ಕಾರವಾರ: ತಮಿಳುನಾಡಿನಿಂದ ಬಾಲ್ಯದ ಗೆಳೆಯ ಹಾಗೂ ಪ್ರಿಯತಮನ ಜತೆ ಓಡಿ ಬಂದಿದ್ದ ಎರಡು ಮಕ್ಕಳ ತಾಯಿಗೆ ಬುದ್ದಿವಾದ ಹೇಳಿ ಆರು ತಿಂಗಳುಗಳ ಕಾಲ ಪ್ರೇಮಿಯೊಂದಿಗೆ ಸಂಸಾರ ಮಾಡಿದ ಮಹಿಳೆಯನ್ನು ಕಾರವಾರ ಪೊಲೀಸರು ಬುದ್ಧಿಹೇಳಿ ವಾಪಸ್ ಕಳುಗಿಸಿದ್ದಾರೆ.
ಮಕ್ಕಳನ್ನು ಬಿಟ್ಟು ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಆರು ತಿಂಗಳ ಬಳಿಕ ಟ್ರ್ಯಾಕ್ ಮಾಡಿದ ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಆಕೆ ಈಗ ಬಾಲ್ಯದ ಗೆಳೆಯನ ಮಗುವಿಗೂ ತಾಯಿಯಾಗುತ್ತಿದ್ದಾಳೆ.
ತನ್ನ ಬಾಲ್ಯದ ಗೆಳತಿಯ ಪ್ರೀತಿಯ ಬಲೆಯಲ್ಲಿ ಚಿಕ್ಕಂದಿನಲ್ಲೇ ಸಿಲುಕಿಕೊಂಡಿದ್ದ ಯುವಕ ಆಕೆ ಎರಡು ಮಕ್ಕಳ ತಾಯಿಯಾದರೂ ಆ ಬಲೆಯಿಂದ ಹೊರಬರಲಾಗದೇ ಕೊನೆ ಆಕೆಯನ್ನು ತಮಿಳುನಾಡಿನಿಂದ ಕಾರವಾರಕ್ಕೆ ಕರೆದುಕೊಂಡು ಬಂದು ನೆಲೆಸಿದ್ದ.
ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್ ನಗರದ ನಿವಾಸಿಗಳಾದ ಅಯಿಷಾ ರೆಹಮತುಲ್ಲಾಹ (24) ಹಾಗೂ ಬೀರ್ ಮೈದಿನ್ (27) ಓಡಿ ಬಂದಿದ್ದ ಪ್ರೇಮಿಗಳು.
ಬಾಲ್ಯದಿಂದಲೂ ಇವರಿಬ್ಬರು ಸ್ನೇಹಿತರಾಗಿದ್ದು, ನಂತರ ಇವರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೂ ಪಾಲಕರು ಇವರ ಮದುವೆಗೆ ಒಪ್ಪದೆ ಬೇರೆಯವರೊಂದಿಗೆ ಮದು ಮಾಡಿಕೊಟ್ಟಿದ್ದಾರೆ. ಈ ಎರಡು ಮಕ್ಕಳಿಗೂ ತಾಯಿಯಾಗಿದ್ದಾರೆ. ಆದರೂ ಇವರ ನಡುವೆ ಪ್ರೇಮಾಂಕುರದ ಕೊಂಡಿ ಗಟ್ಟಿಯಾಗುತ್ತಲೇ ಹೋಗಿದೆ. ಹೀಗಾಗಿ ಆರು ತಿಂಗಳ ಹಿಂದೆಯೇ ಓಡಿಬಂದ ಪ್ರೇಮಿಗಳು ಕಾರವಾರದ ಸೋನಾರವಾಡದಲ್ಲಿ ನೆಲೆಸಿದ್ದರು.
ಈಗ ಆ ಮಹಿಳೆ ಪ್ರಿಯತಮನ ಮಗುವಿಗೆ ತಾಯಿಯಾಗುತ್ತಿದ್ದು, ಆಕೆಗೆ ಮೂರು ತಿಂಗಳು ಎಂದು ತಿಳಿದು ಬಂದಿದೆ. ಈ ನಡುವೆ ತನಗೆ ಇಷ್ಟವಿಲ್ಲದೇ ಪೋಷಕರ ಒತ್ತಾಯಕ್ಕೆ ಮದುವೆಯಾಗಿದ್ದಾಗಿ ಆಯಿಷಾ ಹೇಳಿಕೆ ನೀಡಿದ್ದಾರೆ. ಈ ಕಾರಣದಿಂದ ತನ್ನ ಪ್ರೇಮಿಯೊಂದಿಗೆ ಓಡಿ ಬಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಬೀರ್ ಮೈದಿನ್ ಜತೆ ಆಯಿಷಾ ಓಡಿಬಂದಿದ್ದು, ಕೆಲಸವಿಲ್ಲದ ಕಾರಣ ಹೊಟ್ಟೆ, ಬಟ್ಟೆ, ಮನೆಗಾಗಿ ಮೈದಿನ್ ಬಿಇ ಪದವೀಧರನಾಗಿದ್ದರೂ ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ.
ಇನ್ನು ಈತ ಆಯಿಷಾಳಿಗೆ ಬಾಲ್ಯದ ಗೆಳೆಯನಾಗಿದ್ದಾನೆ. ಇತ್ತ ತನ್ನ ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಮೈದಿನ್ ಹಾರಿಸಿಕೊಂಡು ಬಂದಿದ್ದ. ಆದರೆ ಪ್ರೇಮಿಗಳನ್ನು ಪತ್ತೆ ಮಾಡಿದ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಮತ್ತು ಮಹಿಳೆಯ ಮಾವನಿಗೆ ಒಪ್ಪಿಸಿದ್ದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.