Please assign a menu to the primary menu location under menu

CrimeNEWSನಮ್ಮಜಿಲ್ಲೆನಮ್ಮರಾಜ್ಯ

ಕೆಕೆಆರ್‌ಟಿಸಿ ಅಧಿಕಾರಿಗಳ ಕಿರುಕುಳಕ್ಕೆ ನೌಕರ ಆತ್ಮಹತ್ಯೆ ಪ್ರಕರಣ : 10 ದಿನ ಕಳೆದರೂ ಆರೋಪಿಗಳ ಬಂಧಿಸದ ಪೊಲೀಸರು

25 ಸಾವಿರ ರೂ.ಗೆ ತಾನು ಕಟ್ಟಿದ ತಾಳೆಯನ್ನೇ ಮಾರಿ ಸಾರಿಗೆ ಡಿಸಿಗೆ ಹಣ ಕೊಟ್ಟ ಭೀಮಾಶಂಕರ

ವಿಜಯಪಥ ಸಮಗ್ರ ಸುದ್ದಿ
  • ಆದರೂ ಆತನ ಜೀವವನೇ ತೆಗೆದ ಅಧಿಕಾರಿಗಳು ಎಂಬ ಆರೋಪ
  • ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಕಾಲ ದೂಡುತ್ತಿರುವ ಆರಕ್ಷರ ನಡೆ ಸಂಶಯಾಸ್ಪದ

ಕಲಬುರಗಿ: ಸೇಡಂ ಘಟಕದ ನೌಕರ ಭಿಮಾಶಂಕರ್ ಅವರು ಅತ್ಮಹತ್ಯೆ ಮಾಡಿಕೊಂಡು 10ದಿನಗಳು ಕಳೆದರು ಈವರೆಗೂ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಅಧಿಕಾರಿಗಳನ್ನು ಬಂಧಿಸಿಲ್ಲ. ಆರೋಪಿಗಳ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಪೊಲೀಸರ ನಡೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.

ಆರೋಪಿ ಅಧಿಕಾರಿಗಳನ್ನು ಈ ಪೊಲೀಸರೆ ರಕ್ಷಣೆ ಮಾಡಲು ನಿಂತತ್ತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಈ ಬಗ್ಗೆ ಪಾಪ ಪತಿ ಕಳೆದು ಕೊಂಡ ಮಂಜುಳಾ ಅವರು ಪೊಲೀಸರು ಕೇಳಲು ಠಾಣೆಗೆ ಹೋದರೆ ಅವರನ್ನೇ ಗದರಿಸಿ ಕಳುಹಿಸುತ್ತಿದ್ದಾರೆ ಈ ಪೊಲೀಸರು. ಎಂತೆಂಥವರನ್ನೋ ಹಿಡಿದುಹಾಕುವ ಈ ಪೊಲೀಸರಿಗೆ ಈ ಭ್ರಷ್ಟ, ಅಧಿಕಾರಿಗಳನ್ನು ಹಿಡಿಯುವುದು ತುಂಬಾ ತ್ರಾಸವಾಗುತ್ತದೆ ಎಂಬಂತೆ ವರ್ತಿಸುತ್ತಿರುವುದು ನೋಡಿದರೆ ನ್ಯಾಯವನ್ನೇ ಇವರು  ತುಳಿಯಲು ಹೊರಟ್ಟಿದ್ದಾರೆ ಎನಿಸುತ್ತಿದೆ.

ಪೊಲೀಸರು ಸಹ ನ್ಯಾಯ ಬಿಟ್ಟು ಹಣವಂತರನ್ನು ರಕ್ಷಿಸಲು ನಿಂತುಕೊಂಡರೆ? ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನ್ಯಾಯಕೊಡಿಸುವವರು ಯಾರು. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನಿಜವಾಗಲು ಅನ್ಯಾಯವನ್ನು ಸಹಿಸಿಕೊಳ್ಳದವರಾದರೆ ಕೂಡಲೇ ಈ ಆರೋಪಿಗಳನ್ನು ಬಂಧಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

ಘಟನೆ ಏನು: ಇದೇ ಸೆ.10ರಂದು ಕೆಕೆಆರ್‌ಟಿಸಿ ಸಂಸ್ಥೆಯ ಸೇಡಂ ಘಟಕದ ನೌಕರ ಭಿಮಾಶಂಕರ್ ಅವರು ಅತ್ಮಹತ್ಯೆ ಮಾಡಿಕೊಂಡಿದ್ದು ಈ ಆತ್ಮಹತ್ಯೆಯು ಮೇಲಧಿಕಾರಿಗಳ ಕಿರುಕುಳದಿಂದ ನಡೆದಿದೆ ಎಂದು ಅವರ ಪತ್ನಿ ಮಂಜುಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್‌ ದಾಖಲಿದ್ದಾರೆ.

ಅಲ್ಲದೆ ಅಧಿಕಾರಿಗಳ ಕಿರುಕುಳದಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಅಧಿಕಾರಿಗಳು ಮಾಡಿರುವ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಜತೆಗೆ ಅಧಿಕಾರಿಗಳು ನನ್ನ ಪತಿಯನ್ನು ವರ್ಗಾವಣೆ ಮಾಡಬೇಕೆಂದರೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ವೇಳೆ ನನ್ನ ತಾಳಿಯನ್ನೇ 25 ಸಾವಿರ ರೂಪಾಯಿ ಮಾರಿ ಆ ಹಣವನ್ನು ಡಿಸಿ ಅವರಿಗೆ ನನ್ನ ಪತಿ ಭಿಮಾಶಂಕರ್ ಕೊಟ್ಟಿದ್ದರು. ಆದರೂ ಇನ್ನು 25 ಸಾವಿರ ರೂಪಾಯಿ ಕೊಟ್ಟರೆ ವರ್ಗಾವಣೆ ಮಾಡುತ್ತೇವೆ ಎಂದು ಕೆಲಸವನ್ನೂ ಸರಿಯಾಗಿ ಕೊಡದೆ ತುಂಬ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಿಷ್ಟೇ ಅಲ್ಲದೆ ‌ಪತಿ ಆತ್ಮಹತ್ಯೆ ಸಂಬಂಧ ನಾವು ಪೊಲೀಸ್‌ ಅಧಿಕಾರಿಗಳ ಬಳಿಯೂ ಹಲವು ಬಾರಿ ಹೋಗಿ ನಾವು ದೂರುಕೊಟ್ಟಿರುವ  ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೇಳಿದರೆ ಅವರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಮಂಜುಳಾ.

ಈ ಎಲ್ಲವನ್ನು ಗಮನಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಕೇಲವು ಸಮಸ್ಯೆಗಳ ನಿವಾರಣೆಗಾಗಿ ಕಲಬುರಗಿಗೆ ಭೇಟಿ ನಿಡಿದ್ದ ವೇಳೆ ಮಂಜುಳಾ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಅದರ ಜತೆಗೆ ಭೀಮಾಶಂಕರ್‌ ಆತ್ಮಹತ್ಯೆ ಪ್ರಕರಣ ಸಂಬಂಧ ವಿಚಾರಿಸಲು ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೂ ಹೋಗಿದ್ದಾರೆ. ಆದರೆ, ಅಲ್ಲಿ ಎಸ್‌ಪಿ ಅವರು ಇರಲಿಲ್ಲ. ಬಳಿಕ ಅವರ ಅಧೀನ ಅಧಿಕಾರಿಗಳನ್ನು ಭೇಟಿ ಮಾಡಿ ಭೀಮಾಶಂಕರ್‌ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಆಧ್ಯಕ್ಷ ಜಗದೀಶ್‌, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಆಗಿ ಹತ್ತು ದಿನಗಳು ಕಳೆದರು ಆರೋಪಿಗಳನ್ನು ಇನ್ನೂ ಪೊಲೀಸರು ಬಂಧಿಸಿಲ್ಲ. ಈ ಕಾರಣಕ್ಕೆ ಎಸ್ಪಿ ಅವರನ್ನು ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಆದರೆ, ಇಲ್ಲಿನ ಕೆಲ ಮುಖಂಡರು ಈ ವಿಚಾರವಾಗಿ ಬಹಳಷ್ಟು ರಾಜೀ ಮಾಡಿಸಲು ಮಾತನಾಡಿದರು. ಈಗಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಅವರ ಮನೆಯವರಿಂದ ಕೇಳಿ ನೋವಾಯಿತು ಎಂದು ಬೇಸರ ವ್ಯಕ್ತಪಡಿಸಿದ ಜಗದೀಶ್‌ ಇಂತಹ ಮಧ್ಯವರ್ತಿ ಕೆಲಸ ಬಿಡಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು ಎಂದು ಹೋರಾಡಿ. ಅದು ಬಿಟ್ಟು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಬೇಡಿ. ಎಂತಹ ಸಂದರ್ಭ ಬಂದರು ನೌಕರರ ಸಂಘ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಅಲ್ಲದೆ ನಮ್ಮ ಸಂಘದ ಗೌರವ ಅಧ್ಯಕ್ಷರಾದ ಭಾಸ್ಕರ್ ರಾವ್ ಅವರು ದೂರವಾಣಿ ಮೂಲಕ ಹಿರಿಯ ಪೊಲೀಸ್‌ ಅಧಿಕಾರಿಗಳೊಡನೆ ಚರ್ಚಿಸಿದ್ದು ಈ ವೇಳೆ ಶೀಘ್ದಲ್ಲೇ ಆರೋಪಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ ಎಂದರು.

ಇದಿಷ್ಟೇ ಅಲ್ಲದೇ ಇತರ ಸಮಸ್ಯೆಗಳ ವಿಚಾರ ಮತ್ತು ಮೃತಪಟ್ಟ ನೌಕರರ ಕುಟುಂಬಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳು, ಬರಬೇಕಿರುವ ಬಾಕಿಯನ್ನು ಆದಷ್ಟು ಬೇಗ ನೀಡಬೇಕೆಂದು ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಮನವಿ ಆಲಿಸಿದ ಅಧಿಕಾರಿಗಳು ಮೃತ ನೌಕರನ ಕುಟುಂಬಕ್ಕೆ ಬರಬೇಕಿರುವ ಎಲ್ಲ ಸೌಲಭ್ಯಗಳನ್ನು ಅತೀ ಶೀಘ್ರದಲ್ಲೇ ನೀಡುವುದಾಗಿ ಹೇಳಿದರು. ಅಲ್ಲದೆ ಕಲಬುರಗಿ ನಿಗಮದಲ್ಲಿ ಭ್ರಷ್ಟಾಚಾರ, ಕೀರುಕುಳ ಹಾಗೂ ಇದಕ್ಕೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರಿಗೆ ಕಡಿವಾಣ ಹಾಕಬೇಕು ಒತ್ತಾಯಿಸಿದ್ದಕ್ಕೂ ಇನ್ನು ಮುಂದೆ ಈ ರೀತಿ ನಡೆಯಂತೆ ಕ್ರಮ ಜರುಗಿಸುವುದಾಘಿ ತಿಳಿದ್ದಾರೆ ಎಂದರು.

ಇನ್ನು ಸಂಸ್ಥೆಯ ಯಾವೊಬ್ಬ ನೌಕರರು ಅತ್ಮಹತ್ಯೆಯಂತಹ ಘೋರ ಕೆಲಸಕ್ಕೆ ಮನಸ್ಸು ಮಾಡಬಾರದು ಎಂದು ಕೇಳಿಕೊಳ್ಳುತ್ತೇವೆ. ಮುಂದೆ ನಮಗೂ ಒಳ್ಳೆ ಕಾಲ ಬರಲಿದೆ ಎಂಬ ಆಶಾಭಾವನೆಯಿಂದಲೇ ಇರಬೇಕು ಎಂದು ಸಲಹೆ ನೀಡಿದರು.

ನೌಕರರ ಸಂಘದ ಪದಾಧಿಕಾರಿಗಳಾದ ಸುಧಾಕರ ರೆಡ್ಡಿ, ಡಿ.ರಾಮು, ಯೋಗೇಶ್‌, ನಾಗೇಂದ್ರ, ಸ್ಥಳೀಯ ನೌಕರರ ಮುಖಂಡರಾದ ದೇವರಾಜ್ ಚೌರ್ ಮತ್ತಿತರರು ಇದ್ದರು.

Leave a Reply

error: Content is protected !!
LATEST
KSRTC: ಸರಿ ಸಮಾನ ವೇತನಕ್ಕಾಗಿ ಮತ್ತೊಮ್ಮೆ ನಾಲ್ಕೂ ನಿಗಮಗಳ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಒತ್ತಾಯ ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..!