ವಿಜಯಪುರ: ಸಾರಿಗೆ ಸಂಸ್ಥೆಯ ವಾಹನದಲ್ಲಿ 2ಕೆಜಿಗೂ ಕಡಿಮೆ ಇರುವ ಪಾದರಕ್ಷೆ ಮಾಡಲು ಹದಮಾಡಿದ ಲೆಸರ್ಅನ್ನು ಬ್ಯಾಗ್ನಲ್ಲಿ ಇಟ್ಟು ಸಾಗಿಸುತ್ತಿದ್ದನ್ನು ಏಕೆ ಚೆಕ್ ಮಾಡಿಲ್ಲ ಎಂದು ನಿರ್ವಾಹಕನನ್ನು ಅಮಾನತು ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ದರ್ಪ ಇನ್ನು ನಿಂತಿಲ್ಲ. ಕ್ಷುಲ್ಲಕ ಕಾರಣಕ್ಕೆ ಚಾಲನಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದು ಇನ್ನು ಹೆಚ್ಚಾಗುತ್ತಲೇ ಇದೆ. ಕಳೆದ 2021ರ ಡಿಸೆಂಬರ್ 25ರಂದು ಸೊಲ್ಲಾಪುರದಿಂದ – ವಿಜಯಪುರ ಮಾರ್ಗವಾಗಿ ಚಲಿಸುತ್ತಿದ್ದ ಬಸ್ನಲ್ಲಿ ಚಮ್ಮಾರರೊಬ್ಬರು ಪಾದರಕ್ಷೆ ಮಾಡುವ ಉದ್ದೇಶದಿಂದ ಹದ ಮಾಡಿದ ಚರ್ಮವನ್ನು ಸಾಗಿಸುತ್ತಿದ್ದರು. ಇದೇ ವೇಳೆ ಬಸ್ ತಪಾಸಣೆ ಮಾಡಲು ಬಂದ ತಪಾಸಣಾ ಅಧಿಕಾರಿಗಳು ಲೆದರ್ ಇರುವ ಬ್ಯಾಗ್ ನೋಡಿ ನಿರ್ವಾಹಕನಿಗೆ ಮೆಮೊ ಕೊಟ್ಟಿದ್ದಾರೆ.
ನಿರ್ವಾಹಕ ಈರಣ್ಣ ಎಂಬುವರಿಗೆ ಡಿಸೆಂಬರ್ 25ರಂದು ಮೆಮೊ ಕೊಟ್ಟಿದ್ದರು, ಬಳಿಕ ಜನವರಿಯಲ್ಲಿ ಅಮಾನತು ಮಾಡಿದ್ದಾರೆ. ಅಮಾನತು ಮಾಡಿದ 4 ತಿಂಗಳ ಬಳಿಕ ಮುದ್ದೆಬಿಹಾಳ ಘಟಕದಿಂದ ವಿಜಯಪುರ ಘಟಕ 1ಕ್ಕೆ ವರ್ಗಾವಣೆ ಮಾಡಿ ಡ್ಯೂಟಿ ಕೊಟ್ಟಿದ್ದಾರೆ.
ನಿಗಮದಲ್ಲಿ ಪ್ರಯಾಣಿಕರ ಬ್ಯಾಗ್ ಚೆಕ್ ಮಾಡುವ ಅಧಿಕಾರವನ್ನು ನಿರ್ವಾಹಕರಿಗೆ ಕೊಟ್ಟರೆ ಅವರು ಪ್ರತಿ ಪ್ರಯಾಣಿಕರನ್ನು ಚೆಕ್ ಮಾಡುತ್ತಾರೆ. ಆದರೆ ಅಧಿಕಾರವಿಲ್ಲದಕ್ಕೆ ಅಮಾನತಿನ ಶಿಕ್ಷೆ ನೀಡುವುದು ಯಾವ ನ್ಯಾಯ. ಇದರಿಂದ ನಿರ್ವಾಹಕರು ಮಾನಸಿಕವಾಗಿ ಕಿರುಕುಳ ಅನುಭವಿಸುವ ಜತೆಗೆ ಇವರು ಫಿಕ್ಸ್ ಮಾಡುವ ಎಲ್ಲ ವಿಚಾರಣೆಗಳನ್ನು ಎದುರಿಸಬೇಕು.
ನಿರ್ವಾಹಕರು ಮಾಡದ ತಪ್ಪಿಗೆ ಈ ರೀತಿ ಶಿಕ್ಷೆ ಕೊಡೋದು, ಅಮಾನತು ಮಾಡುವುದರಿಂದ ಸಂಸ್ಥೆಗೆ ನಷ್ಟವಾಗುವುದಿಲ್ಲವೇ. ಅಲ್ಲದೆ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.
ಈ ನಿರ್ವಾಹಕ ಈರಣ್ಣ ಮಾಡದ ತಪ್ಪಿಗೆ ಈಗ ವರ್ಗಾವಣೆಗೊಂಡಿರುವ ಘಟಕಕ್ಕೆ ನಿತ್ಯ 200 ಕಿಮೀ ಬಂದು ಹೋಗಬೇಕಾಗಿದೆ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಜಾರುತ್ತಿದ್ದಾರೆ. ಹೀಗಾಗಿ ಈರಣ್ಣ ಅವರಿಗೆ ಮೊದಲೇ ಇದ್ದ ಘಟಕಕ್ಕೆ ವರ್ಗಾವಣೆ ಮಾಡಬೇಕು ಎಂದು ಕುಟುಂಬವರು ಮನವಿ ಮಾಡಿದ್ದಾರೆ.
ಇನ್ನು ವಿಜಯಪುರ ಘಟಕ 1ರಲ್ಲಿ ರಜೆ ತೆಗೆದುಕೊಳ್ಳಬೇಕು ಎಂದರೂ ಲಂಚಕೋಡಬೇಕು ಎಂಬ ಆರೋಪ ಕೇಳಿ ಬಂದಿದೆ. ಡಿಪೋ ವ್ಯವಸ್ಥಾಪಕರು ಈ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಆದರೆ ಎಟಿಎಸ್ ರೇವಣ ಸಿದ್ದಪ್ಪ, ಟಿಐ ಮಂಜುನಾಥ, ಲೋನಿ ಸೇರಿದಂತೆ ಒಟ್ಟು 6 ಮಂದಿ ಡ್ಯೂಟಿ ಕೊಡುತ್ತಾರೆ ನಾವು ಎಷ್ಟು ಮಂದಿಗೆ ಈ ರೀತಿ ಲಂಚಕೊಡಬೇಕು ಎಂದು ನೌಕರರು ಆರೋಪಿಸುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಬಗ್ಗೆ ವಿಚಾರಣೆ ನಡೆಸಿ ಘಟಕಗಳಲ್ಲಿ ನೌಕರರು ಸರಿಯಾಘಿ ಡ್ಯೂಟಿ ಮಾಡಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವಿಜಯಪುರ: ಸಾರಿಗೆ ಸಂಸ್ಥೆಯ ವಾಹನದಲ್ಲಿ 2ಕೆಜಿಗೂ ಕಡಿಮೆ ಇರುವ ಪಾದರಕ್ಷೆ ಮಾಡಲು ಹದಮಾಡಿದ ಲೆಸರ್ಅನ್ನು ಬ್ಯಾಗ್ನಲ್ಲಿ ಇಟ್ಟು ಸಾಗಿಸುತ್ತಿದ್ದನ್ನು ಏಕೆ ಚೆಕ್ ಮಾಡಿಲ್ಲ ಎಂದು ನಿರ್ವಾಹಕನನ್ನು ಅಮಾನತು ಮಾಡಿ ಬಳಿಕ ವಿಜಯಪುರ ಘಟಕಕ್ಕೆ ವರ್ಗಾವಣೆ ಮಾಡಿ ದೌರ್ಜನ್ಯ ಎಸಗಿದ ಅಧಿಕಾರಿಗಳು…. pic.twitter.com/sbhe7KeqOz
— vijayapatha@news (@vijayapatha2019) September 14, 2022