ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ ಮಾಡಿದ್ದು, ಅದು ಇಂದಿನಿಂದ (ಆ.26) ಜಾರಿಗೆ ಬರುವಂತೆ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಕೇಂದ್ರ ಸಂಚಾರ ಸಿಬ್ಬಂದಿ ಆದೇಶ ಸಂಖ್ಯೆ: 3333 ದಿ-02/07/2022 ಮತ್ತು ಕೇಂದ್ರ ಸಂಚಾರ ಸಿಬ್ಬಂದಿ ಆದೇಶ ಸಂಖ್ಯೆ:3349 ದಿ:10/08/2022, 3) ಕೇಂದ್ರ ಸಂಚಾರ ಸಿಬ್ಬಂದಿ ಆದೇಶ ಸಂಖ್ಯೆ:3360 ದಿ:22/08/2023 ಹಾಗೂ ಕೇಂದ್ರ ಸಂಚಾರ ಸಿಬ್ಬಂದಿ ಆದೇಶ ಸಂಖ್ಯೆ 3363 ದಿ:23/08/2022.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕ.ರಾ.ರ.ಸಾ.ನಿಗಮದ ಚಾಲನಾ ಸಿಬ್ಬಂದಿಗಳನ್ನು ಉಲ್ಲೇಖಿತ ಆದೇಶಗಳಲ್ಲಿ ಪರಸ್ಪರ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲಾಗಿದೆ.
ಈ ಚಾಲನಾ ಸಿಬ್ಬಂದಿಗಳನ್ನು ವಿಭಾಗಗಳಿಂದ ಬಿಡುಗಡೆಗೊಳಿಸಲು ವಿಳಂಬವಾಗುತ್ತಿರುವ ಕಾರಣ ವಿಭಾಗಳಿಂದ ಬಿಡುಗಡೆಗೊಳಿಸುವಂತೆ ಕೋರಿ ಚಾಲನಾ ಸಿಬ್ಬಂದಿಗಳು ಕೇಂದ್ರ ಕಚೇರಿಗೆ ಬಂದು ಮನವಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಆದೇಶಗಳಲ್ಲಿ ಪರಸ್ಪರ ವರ್ಗಾವಣೆಗೊಂಡಿರುವ ಚಾಲನಾ ಸಿಬ್ಬಂದಿಗಳನ್ನು (ಈಗಾಗಲೇ ಬಿಡುಗಡೆಗೊಂಡಿರುವವರನ್ನು ಹೊರತುಪಡಿಸಿ) 26-08-2022 ರಿಂದ ಜಾರಿಗೆ ಬರುವಂತೆ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸಲಾಗಿದೆ. ಸದರಿ ಚಾಲನಾ ಸಿಬ್ಬಂದಿಗಳು ವರ್ಗಾಯಿಸಿ ನಿಯೋಜಿಸಿರುವ ವಿಭಾಗದಲ್ಲಿ ಕಾರ್ಯ ವರದಿ ಮಾಡಿಸಿಕೊಳ್ಳುವುದು ಎಂದು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊಡಿಸಿದ್ದಾರೆ.
ಹೀಗಾಗಿ ಪರಸ್ಪರ ವರ್ಗಾವಣೆಗೊಂಡು ಹೋಗಲಾಗದೆ ಕಾಯುತ್ತಿದ್ದ ನೌಕರರು ಇಂದೇ ತಾವು ವರ್ಗಾವಣೆಗೊಂಡಿರುವ ಸ್ಥಳಕ್ಕೆ ಹೋಗಿ ಕಾರ್ಯ ವರದಿ ಮಾಡಿಸಿಕೊಳ್ಳಬಹುದಾಗಿದೆ. ವರ್ಗಾವಣೆಗೊಂಡರೂ ನಿಯೋಜಿಸಿದ ಸ್ಥಳಕ್ಕೆ ಹೋಗಲಾರದೆ ಸಮಸ್ಯೆಯಲ್ಲಿ ಸಿಲುಕಿದ್ದ ನೌಕರರು ಈಗ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.