ಬೆಂಗಳೂರು: ಹೃದಯಾಘಾತದಿಂದ ಮಂಗಳವಾರ ರಾತ್ರಿ 10ಗಂಟೆ ಸುಮಾರಿಗೆ ಆಸ್ಪತ್ರೆ ಸೇರಿದ್ದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು 11ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ವೈದ್ಯರು ಘೊಷಣೆ ಮಾಡಿದ್ದಾರೆ. ಇನ್ನೊಂದು ಹೇಳಲೇ ಬೇಕಾದ ವಿಷಯ ವೆಂದರೆ ಅವರ ತಂದೆ ವಿಶ್ವನಾಥ್ ಕತ್ತಿ ಅವರು ಕೂಡ ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು.
ಸದನದೊಳಗೆ ಹೃದಯಾಘಾತ ಆಗುತ್ತಿದ್ದಂತೆ ವಿಶ್ವನಾಥ್ ಕತ್ತಿ ಅಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅಂದಿನ ಸಚಿವ ಡಾ.ಜೀವರಾಜ ಆಳ್ವ ಸದನದೊಳಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಸದನದ ಇತಿಹಾಸದಲ್ಲೇ ಶಾಸಕರಾದವರು ಸದನದಲ್ಲಿದ್ದಾಗ ಮೃತಪಟ್ಟದ್ದು ಅದೇ ಮೊದಲು.
ಅಂದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲ. 1984ರಲ್ಲಿ ಜನತಾ ಪಕ್ಷದ ಶಾಸಕರಾಗಿದ್ದ ವಿಶ್ವನಾಥ್ ಕತ್ತಿ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸದನದಲ್ಲೇ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದರು.
ಇನ್ನು ಸಚಿವ ಉಮೇಶ್ ಕತ್ತಿ ಅವರು ಕೂಡ ಹೃದಯಾಘಾತದಿಂದ ಅದೂ ಸಚಿವರಾಗಿದ್ದಾಲೇ ಮೃತಪಟ್ಟಿದ್ದಾರೆ. ಅಂದರೆ ತಂದೆ ಮಗ ಇಬ್ಬರೂ ಅಧಿಕಾರದಲ್ಲಿ ಇದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ. ಇದನ್ನು ಏನೆಂದು ಕರೆಬೇಕು ಎಂಬುವುದು ತಿಳಿಯದಾಗಿದೆ.