ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ, ಐಟಿ ಹಬ್ ಎಂದು ಕರೆಯಲ್ಪಡುವ ಬೆಂಗಳೂರು ಸ್ವಚ್ಛ ಸರ್ವೇಕ್ಷಣಾ 2022ರ ಸಮೀಕ್ಷೆಯ ಪ್ರಕಾರ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ ಈ ವರ್ಷ 15 ರ‍್ಯಾಂಕಿಂಗ್ ಕುಸಿದಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿಅಂಶಗಳನ್ನು ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ 43 ನೇ ಸ್ಥಾನದಲ್ಲಿದೆ.
ಈ ಕುರಿತಾಗಿ ಇನ್ಫೋಸಿಸ್ನ ಮಾಜಿ ನಿರ್ದೇಶಕ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಪ್ರಸ್ತುತ ಅಧ್ಯಕ್ಷ ಶ್ರೇಯಾಂಕ, ಇದು ದೊಡ್ಡ ಅವಮಾನ ಎಂದು ಬಣ್ಣಿಸುವುದರೊಂದಿಗೆ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಕಳೆದ ಬಾರಿ 10 ಸಾವಿರ ಜನರಿಂದ ಪ್ರತಿಕ್ರಿಯೆ ಪಡೆಯಲಾಗಿದ್ದು, ಈ ಬಾರಿ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಗರ ಪ್ರದೇಶದ ಸವಾಲುಗಳು ವಿಭಿನ್ನವಾಗಿರುವುದರಿಂದ ದೊಡ್ಡ ದೊಡ್ಡ ಸಿಟಿಗಳನ್ನು ಸಣ್ಣ ನಗರಗಳೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಕೇಂದ್ರದಿಂದ ನೇಮಿಸಲ್ಪಟ್ಟ ಸಲಹೆಗಾರರು ಮತ್ತು ಬಿಬಿಎಂಪಿ ನಡುವೆ ವಿವಾದವಿದ್ದು, ನಾವು ಈ ರ್ಯಾಂಕಿಂಗ್ಅನ್ನು ವಿವರವಾಗಿ ಪರಿಶೀಲಿಸುತ್ತೇವೆ ಎಂದು ಹೇಳಿದರು.
ಬಯಲು ಮುಕ್ತ ಶೌಚ ಗಮನಾರ್ಹ ಪ್ರಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮೈಸೂರು 8ನೇ ಸ್ವಚ್ಛ ನಗರವಾಗಿದೆ. ಹುಬ್ಬಳ್ಳಿ-ಧಾರವಾಡ 82ನೇ ಸ್ಥಾನದಲ್ಲಿದೆ. ಕಂಟೋನ್ಮೆಂಟ್‌ಗಳಲ್ಲಿ ಬೆಳಗಾವಿ ಕಂಟೋನ್ಮೆಂಟ್ 44ನೇ ಸ್ಥಾನದಲ್ಲಿದೆ.
ಕೇಂದ್ರದ ಸ್ಚಚ್ಛ ಸರ್ವೇಕ್ಷಣಾ ರ್ಯಾಂಕಿಂಗ್ನಲ್ಲಿ ಬೆಂಗಳೂರು ನಗರ ಕಳಪೆ ಸಾಧನೆ ಮಾಡಿದೆ. 45 ನಗರಗಳ ಪಟ್ಟಿಯಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. ಪ್ರತಿಬಾರಿ ಸ್ವಚ್ಛತಾ ವಿಚಾರದಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿದೆ. ಇದು ಅತಿದೊಡ್ಡ ನಾಚಿಕೆಗೇಡು ಎಂದು ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರೋ ನಗರಗಳ ಸ್ವಚ್ಛತೆ ಆಧರಿಸಿ ರ‍್ಯಾಂಕಿಂಗ್ ನೀಡಲಾಗುತ್ತದೆ. ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರು ಪ್ರತೀ ಬಾರಿ ಕಳಪೆ ಸಾಧನೆ ಹೊಂದುತ್ತಿದೆ.
ದೇಶದ ಏಕೈಕ ಗ್ಲೋಬಲ್ ಸಿಟಿ. ದೇಶದ ಅತಿ ಶ್ರೀಮಂತ ಸಿಟಿ, ಈಗ ಗಾರ್ಬೇಜ್ ಸಿಟಿಯಾಗಿದೆ. ಇದು ನಮಗೆಲ್ಲ ನಾಚಿಕೆಗೇಡು ಸಂಗತಿ. ನಮಗೆ ತುರ್ತು ಸುಧಾರಣೆ ಬೇಕೆಂದು ಆಗ್ರಹಿಸಿದರು. ಅಲ್ಲದೆ ತಕ್ಷಣ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿ, ಬಿ.ಎಲ್. ಸಂತೋಷ್, ಫ್ರಧಾನಿ ಕಚೇರಿಗೂ ಟ್ಯಾಗ್ ಮಾಡಿದ್ದಾರೆ.
ಇನ್ನು ನಮ್ಮ ಎಂಎಲ್ಎ, ಎಂಪಿಗಳು ವಿಫಲವಾಗಿದ್ದಾರೆ. ಹೆಚ್ಚಿನ ಎಂಎಲ್ಎಗಳು ಭ್ರಷ್ಟರು ಎಂದು ಟ್ವೀಟ್ನಲ್ಲೇ ಪೈ ಜಾಡಿಸಿದ್ದಾರೆ. ಸಿಎಂ ಬೊಮ್ಮಾಯಿ, CMO ಕರ್ನಾಟಕ, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಬಿ.ಎಲ್. ಸಂತೋಷ್, ಆರ್. ಕೆ. ಮಿಶ್ರ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ಗೆ ಪೈ ಟ್ಯಾಗ್ ಮಾಡಿದ್ದಾರೆ.