Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಕರ್ನಾಟಕ ರಾಜ್ಯದಾದ್ಯಂತ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿ ಅದೇಶ ಹೊರಡಿಸಿದ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ “ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ” ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರ ಕಳೆದ ಜುಲೈ 28ರಂದು ಆದೇಶ ಹೊರಡಿಸಿದೆ.

ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ 31.12.2021ರಂದು ಪ್ರಕಟಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ಕಾಯ್ದೆ ಸಂಖ್ಯೆ: XI) ರ ಕಲಂ 3(1) (ಬಿ) ಮತ್ತು 5 (1) (ಬಿ) ಖಂಡದ ಮೇರೆಗೆ ಬಾಧಿತರಾಗುವ ಸಂಬಂಧವಿರುವ ವ್ಯಕ್ತಿಗಳ ಗಮನಕ್ಕೆ ತಂದು, ಅವರಿಂದ ಸಲಹೆ/ ಆಕ್ಷೇಪಣೆಗಳನ್ನು ಸ್ವೀಕರಿಸಲು ಎರಡು ತಿಂಗಳ ಕಾಲಾವಕಾಶವನ್ನು ನೀಡಿತ್ತು. ಸ್ವೀಕೃತಗೊಂಡ ಸಲಹೆ/ ಅಕ್ಷೇಪಣೆಗಳು ಮತ್ತು ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿತ್ತು.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಸಭೆಯಲ್ಲಿ, ಸ್ವೀಕೃತವಾಗಿದ್ದ ಸಲಹೆ / ಆಕ್ಷೇಪಣೆಗಳ ಕುರಿತು ಚರ್ಚಿಸಿ, ಅದರನ್ವಯ, ಸಭೆಯ ನಡವಳಿಯಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ಕಾಯ್ದೆ ಸಂಖ್ಯೆ: XI) ರ ಕಲಂ 3(1) (ಬಿ) ಮತ್ತು 5 (1) (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ಈ ಹಿಂದಿನ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ರಾಜ್ಯಾದ್ಯಂತ “ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತ ಕನಿಷ್ಠ ವೇತನವನ್ನು ಈ ಅಧಿಸೂಚನೆಯ ಅನುಸೂಚಿಯಲ್ಲಿ ಇರುವಂತೆ ಪರಿಷ್ಕರಿಸಿದೆ.

ಮೇಲ್ಕಂಡ ಕನಿಷ್ಠ ವೇತನ ದರಗಳನ್ನು ಸರ್ಕಾರವು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನಿಗದಿಪಡಿಸಿದ್ದು, ಈ ಎಲ್ಲ ಷರತ್ತುಗಳನ್ನು ಯಥಾವತ್ತಾಗಿ ಉದ್ಯೋಗದಾತರು ಪಾಲಿಸಬೇಕಿದೆ.

1. ವ್ಯತ್ಯಾಸವಾಗುವ ತುಟ್ಟಿಭತ್ಯೆ: ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ ಹನ್ನೆರಡು (12) ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು, ಅಲ್ಲದೇ, ಗ್ರಾಹಕ ಬೆಲೆ ಸೂಚ್ಯಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ.

ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ’ (ಜನವರಿ 2620 ರಿಂದ ಡಿಸೆಂಬರ್ 2020) ರ ಸರಾಸರಿ ಆಧಾರದ ಮೇಲೆ 2021 ಏಪ್ರಿಲ್ 1 ನೇ ತಾರೀಖಿನಿಂದ ಜಾರಿಗೆ ಬರುತ್ತದೆ. ಗ್ರಾಹಕ ಬೆಲೆ ಸೂಚ್ಯಾಂಕ 7616 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ ನಾಲ್ಕು (4) ಪೈಸೆಯಂತ ತುಟ್ಟಿ ಭತ್ಯೆಯನ್ನು ಪಾವತಿಸತಕ್ಕದ್ದು.

ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡುವ ವಿಧಾನ: ಅ) ಮಾಸಿಕ ವೇತನವನ್ನು ಪಡೆಯುವವರು:

ತಿಂಗಳ ತುಟ್ಟಿಭತ್ಯೆ = ಪ್ರತಿ ವರ್ಷ ಹೆಚ್ಚಾಗುವ ಅಥವಾ ಕಡಿಮೆಯಾಗುವ ಗ್ರಾಹಕ ಬೆಲೆ

ಸೂಚ್ಯಾಂಕದ ಅಂಶಗಳು (ಸಿ.ಪಿ.ಐ) 1 ತುಟ್ಟಿಭತ್ಯೆಯ ದರ x 30 ದಿನಗಳು

ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ಮಾಸಿಕ ವೇತನ ದರಗಳನ್ನು ಇಪ್ಪತ್ತಾರು (26) ದಿನಗಳಿಂದ ವಿಭಾಗಿಸಿ, ನಾಲ್ಕು (4) ರಜಾ ದಿನಗಳಿಗೆ ವೇತನವನ್ನು ನೀಡುವುದೂ ಸೇರಿದಂತೆ ಈ ಕೆಳಕಂಡಂತ ಲೆಕ್ಕ ಹಾಕತಕ್ಕದ್ದು. ಭಾಗಿಸಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು..

ಆ) ದಿನಗೂಲಿ ವೇತನ ಪಡೆಯುವವರು :  ದಿನದ ತುಟ್ಟಿಭತ್ಯೆ = ಪ್ರತಿ ವರ್ಷ ಹೆಚ್ಚಾಗುವ ಅಂಶಗಳು » ತುಟ್ಟಿಭತ್ಯೆಯ ದರ x 30ದಿನಗಳು

2. ಮಹಿಳೆಯರು, ಪುರುಷರು, ತೃತೀಯ ಲಿಂಗಿಗಳು ಮತ್ತು ವಿಕಲಚೇತನರು ಒಂದೇ ರೀತಿಯ ಹಾಗೂ ಸಮ ಪ್ರಮಾಣದ ಕೆಲಸವನ್ನು ನಿರ್ವಹಿಸಿದ ಸಂದರ್ಭಗಳಲ್ಲಿ ಎಲ್ಲರಿಗೂ ಸಮಾನ ದರದ ವೇತನಗಳನ್ನು ಉದ್ಯೋಗದಾತರು ಸಂದಾಯ ಮಾಡತಕ್ಕದ್ದು.

3. ಅಧಿಸೂಚನೆಯಲ್ಲಿ ವರ್ಗವನ್ನು ನಮೂದಿಸದೆ ಇರುವ ವರ್ಗಗಳ ಕಾರ್ಮಿಕರಿಗೆ ಅದೇ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಇತರೆ ವರ್ಗದ ಕಾರ್ಮಿಕರಿಗೆ ಪಾವತಿ ಮಾಡುತ್ತಿರುವ ವೇತನವನ್ನು ಸಂದಾಯ ಮಾಡತಕ್ಕದ್ದು.

4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು, ಕಾರ್ಮಿಕರನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಕಡಿಮೆ ಅವಧಿಗೆ ಅನುಗುಣವಾಗಿ ವೇತನವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.

5. ಸಂಸ್ಥೆಯಲ್ಲಿ ನಿಗದಿಪಡಿಸಿರುವ ವಾರದ ರಜೆ ಅಥವಾ ಹಬ್ಬದ ರಜಾ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಪಾವತಿ ಮಾಡತಕ್ಕದ್ದು.

6. ಕೆಲಸಗಾರರು ದಿನದ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ನಿರ್ವಹಿಸಿದಲ್ಲಿ ಅಂತಹ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡು ಪಟ್ಟು ವೇತನವನ್ನು ಪಾವತಿಸತಕ್ಕದ್ದು.

7. ಟ್ರೈನಿಗಳಿಗೆ ಆ ವರ್ಗದ ನೌಕರರು ಪಡೆಯುತ್ತಿರುವ ವೇತನದ ಪ್ರತಿಶತ 75 ರಷ್ಟು ವೇತನವನ್ನು ಶಿಷ್ಯ ವೇತನವನ್ನಾಗಿ ಪಾವತಿಸತಕ್ಕದ್ದು.

8. ನೌಕರರ ವೇತನವನ್ನು ಚೆಕ್‌ಮೂಲಕ ಪಾವತಿಸುವುದು ಅಥವಾ ನೌಕರರ ಬ್ಯಾಂಕ್‌ಖಾತೆಗೆ ನೇರವಾಗಿ ಜಮೆ ಮಾಡತಕ್ಕದ್ದು.

9. ಒಂದು ದಿನದ ಕೆಲಸ ಎಂದರೆ ಎಂಟು (8) ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು, ಕಾರ್ಮಿಕರನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ, ಅಂತಹ ಕಡಿಮೆ ಅವಧಿಗೆ ಅನುಗುಣವಾಗಿ ಕನಿಷ್ಠ ವೇತನವನ್ನು ಕರ್ನಾಟಕ ಕನಿಷ್ಠ ವೇತನ ನಿಯಮಗಳು, 1958ರ ನಿಯಮ 27 (4) ರನ್ವಯ ಗಂಟೆಯ ಆಧಾರದ ಮೇಲೆ ಲೆಕ್ಕ ಹಾಕಬೇಕು ಎಂದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕಾರ್ಮಿಕ ಇಲಾಖೆಯ (ಕನಿಷ್ಠ ವೇತನ) 2ನೇ ಪೀಠಾಧಿಕಾರಿ ಎ.ಉಮಾದೇವಿ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!
LATEST
ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌