NEWSನಮ್ಮಜಿಲ್ಲೆನಮ್ಮರಾಜ್ಯ

ಬಸ್‌ಗಳು ರಸ್ತೆಗೇ ಇಳಿದಿಲ್ಲ ಆದರೂ ಲಾಕ್‌ಡೌನ್‌ನಲ್ಲಿ ಗೈರಾಗಿದ್ದೀರಿ ಎಂದು 22-25 ದಿನಗಳ ವೇತನ ಕಡಿತ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್‌ವಿಭಾಗದಲ್ಲಿ ಚಾಲಕರನ್ನು ಕಿತ್ತು ತಿನ್ನುವ ರಣಹದ್ದುಗಳು ಸೇರಿಕೊಂಡಿವೆ. ಕಳೆದ 2021 ಏಪ್ರಿಲ್‌7ರಿಂದ ಸುಮಾರು 15ದಿನಗಳ ಕಾಲ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಮಾಡಿದ್ದರು.

ಆ ಬಳಿಕ ಅಂದರೆ ಏ.27ರ ರಾತ್ರಿ 9ಗಂಟೆಯಿಂದ ಮೇ 10ರವರೆಗೆ ಇಡೀ ರಾಜ್ಯಾದ್ಯಂತ ಕೋವಿಡ್‌ ಲಾಕ್‌ಡೌನ್‌ ಜಾರಿಯಾಯಿತು. ಅಷ್ಟರಲ್ಲಿ ಸರ್ಕಾರಿ ರಜದಿನಗಳು ಭಾನುವಾರ ಎಂಬುವುದು ಸೇರಿದಂತೆ ವಿವಿಧ ಕಾರಣಗಳಿಂದ ಸಾರಿಗೆಯ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

ಹೀಗಾಗಿ ಸುಮಾರು ಎರಡು ತಿಂಗಳುಗಳ ಕಾಲ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದರು ಲಾಕ್‌ಡೌನ್‌ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ಕೆಕೆಆರ್‌ಟಿಸಿ ಬೀದರ್‌ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ನೌಕರರಿಗೆ ದಂಡದ ರೂಪದಲ್ಲಿ ಅವರ ಒಂದು ತಿಂಗಳ ವೇತನವನ್ನೇ ಕಸಿದುಕೊಳ್ಳುವ ರೀತಿ ಆದೇಶ ಹೊರರಡಿಸಿದ್ದಾರೆ.

ಈ ನಾರಾಯಣ ಗೌಡಗೇರಿ ಅವರಿಗೆ ಲಾಕ್‌ಡೌನ್‌ಜಾರಿಯಾಗಿ ಬಸ್‌ಗಳು ರಸ್ತೆಗಳಿಯದಿದ್ದರೂ ನೌಕರರು ಯಾವ ಕೆಲಸ ಮಾಡಬೇಕಿತ್ತು. ಈತ ತನಗೆ ಅಧಿಕಾರ ಇದೆ ಎಂದು ನೌಕರರಿಗೆ ತನಗೆ ಇಷ್ಟ ಬಂದ ರೀತಿ ದಂಡ ಹಾಕುವ ಮೂಲಕ ದರ್ಪ ಮೆರೆಯುತ್ತಿದ್ದಾನೆ.

ಈ ವಿಭಾಗೀಯ ನಿಯಂತ್ರಣಾಧಿಕಾರಿ ನೌಕರರ ಬಗ್ಗೆ ಎಷ್ಟು ತಾತ್ಸಾರ ಹೊಂದಿದ್ದಾನೆ ಎಂಬುವುದಕ್ಕೆ ಈತ ಬೀದರ್‌ಘಟಕ -2ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಮಾರುತಿ ಅವರಿಗೆ ದಿನಾಂಕ 07-4-2021 ರಿಂದ ನಡೆದ ಅನಿರ್ದಿಷ್ಟವಾದ ಮುಷ್ಕರದ ಸಮಯದಲ್ಲಿ ಕರ್ತವ್ಯಕ್ಕೆ 07-04 2021 ರಿಂದ 18-06-2021 ರ ವರೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದೀರಿ ಎಂದು ಹೇಳಿ ಮಾರುತಿಯವರ 25 ದಿನದ ವೇತನವನ್ನು ದಂಡವಾಗಿ 60 ಕಂತುಗಳಲ್ಲಿ ಕಡಿತಗೊಳಿಸಲು ಆದೇಶಿಸಿದ್ದಾರೆ.

ಮಾರುತಿ ಒಬ್ಬರಿಗೆ ಅಲ್ಲ ಅದೇ ಡಿಪೋನ ಮತ್ತೊಬ್ಬ ಚಾಲಕ ಪ್ರೇಮ ಕುಮಾರ್‌ಎಂಬುವರಿಗೆ 22 ದಿನಗಳ ವೇತನವನ್ನು ದಂಡವಾಗಿ 60 ಕಂತುಗಳಲ್ಲಿ ಕಡಿತಗೊಳಿಸಲು ಆದೇಶಿಸಿದ್ದಾರೆ.

ಅಂದರೆ ಈ ಅಧಿಕಾರಿಗೆ ಮಾನವೀಯತೆ ಎಂಬುವುದೆ ಇಲ್ವಾ? ಲಾಕ್‌ಡೌನ್‌ಸಮಯದಲ್ಲಿ ಯಾವ ನೌಕರರು ಕೆಲಸ ಮಾಡಿದ್ದಾರೆ? ಇದನ್ನು ಹೇಳಲಿ ಈ ಅಧಿಕಾರಿ ನೋಡೋಣ. ಲಾಕ್‌ಡೌನ್‌ಮಾಡಿದ್ದು ರಾಜ್ಯ ಸರ್ಕಾರ. ಅಂದರೆ ಈ ಚಾಲಕರು ಗೈರಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಸರ್ಕಾರ. ಹಾಗಿದ್ದರೆ ಸರ್ಕಾರಕ್ಕೆ ಇವರು ದಂಡ ಹಾಕಬೇಕು. ಅದನ್ನು ಬಿಟ್ಟು ಚಾಲಕರಿಗೆ ದಂಡಹಾಕುವುದಕ್ಕೆ ಇವರಿಗೆ ಏನು ನೈತಿಕತೆ ಇದೆ.

ಈ ರೀತಿ ನೌಕರರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದರೆ ಇವರೆಗೆ ಏನು ಸಿಗುತ್ತದೆ. ಈ ಹಿಂದಿನಿಂದಲೂ ಮುಷ್ಕರ ಮಾಡುವುದು ನೌಕರರು. ಆದರೆ ಏನು ಮಾಡದೆ ವೇತನ ಹೆಚ್ಚಿಸಿಕೊಳ್ಳುವುದು ಈ ಅಧಿಕಾರಿಗಳು. ಆದರೂ ಈ ನೌಕರರಿಂದ ನಮಗೇನು ಲಾಭವಾಗಿಲ್ಲ ಎಂಬಂತೆ ಅವರ ಮೇಲೆಯೇ ಗೂಬೆ ಕೂರಿಸಿ ವಜಾ, ಅಮಾನತು, ವರ್ಗಾವಣೆ ಮಾಡಿ ವಿಕೃತಿ ಮೇರೆಯುವ ಚಾಳಿ ಸಾರಿಗೆಯ ಕೆಲ ಅಧಿಕಾರಿಗಳಿಗೆ ಹಿಂದಿನಿಂದಲೂ ಬಂದು ಬಿಟ್ಟಿದೆ.

ಇನ್ನು ನಾನು ಮೇಲಧಿಕಾರಿ ನಾನು ಹೊರಡಿಸಿದ ಆದೇಶವೇ ಅಂತಿಮ ನೌಕರ ನಾನು ಹೇಳಿದಂತೆ ಕೇಳಬೇಕು ಎಂಬ ದುರಹಂಕಾರ ಕೂಡ ಸಾರಿಗೆಯ ಹಲವು ಅಧಿಕಾರಿಗಳಲ್ಲಿ ತುಂಬಿ ತುಳುಕುತ್ತಿದೆ. ಇವರ ಅಹಂಕಾರಕ್ಕೆ ಈಗಾಗಲೇ ಹತ್ತಾರು ನೌಕರರು ಜೀವವನನ್ನೇ ಕಳೆದುಕೊಂಡಿದ್ದಾರೆ, ಮಂಗಳೂರಿನಲ್ಲಿ, ಪಾವಗಡದಲ್ಲಿ ಬೆಂಗಳೂರಿನಲ್ಲಿ, ಕಲಬುರಗಿಯಲ್ಲಿ ಹೀಗೆ ಎಲ್ಲಕಡೆಯೂ ಈ ಅಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಈ ಅಧಿಕಾರಿಗಳಿಗೆ ಕರುಣೆ ಅನ್ನೋದೆ ಇಲ್ಲವಾಗಿದೆ.

ಇನ್ನು 100-200 ರೂ. ದಂಡ ಹಾಕಿ ಎಚ್ಚರಿಕೆ ನೀಡಿ ನೌಕರರಿಂದ  ಕೆಲಸ ತೆಗೆದುಕೊಳ್ಳುವ ಬದಲಿಗೆ ಈ ರೀತಿ ಸುಲಿಗೆ ಮಾಡುವ ಹಂತಕ್ಕೆ ಅಧಿಕಾರಿಗಳ ಮನಸ್ಸು ತಲುಪಿರುವುದು ಸಮಾಜ ಎತ್ತ ಸಾಗುತ್ತಿದೆ ಎಂಬುವುದನ್ನು ಪ್ರಶ್ನಿಸುವಂತಿದೆ. ಇಂಥ ದುರಾಡಳಿತ ಮಾಡುವ ಅಧಿಕಾರಿಗಳ ಆದೇಶಕ್ಕೆ ಧಿಕ್ಕಾರವಿರಲಿ.

ಸಂವಿಧಾನ, ಕಾನೂನು ಇರುವುದು ತಪ್ಪು ಮಾಡಿದವರನ್ನು ಎಚ್ಚರಿಸಿ ಸರಿ ದಾರಿಗೆ ಬರುವಂತೆ ಮಾಡಬೇಕು ಎಂಬ ಉದ್ದೇಶಕ್ಕೆ. ಇನ್ನು ಕಾರಾಗೃಹಗಳು (ಜೈಲುಗಳು) ವ್ಯಕ್ತಿಯ ಮನಸ್ಸನ್ನು ಪರಿವರ್ತನೆ ಮಾಡುವುದಕ್ಕೆ. ಆದರೆ, ಸಾರಿಗೆ ಅಧಿಕಾರಿಗಳು ಅವರಿರುವ ಸ್ಥಳದಲ್ಲೇ ಅಶಾಂತಿಯನ್ನು ಉಂಟು ಮಾಡುವ ಕುಕೃತ್ಯಕ್ಕೆ ಮುಂದಾಗುವುದು. ಹಸಿದವನ ಕೈಯಿಂದ ಅನ್ನ ಕಸಿದುಕೊಳ್ಳುವುದು ಸಂವಿಧಾನ ಮತ್ತು ಕಾನೂನು ವಿರೋಧಿ ನಡೆ ಅನುಸಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇವರ ನಡೆಗೆ ಕಡಿವಾಣ ಹಾಕುವಂತಹ ಸಚಿವರು ಇನ್ನು ಬಂದಿಲ್ಲದಿರುವುದು ಇದಕ್ಕೆ ಕಾರಣ.

ಇನ್ನು ಸಂವಿಧಾನದ ಆಶಯಗಳನ್ನು  ಮೊದಲು ಅರಿತುಕೊಡು ನೌಕರರನ್ನು ತಮ್ಮ ಮನೆಯ ಸದಸ್ಯರಲ್ಲಿ ಒಬ್ಬರು ಎಂಬ ದೃಷ್ಟಿಯಲ್ಲಿ ನೋಡಿ. ಆಗ ನಿಮಗೆ ತಿಳಿಯುತ್ತದೆ. ಇವರು ನಮ್ಮವರೆ ಎಂದು. ಅದನ್ನು ಬಿಟ್ಟು ಅಧಿಕಾರ ದರ್ಪ ತೋರಿದರೆ ನಿಮಗೂ ರಾತ್ರಿ ಸುಖನಿದ್ರೆ ಮಾಡಲು ಸಾಧ್ಯವಿಲ್ಲ. ಇನ್ನು ನೌಕರರಂತು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಅಧಿಕಾರಿ ನೌಕರರ ಎಂಬ ತಾರತಮ್ಯತೆ ಹೆಮ್ಮರವಾಗಿ ಬೆಳೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಬೀಳುವುದು ಎಂದು????

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC