Please assign a menu to the primary menu location under menu

NEWSನಮ್ಮರಾಜ್ಯಸಂಸ್ಕೃತಿ

ಮತ್ತೆ ಸದ್ದು ಮಾಡಿದ ಹಲಾಲ್ V/S ಜಟ್ಕಾ ಕಟ್​ : ಹಿಂದುತ್ವ ಪರ ಸಂಘಟನೆಗಳಿಂದ ಅಭಿಯಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುತ್ವ ಪರ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ V/S ಜಟ್ಕಾ ಕಟ್​ (HALAL v/s JATKA Cut) ಅಭಿಯಾನ ಜೋರಾಗಿ ನಡೆದಿತ್ತು. ಇದೀಗ ಮಹಾನವಮಿ, ವಿಜಯದಶಮಿ ವೇಳೆಯಲ್ಲೂ ಇದೇ ಅಭಿಯಾನ ಮತ್ತೊಮ್ಮೆ ಸದ್ದು ಮಾಡಿದೆ.

ದಸರಾ ವೇಳೆ ಮಹಾನವಮಿಯಂದು ಮಾಂಸದ ಅಡುಗೆ ಮಾಡುವ ಸಂಪ್ರದಾಯ ಹಲವೆಡೆ ಇದ್ದರೆ, ಕೆಲವೆಡೆ ವಿಜಯದಶಮಿಯ ನಂತರ ಮಾಂಸದ ಅಡುಗೆ ಮಾಡುವ ರೂಢಿ ಇದೆ. ನಾವು ಹಿಂದವೀ‌ ಮೀಟ್ ಮಾರ್ಟ್ ಜಟ್ಕಾ ಕಟ್ ಆರಂಭ ಮಾಡಿರೋದು ವ್ಯಾಪಾರಕ್ಕಾಗಿ ಅಲ್ಲ. ಮರೆತ ಹಿಂದೂ ಧಾರ್ಮಿಕ ಶೈಲಿಯನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಲು ಜನರಿಗೆ ಪ್ರೇರಣೆ ನೀಡುತ್ತಿದ್ದೇವೆ ಎಂದು ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಹೇಳಿದ್ದಾರೆ.

ಯಾವುದೇ ಪ್ರಾಣಿಯನ್ನು ವಧೆ ಮಾಡುವ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಬಲಿ ಕೊಡುವುದು ನಮ್ಮ ಪದ್ಧತಿ. ಪಿತೃಪಕ್ಷದಿಂದ ವಿಜಯದಶಮಿಗೆ ಎಡೆ ಇಡಲು ಬಲಿ ಕೊಟ್ಟ ಮಾಂಸವನ್ನು ಇಡುವುದು ವಾಡಿಕೆ. ನಾವು ಜಟ್ಕಾ ಕಟ್ ಅಭಿಯಾನ ಆರಂಭಿಸಿದ ನಂತರ ಹಿಂದೂಗಳು ಅರಂಭಿಸಿರುವ ಮಾಂಸದ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗಿದೆ.

ಇನ್ನು ಭಗವದ್ಗೀತೆಯ 17ನೇ ಅಧ್ಯಾಯದಲ್ಲಿ ನೀನು ಯಾವುದೇ ಆಹಾರ ಸ್ವೀಕಾರ ಮಾಡು. ನನ್ನ ಹೆಸರಿನಲ್ಲಿ ಸ್ವೀಕಾರ ಮಾಡಿದರೆ ಪಾಪ ಮುಕ್ತನಾಗುವೆ ಎಂದು ಹೇಳಲಾಗಿದೆ. ಅದರಂತೆ ನಡೆಯಬೇಕು ಎನ್ನುವುದು ನಮ್ಮ ಕಾಳಜಿಯಾಗಿದೆ.

ವಿಜಯದಶಮಿಯ ಪ್ರಯುಕ್ತ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಪದ್ಮನಾಭನಗರದಲ್ಲಿ ಎರಡು ಹಿಂದವೀ ಮೀಟ್ ಮಾರ್ಟ್ ತೆರೆಯುತ್ತಿದ್ದೇವೆ. ಹಿಂದವೀ ಮೀಟ್ ಮಾರ್ಟ್​ನಲ್ಲಿ ತರಬೇತಿ ಕೊಟ್ಟ ಯುವಕರು ಮುಧೋಳ, ಬಳ್ಳಾರಿ, ತುಮಕೂರು ಸೇರಿದಂತೆ ಹಲವೆಡೆ ಅಂಗಡಿಗಳನ್ನು ತೆರೆದಿದ್ದಾರೆ ಎಂದು ವಿವರಿಸಿದರು.

ಇಂದು (ಅ 3) ಹಿಂದೂಪರ ಸಂಘಟನೆಗಳ ಮುಖಂಡರ ಸಭೆ ಮಾಡುತ್ತೇವೆ. ಜಟ್ಕಾ ಕಟ್ ಅಭಿಯಾನವನ್ನು ನಾವು ಮುಂದುವರಿಸಬೇಕಿದೆ. ಕಳೆದ ಬಾರಿ ನಾವು ಕರೆಕೊಟ್ಟ ಜಟ್ಕಾ ಕಟ್ ಅಭಿಯಾನ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ.

ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಇಂದಿನಿಂದ ಎಲ್ಲರೂ ಮನೆ ಮನೆಗೆ ತೆರಳಿ ಜಾಗೃತಿ, ಕರಪತ್ರ ಹಂಚಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತೇವೆ. ದೇವಾಲಯಗಳಿಗೆ ತೆರಳಿ ಭಕ್ತರ ಬಳಿ ಮನವಿ ಮಾಡುತ್ತೇವೆ. ನಮ್ಮವರ ಬಳಿ ನಮ್ಮ ವ್ಯವಹಾರವಿರಲಿ ಅನ್ನೋದು ನಮ್ಮ ಉದ್ದೇಶ ಎಂದು ಹೇಳಿದರು.

ಜಟ್ಕಾ – ಹಲಾಲ್ ಏನು ವ್ಯತ್ಯಾಸ?: ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂಬ ಪದದ ಅರ್ಥ ‘ಬಳಕೆಗೆ ಯೋಗ್ಯ’. ಈ ಪ್ರಕ್ರಿಯೆಯು ಕುರಾನ್‌ನ ಸಾಲುಗಳೊಂದಿಗೆ ಪ್ರಾಣಿಯನ್ನು ನಿಧಾನವಾಗಿ ವಧೆ ಮಾಡುವುದಾಗಿದೆ. ಜಟ್ಕಾ ಕಟ್ ಎಂದರೆ ವೇಗವಾಗಿ, ಒಂದೇ ಹೊಡೆತದಲ್ಲಿ ಪ್ರಾಣಿಗಳ ಹತ್ಯೆ ಮಾಡುವುದು ಇದರಿಂದಾಗಿ ಪ್ರಾಣಿ ಹೆಚ್ಚು ನೋವು ಇಲ್ಲದೆ ತಕ್ಷಣವೇ ಜೀವ ಬಿಡುತ್ತದೆ. ಇದರಲ್ಲಿ ಮುಸ್ಲಿಮರು ಹಲಾಲ್ ಅನುಸರಿಸುತ್ತಾರೆ. ಆದರೆ ಇತರ ಸಮುದಾಯಗಳು ‘ಜಟ್ಕಾ’ ವಿಧಾನಕ್ಕೆ ಆದ್ಯತೆ ನೀಡುತ್ತವೆ.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ