NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಪ್ರತಿತಿಂಗಳು ಒಂದನೇ ತಾರೀಖಿಗೆ ವೇತನ ಪಾವತಿ: ಅನ್ಬುಕುಮಾರ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಅಕ್ಟೋಬರ್ – 2022ರ ಮಾಹೆಯಿಂದ ಪ್ರತಿ ತಿಂಗಳ 01 ನೇ ತಾರೀಖಿನಂದು ವೇತನ ಪಾವತಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ.

ಈ ಸಂಬಂಧ ಇಂದು (ಸೆ.10) ಉಪಕ್ರಮ ಜಾರಿಗೊಳಿಸಿರುವ ಅವರು, ಸಾರಿಗೆ ಸಂಸ್ಥೆಯ ಆತ್ಮವೇ – ನಮ್ಮ ಕಾರ್ಮಿಕ ಬಂಧುಗಳು ಅವರ ಕ್ಷೇಮಾಭಿವೃದ್ಧಿ, ಹಿತಾಸಕ್ತಿಗಳನ್ನು ಕಾಡುವುದು ಹಾಗೂ ಅವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್-2022 ರ ಮಾಹೆಯಿಂದ ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಮಸ್ತ ಸಿಬ್ಬಂದಿಗಳಿಗೆ ಪ್ರತಿ ಮಾಹೆಯ ದಿನಾಂಕ 1 ರಂದೇ ವೇತನವನ್ನು ಪಾವತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಉಪಕ್ರಮಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ವೇತನ ಬಿಲ್ಲುಗಳು ತಯಾರಿಸುವಾಗ ಹಾಜರಾತಿ, ರಜೆ ಮಂಜೂರಾತಿ ಆದೇಶ, ಹೆಚ್ಚುವರಿ ಭತ್ಯೆ (ಓಟಿ) ಮುಂತಾದ ದಾಖಲಾತಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ವೇತನ ಬಿಲ್ಲನ್ನು ಸಿದ್ಧಪಡಿಸುವ ಅಗತ್ಯವಿದೆ. ಆದ್ದರಿಂದ ನಮ್ಮ ಕಾರ್ಮಿಕ ಸಿಬ್ಬಂದಿಗಳ ವೇತನ ಪಾವತಿಗಾಗಿ ತಿಂಗಳಿನ ದಿನಾಂಕ 20 ರಿಂದ 30 ರವರೆಗೆ, ಊಹಾತ್ಮಕ, ಹಾಜರಾತಿ (Assumed Attendance) ಪರಿಗಣಿಸುವ ಕಾರಣ, ಸಿಬ್ಬಂದಿಗಳು ಸದರಿ ಅವಧಿಯಲ್ಲಿ ಅನಧಿಕೃತ ಗೈರು ಹಾಜರಿ ಹಾಗೂ ರಜೆಯನ್ನು ಪಡೆಯದೆ (ಅತಿ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ) ಕರ್ತವ್ಯಕ್ಕೆ ಹಾಜರಾಗುವುದರಿಂದ ಪೂರ್ಣ ಸಂಬಳ ಪಡೆಯಲು ಅನುಕೂಲವಾಗುವುದು. ಹೀಗಾಗಿ ತಾವುಗಳು ಈ ಕ್ರಮಕ್ಕೆ ಸಕಾರತಾಕವಾಗಿ ಸ್ಪಂದಿಸುವ ಆಶಯವನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಕೋವಿಡ್ ಕಾರಣದಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾಗಿದ್ದಾಗ್ಯೂ ಸಹ, ನಿಗಮದ ಸಮಸ್ತ ಕಾರ್ಮಿಕ, ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ನೂತನ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಾರಂಭಿಕ ತಿಂಗಳುಗಳಲ್ಲಿ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಈ ಯೋಜನೆಯನ್ನು ವಿಭಾಗಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸಿಬ್ಬಂದಿಗಳು ಪ್ರತಿ ಮಾಹೆಯ ದಿನಾಂಕ 01 ರಂದೇ ವೇತನವನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಉಸ್ತುವಾರಿ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ ವ್ಯವಸ್ಥಾಪಕ ನಿರ್ದೇಶಕರು.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮ್ಮೆಲ್ಲರ ಅವಿರತ ಪರಿಶ್ರಮ ಮತ್ತು ದಕ್ಷತೆಯ ಕಾರ್ಯದಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಸಂಸ್ಥೆಯ ಕಾರ್ಯವಿಧಾನಗಳಲ್ಲಿ ಮತ್ತಷ್ಟು ಸುಧಾರಣೆ ಬದಲಾವಣೆಗಳನ್ನು ಜಾರಿಗೆ ಕಂದು ನಿಗಮದ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರತಿ ತಿಂಗಳು ಒಂದೊಂದು ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಅದರಂತೆ ಸೆಪ್ಟೆಂಬರ್ -2022ರ ತಿಂಗಳಿನ “ಸ್ವಚ್ಛತೆ ಮತ್ತು ವಾಹನ ನಿರ್ವಾಹಣಾ ಅಭಿಯಾನ ನಡೆಸಲಾಗುತ್ತಿದೆ. ಈ ತಿಂಗಳು ಅಪಘಾತ, ದುರಸ್ತಿ ಶೂನ್ಯ ಅವಘಡ, ಡಾಕಿಂಗ್‌ ನಿರ್ವಹಣೆ, ಕವಚ ದುರಸ್ತಿ, ಅರ್ಹತಾ ಪತ್ರ ನವೀಕರಣ, ಅನುಪಯುಕ್ತ ವಾಹನಗಳ ವಿಲೇವಾರಿ, ಪುನಶ್ಚೇತನ ಕಾರ್ಯ (ಇಂಜಿನ್‌, ಅಸೆಂಬ್ಲಿ ಇತರ) ಚಾಲಕರು, ಲಾಗ್‌ಶೀಟ್‌ನಲ್ಲಿ ನಮೂದಿಸಿರುವ ದುರಸ್ತಿಗಳ ನಿರ್ವಹಣೆ, ಗಿಡ ನೆಡುವುದು ಮತ್ತು ಇತರ ಸ್ವಚ್ಛತಾ ಕಾರ್ಯಗಳಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಭಿಯಾನ ಸಂಬಂಧ ಪ್ರತ್ಯೇಕ ಮಾರ್ಗಸೂಚಿಯನ್ನು ಈಗಾಗಲೇ ಹೊರಡಿಸಲಾಗಿದೆ. ಅದೆ ರೀತಿ ಅಕ್ಟೋಬರ್‌ -2022ರಲ್ಲಿ ಆದಾಯ ಹೆಚ್ಚಿಸುವುದು ಮತ್ತು ಅಪಘಾತ ರಹಿತ’ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಎಂಡಿ ಅನ್ಬುಕುಮಾರ್‌ ಹೇಳಿದ್ದಾರೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC