Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಕೊಡಿ ಅನ್ನೋದು ಬಿಟ್ಟು – ಅಗ್ರಿಮೆಂಟ್ ಮಾಡಿಕೊಳ್ಳಲು ಎಲ್ಲ ನೌಕರರು ಕೈ ಜೋಡಿಸಿ: ಜಂಟಿ ಸಮಿತಿ ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಆನೇಕ ಕಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ, ಇಂದು ನಿಗಮದ ನೌಕರರೂ ಕೂಡ ಹಿಂದೆಂದೂ ಇಲ್ಲದಂತಹ ಅಪಾರವಾದ ನೋವಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಅರಿತುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಲು ಕಾರ್ಮಿಕ ಸಂಘಗಳು ಜಂಟಿ ವೇದಿಕೆ ರಚಿಸಿವೆ.

ಅದರ ಮೊದಲನೇ ಸಭೆಯನ್ನು ವಿಲ್ಸನ್ ಗಾರ್ಡನ್ನಲ್ಲಿರುವ ಕನ್ನಡ ಭವನದಲ್ಲಿ (12 -07- 2022). ಎರಡನೇ ಸಭೆಯನ್ನು ಎಐಟಿಯುಸಿ ಕಚೇರಿಯಲ್ಲೂ (22.07.2022). ಮೂರನೇ ಸಭೆಯನ್ನು ಬಸವೇಶ್ವರನಗರದಲ್ಲಿರುವ ಪುಣ್ಯ ಆಸ್ಪತ್ರೆಯ ಮೇಲ್ಭಾಗದಲ್ಲೂ (28.07.2022) ಹಾಗೂ ನಾಲ್ಕನೇ ಸಭೆಯನ್ನು ಎಐಟಿಯುಸಿ ಕಚೇರಿಯಲ್ಲಿ (02.08.2022) ನಡೆಸಲಾಗಿದೆ.

ನಾಲ್ಕನೇ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳು ನೌಕರರ ಆಶೋತ್ತರಗಳಿಗೆ ಒಟ್ಟಾಗಿ ಸ್ಪ೦ದಿಸಿ, ಕಾರ್ಮಿಕರ ನೋವುಗಳನ್ನು ನಿವಾರಿಸಲು ಹಾಗೂ ಸಮಾಧಾನಕರವಾದ ವೇತನ ಪರಿಷ್ಕರಣೆ ಮಾಡಲು ಸಲಹೆ ಸೂಚನೆಗಳ ಬಗ್ಗೆ ಚರ್ಚೆ ನಡೆಸಿದವು.

ಈ ಸಭೆಗೆ ಪ್ರತಿಯೊಂದು ಕಾರ್ಮಿಕ ಸಂಘಟನೆಯಿಂದಲೂ ಇಬ್ಬರು ಪ್ರತಿನಿಧಿಗಳು ಭಾಗವಹಿಸುವಂತೆ ಆಹ್ವಾನಿಸಲಾಗಿತ್ತು. ಕೂಟಕ್ಕೆ ಸೇರಿದ ಪ್ರತಿನಿಧಿಗಳು ಮೊದಲನೆ ಅಂಶವಾಗಿ ವಜಾ ಆಗಿರುವ ಎಲ್ಲ ಕಾರ್ಮಿಕರನ್ನೂ ಸಂಸ್ಥೆಗೆ ತೆಗೆದುಕೊಳಬೇಕೆಂದು ಅದಾದ ನಂತರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಆಗಬೇಕೆಂದು ಒತ್ತಾಯಿಸಿದರು.

ಆದರೆ, ಸುಮಾರು ಅರವತ್ತು ವರ್ಷಕ್ಕೂ ಹೆಚ್ಚು ಕಾಲ ವೈವಿಧ್ಯಮಯವಾದ, ಇತಿಹಾಸವಿರುವ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳು ಹಲವಾರು ಹೋರಾಟಗಳ ಮೂಲಕ ಕೈಗಾರಿಕಾ ಒಪ್ಪಂದಗಳನ್ನು ಮಾಡಿವೆ.

ಈ ಸಂದರ್ಭಗಳಲ್ಲಿ ಆಡಳಿತ ವರ್ಗವು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ನಾಯಕರನ್ನು ಅಕ್ರಮ ವರ್ಗಾವಣೆ ಮಾಡಿದೆ. ಆಮಾನತು, ಕೆಲಸದಿಂದ ವಜಾ, ಸೆರೆಮನೆಗೆ ಕಳಿಸಿದೆ ಮತ್ತು ಸಿವಿಲ್ ನ್ಯಾಯಾಲಯಗಳಿಂದ ನೂರಾರು ಇನ್ಜಂಕ್ಷನ್ಗಳನ್ನು ತಂದಿದೆ. ನೂರಾರು ಸುಳ್ಳು ದೂರುಗಳ ಮೇಲೆ ಪೊಲೀಸ್ ಮೊಕದ್ದಮೆಗಳನ್ನು ಹೂಡಿದೆ.

ಇಷ್ಟೆಲ್ಲ ದಮನಕಾರಿ ಕ್ರಮಗಳನ್ನು ತೆಗೆದುಕೊಂಡು ಪ್ರಚೋದನಕಾರಿ ಸನ್ನಿವೇಶವನ್ನು ಆಡಳಿತ ಮಂಡಳಿ ಸೃಷ್ಟಿಸಿದ್ದರೂ ಇಲ್ಲಿನ ಕಾರ್ಮಿಕ ಚಳವಳಿಯ ನಾಯಕತ್ವ, ತನ್ನ ವಿವೇಕ ಮತ್ತು ಪ್ರಬುದ್ಧತೆಯನ್ನು ತೋರಿಸಿ ನೌಕರ ವರ್ಗದ ವೇತನಕ್ಕೆ ಪ್ರಾಮುಖ್ಯತೆ ಕೊಟ್ಟಿದೆ.

ಈ ಕಾರ್ಯಕರ್ತರ ತ್ಯಾಗ, ಬಲಿದಾನಗಳಿಂದಲೇ ನೌಕರ ವರ್ಗವು ಸಾಮೂಹಿಕವಾಗಿ ವೇತನ -ಹೆಚ್ಚಳ ಮತ್ತು ಇತರ ಸೌಲಭ್ಯಗಳನ್ನು ಪಡೆದಿದೆ. ಅದೇ ಸಂದರ್ಭದಲ್ಲಿ, ಎಕ್ಸಿಮೈಸೇಷನ್ ವಿರುದ್ಧ ಹೋರಾಟ ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಆದ್ದರಿಂದ ಜಂಟಿ ಸಮಿತಿಯ ಬಹುತೇಕ ಸಂಘಗಳು ನ್ಯಾಯವಾದ ವೇತನ ಹೆಚ್ಚಳಕ್ಕೆ ಆದ್ಯತೆ ಕೊಡಬೇಕೆಂದು ಹಾಗೂ ಜೊತೆಜೊತೆಯಲ್ಲೇ ಅಕ್ರಮ ಶಿಕ್ಷೆಗೆ ಗುರಿಯಾಗಿರುವ ನೌಕರರನ್ನು ವಾಪಸ್ ತರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಆದರೆ ಕೂಟದ ನಾಯಕತ್ವ ಇದನ್ನು ಸಂಪೂರ್ಣವಾಗಿ ವಿರೋಧಿಸಿದೆ ಹಾಗೂ ಸಂಸ್ಥೆಯಿಂದ ಹೊರಗಿರುವವರನ್ನು ಒಳಗೆ ತರದಿದ್ದರೆ ಯಾವುದೇ ರೀತಿಯ ವೇತನ ಹೆಚ್ಚಳಕ್ಕೂ ಅದು ಸಿದ್ಧವಿಲ್ಲವೆಂದು ತಿಳಿಸಿದೆ.

ಅಲ್ಲದೆ ಈ ಸಭೆ ನಡೆಯುತ್ತಿದ್ದ ವೇಳೆ 20ಕ್ಕೂ ಹೆಚ್ಚು ಕೂಟದ ಕಾರ್ಯಕರ್ತರು” ಎಐಟಿಯುಸಿ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಬಾಯಿಗೆ ಬಂದಂತೆ ಕೂಗುತ್ತ ಎಐಟಿಯುಸಿ ಅಧ್ಯಕ್ಷರ ವಿರುದ್ಧ ವೈಯಕ್ತಿಕವಾಗಿ ದೂಷಿಸುತ್ತ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದರು.

ಜಂಟಿ ಸಮಿತಿ ಸಭೆ ನಡೆಯದಂತೆ ಅಸಹ್ಯವಾಗಿ ಕಿರುಚಾಡುತ್ತಿದ್ದರು. ಸಭೆಯಲ್ಲಿದ್ದ ಅವರ ನಾಯಕರು ಯಾವುದೇ ರೀತಿಯಲ್ಲೂ ಅವರ ಸಹಪಾಟಿಗಳು ಆಶಿಸ್ತಿನ ಕ್ರಮವನ್ನು ನಿಲ್ಲಿಸುವುದಕ್ಕಾಗಲೀ ತಡೆಯುವದಕ್ಕಾಗಲೀ ಅಥವಾ ಸಭೆಯನ್ನು ಶಾಂತಿಯುತವಾಗಿ ನಡೆಸುವುದಕ್ಕಾಗಲೀ ಪ್ರಯತ್ನ ಪಡಲಿಲ್ಲ.

ಕಚೇರಿಯ ಒಳ ಹೊರಗೂ ಸಾಕಷ್ಟು ಗದ್ದಲಗಳನ್ನು ಮಾಡಿ ಸಭೆ ನಡೆಯದಂತೆ ಗೊಂದಲ ಉಂಟುಮಾಡಿದರು. ಕೂಟದವರೆಲ್ಲರೂ ಅರಚಾಡುತ್ತ ಹೊರಗೆ ಹೋದರು. ತದನಂತರ ಅವರ ಸಾಮಾಜಿಕ ಜಾಲತಾಣಗಳಲ್ಲಿ, ಎಐಟಿಯುಸಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರೆಂದು ಹಾಗೂ ಜಂಟಿ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅಪಪ್ರಚಾರ ನಡೆಸಿದ್ದಾರೆಂದು ತಿಳಿದುಬಂದಿದೆ.

ಇದರಿಂದ ನಮ್ಮ ಸ್ಪಷ್ಟವಾಗಿರುವುದು ಏನೆಂದರೆ ಕೂಟದ ನಾಯಕರಿಗೆ ಸಾರಿಗೆ ನಿಗಮಗಳಲ್ಲಿ ಬೆಂದು ಬಸವಳಿದ ನೌಕರರ ಬಗ್ಗೆ ಯಾವುದೇ ಕಳಕಳಿಯಿಲ್ಲ ಮತ್ತು ಅವರಿಗೆ ಪರಿಹಾರ ಕೊಡಲು ಯಾವುದೇ ರೀತಿಯ ಒಪ್ಪಂದ ಬೇಕಿಲ್ಲ. ಈ ನಾಯಕತ್ವವು, ತನ್ನ ಸ್ವಾರ್ಥಕ್ಕಾಗಿ ಕಾರ್ಮಿಕರ ಹಿತಾಸಕ್ತಿಗಳನ್ನು ಹಾಗೂ ಸಂಸ್ಥೆಯನ್ನೂ ನಾಶ ಮಾಡಲು ಹೊರಟಿದೆ. ಕೂಟದವರ ಇಂತಹ ಧೋರಣೆಯಿಂದ ಆಡಳಿತ ವರ್ಗಕ್ಕೆ ಸಂತೃಪ್ತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹೀಗಾಗಿ ನಮ್ಮ ಅಭಿಪ್ರಾಯದಲ್ಲಿ ಸಾರಿಗೆ ನಿಗಮಗಳಲ್ಲಿರುವ ಸಮಸ್ತ ನೌಕರರೂ ಒಂದಾಗಿ ಜಂಟಿ ಸಮಿತಿಯ ಬೇಡಿಕೆಗಳಿಗೆ ಹಾಗೂ ಈ ಬೇಡಿಕೆಗಳ ಈಡೇರಿಕೆಗಾಗಿ ಮುಂದೆ ರೂಪಿಸಲಿರುವ ಎಲ್ಲ ಚಳವಳಿಗಳಿಗೂ ಸಂಪೂರ್ಣ ಬೆಂಬಲ ಕೊಡುವುದರ ಜೊತೆಗೆ ಈ ಚಳವಳಿಯಲ್ಲಿ ಭಾಗವಹಿಸಬೇಕೆಂದು ಕೂಟದ ಪದಾಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಂಟಿ ಸಮತಿ ಪದಾಧಿಕಾರಿಗಳು ಕರೆ ನೀಡಿದ್ದಾರೆ.

Leave a Reply

error: Content is protected !!
LATEST
ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌