CrimeNEWSನಮ್ಮಜಿಲ್ಲೆ

ಕುಡಿದು ಜಾಲಿರೈಡ್‌ಗೆ ಬಂದಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್ ದಂಪತಿ ಕಾರು ಡಿಕ್ಕಿ – ಗಲಾಟೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಡರಾತ್ರಿ ಕುಡಿದು ಕಾರಿನಲ್ಲಿ ಜಾಲಿರೈಡ್‌ಗೆ ಬಂದಿದ್ದ ದಂಪತಿ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ಅಲ್ಲದೆ ಅವರೇ ಗಲಾಟೆ ಮಾಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಭಾರೀ ಹೈಡ್ರಾಮಾ ಸೃಷ್ಟಿಸಿದ ದಂಪತಿ ಸಿಎಆರ್ ಇನ್ಸ್‌ಪೆಕ್ಟರ್ ಸಂಜೀವ್ ಮತ್ತು ಪತ್ನಿ ಉಷಾ. ಈ ಘಟನೆ ನಗರದ ಚಾಮರಾಜಪೇಟೆ ಠಾಣೆ ಎದುರೇ ನಡೆದಿದೆ.

ತಡರಾತ್ರಿ ಜಾಲಿ ರೈಡ್‍ಗೆ ಬಂದಿದ್ದು, ಉಷಾ ಕಾರು ಚಲಾಯಿಸುತ್ತಿದ್ದ ವೇಳೆ ಎದರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಚಾಮರಾಜಪೇಟೆಯ 6ನೇ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.

ಇನ್ನು ಸಂಜೀವ್ ಮತ್ತು ಪತ್ನಿ ಉಷಾ ಇಬ್ಬರು ಅಪಘಾತವೆಸಗಿದ್ದು ಅಲ್ಲದೆ ಆ ಕಾರಿನಲ್ಲಿದ್ದವರ ಜತೆ ಕಿರಿಕ್ ಮಾಡಿದ್ದಾರೆ ಎಂದು, ಜತೆಗೆ ಗಲಾಟೆ ಮಾಡಿದ್ದ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಚಾಮರಾಜಪೇಟೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಈ ವೇಳೆ ಸಂಜೀವ್ ಮತ್ತು ಪತ್ನಿ ಉಷಾ ಅವರ ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರೂ ಕುಡಿದಿರುವುದು ಪತ್ತೆ ಆಗಿದೆ. ಇನ್ಸ್‌ಪೆಕ್ಟರ್ ಸಂಜೀವ್, ಉಷಾ ಮದ್ಯಸೇವನೆ ದೃಢಪಟ್ಟ ಹಿನ್ನೆಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾಗಿದೆ.

ಅದೇ ರೀತಿ ಶುಕ್ರವಾರ ತಡರಾತ್ರಿ ಹಲಸೂರ್ ಪೊಲೀಸ್ ಠಾಣೆ ಮುಂದೆ ಟ್ರಾಫಿಕ್ ಸಿಬ್ಬಂದಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕುಡಿದು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಸಿಬ್ಬಂದಿ ಗಾಡಿ ಸೈಡಿಗೆ ಹಾಕುವಂತೆ ಹೇಳಿದ್ದಾರೆ. ಅಷ್ಟಕ್ಕೇ ಆತ ಟ್ರಾಫಿಕ್ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿ ಅವಾಚ್ಯವಾಗಿ ನಿಂದಿಸಿದ್ದನು. ಬಳಿಕ ಆತನಿಂದ ದಂಡ ಕಟ್ಟಿಸಿಕೊಂಡು ಪೊಲೀಸರು ಬಿಟ್ಟು ಕಳಿಸಿದ್ದರು.

ಇಲ್ಲಿ ಒಬ್ಬ ಜಾವಾಬ್ದಾರಿಯುತ ಸರ್ಕಾರಿ ಕೆಲಸದಲ್ಲಿ ಇರುವ ವ್ಯಕ್ತಿಯೇ ಜಾಲಿರೈಡ್‌ ಬಂದು ಈಗ ತಮ್ಮದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ದೂರು ಪ್ರತಿದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ