ್ತಾರೆ ಅಂತ ಹೋರಾಟಕ್ಕೆ ಬರುವವರನ್ನು ತಡೆದದ್ದು ಯಾರು? ಅವರು ಕಾರ್ಮಿಕ ದ್ರೋಹಿಗಳಲ್ಲವೆ?
ಶಾಸಕ ಮಹೇಶ್ ಅವರನ್ನು ಸಚಿವರ ಮನೆ ಬಳಿ ಕರೆದುಕೊಂಡು ಬಂದು ವಜಾ ಅದ ಕಾರ್ಮಿಕರು ಯಾವ ಸಂಘದ ಜತೆಯೂ ಹೋಗಬೇಡಿ ಸಚಿವರು ಒಪ್ಪಿಕೊಂಡಿದ್ದಾರೆ. 2-3 ದಿವಸದಲ್ಲಿ ಡ್ಯೂಟಿ ಕೊಡಿಸುತ್ತಾರೆ ಅಂತ ವಿಡಿಯೋದಲ್ಲಿ ಮಾತನಾಡುವಾಗ ಅಣ್ಣ ಕೆಲಸ ಇಲ್ಲದಿದ್ದಾಗ ವೇತನ ಕೇಳಬೇಡಿಅಂತ ಅವರ ಬಾಯಲ್ಲಿ ಹೇಳಿಸಿದವರು ಯಾರು? ಅವರು ಕಾರ್ಮಿಕ ದ್ರೋಹಿಗಳಲ್ಲವೇ?
ಲೋಕ ಅದಾಲತ್ ಆದೇಶವಾದಾಗ ಶಿಕ್ಷೆಯ ಸೂಚನೆ ಸರ್ಕಾರದ TS ಕಚೇರಿಯಿಂದ ಬಂದಾಗ CITU ,ಕಚೇರಿಯಲ್ಲಿ ಸಭೆ ಕರೆದು ಅಲ್ಲಿ ಚರ್ಚೆ ಮಾಡುವಾಗ ಶಿಕ್ಷೆಗಳನ್ನು ನಾವು ಒಪ್ಪೋದು ಬೇಡ ಅನಿರ್ದಿಷ್ಟ ಧರಣಿ ಮಾಡೋಣ- ಯಾವುದೇ ಶಿಕ್ಷೆ ಮತ್ತು ಷರತ್ತುಗಳಿಲ್ಲದೆ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಒತ್ತಾಯಿಸೋಣ ಅಂದಾಗ ಹೋರಾಟ ಬೇಡ ಸಚಿವರು ಮತ್ತು ಆಡಳಿತ ವರ್ಗದ ಜತೆ ಮಾತಾಡೊಣ ಅಂತ ಹೇಳಿದವರು ಯಾರು?
ಈಗ ಅವರೇ ಬಹಳ ಕಾಳಜಿಯಿಂದ ಮಾತನಾಡಿ ನಾಟಕ ಮಾಡುತ್ತಿದ್ದಾರೆ. ಸೇವೆಯಿಂದ ವಜಾ ಅದ ಕಾರ್ಮಿಕ ಬಂಧುಗಳೇ ಯಾರು ಕಾರ್ಮಿಕರಿಗೆ ಬಣ್ಣ- ಬಣ್ಣದ ಮಾತನಾಡುತ್ತಾರೆ ಅವರನ್ನು ನಂಬೋದು ನಮಗೆ ನಾವೇ ಮೋಸ ಮಾಡಿಕೊಂಡಂತೆ.
ಎಚ್ಚರದಿಂದ ನೈಜತೆಗೆ ಬೆಲೆ ಕೊಡಿ. ಡೋಂಗಿ- ಪುಂಗಿ- ಬಣ್ಣದ- ಭ್ರಮಾತ್ಮಕ ಮಾತುಗಳನ್ನು ಆಡುವವರ ಬಗ್ಗೆ ಇನ್ನು ಮುಂದಾದರು ಎಚ್ಚರ ವಹಿಸಿ. ಇಲ್ಲದಿದ್ದರೆ ಅವರು ಭಸ್ಮಾಸುರರ ಪಾತ್ರ ಮಾಡುತ್ತಿದ್ದಾರೆ. ನಟನೆ ಮಾಡುತ್ತ ನಿಮ್ಮ ಕೈಯನ್ನು ನಿಮ್ಮ ತಲೆಯ ಮೇಲೆ ಇಟ್ಟುಕೊಳ್ಳುವಂತೆ ಮಾಡಿ ಸುಟ್ಟು ಹೋದರೆ ನಿಮ್ಮ ಕೈ ಇಟ್ಟುಕೊಂಡು ಸುಟ್ಟರೆ ನಾನೇನು ಮಾಡಲಿ ಅಂತ ನಾಶ ಮಾಡುವ ಹುನ್ನಾರವಿದೆ.
l ಮಂಜುನಾಥ್ ಸಿಐಟಿಯು