NEWS

ಮೈಸೂರು ದಸರಾ: ಚಾಮುಂಡಿದೇವಿ ಹೊತ್ತ ಅಭಿಮನ್ಯು ರಾಜಗಾಂಭೀರ್ಯದಿಂದ ಬನ್ನಿ ಮಂಟಪದತ್ತ ಹೆಜ್ಜೆ ಹಾಕಿದ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಎರಡು ವರ್ಷಗಳ ಬಳಿಕ ವಿಜೃಭಣೆಯಿಂದ ನಡೆಯುತ್ತಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ.

750 ಕೆ.ಜಿಯ ಅಂಬಾರಿಯಲ್ಲಿ ಚಾಮುಂಡಿದೇವಿಯ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಅಭಿಮನ್ಯು ಬನ್ನಿ ಮಂಟಪದತ್ತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತೊಮ್ಮೆ ರಾಜ ವೈಭೋಗಕ್ಕೆ ಸಾಕ್ಷಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ…. ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

1610ರಲ್ಲಿ ಆರಂಭಗೊಂಡ ದಸರಾ ಮಹೋತ್ಸವಕ್ಕೆ 4 ದಶಕಗಳ ಭವ್ಯ ಇತಿಹಾಸವಿದೆ. ಮೈಸೂರು ದಸರಾ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಚಿರಪರಿಚಿತ ಹಾಗೂ ಪ್ರಖ್ಯಾತಿ ಪಡೆದಿದೆ.

ಆದರೆ ಕಳೆದ ಎರಡು ವರ್ಷಗಳು ಕೊರೊನಾ ಕಾರಣಕ್ಕೆ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯದೆ ಸೊರಗಿತ್ತು. ಈ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ದಸರಾ ದಿಬ್ಬಣ ನೆರವೇರಿದೆ. ಸಾಲಂಕೃತ ಗಜಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದಾನೆ.

ಬೆಳಗ್ಗೆಯಿಂದಲೂ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಪ್ರದಾಯ ಬದ್ಧ ಕಾರ್ಯಕ್ರಮಗಳು ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಹೋದ್ಯೋಗಿಗಳ ಜತೆಗೆ ಐರಾವತ ಬಸ್ ಮೂಲಕ ಆಗಮಿಸಿ ಮಧ್ಯಾಹ್ನ 2:50ಕ್ಕೆ ನಂದಿ ಧ್ವಜಕ್ಕೆ ಪೂಜೆ ಮಾಡುವ ಮೂಲಕ ದಸರಾ ದಿಬ್ಬಣಕ್ಕೆ ಚಾಲನೆ ನೀಡಿದರು.

ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಲಾ ತಂಡಗಳ ಹಾಗೂ ಟ್ಯಾಬ್ಲೋಗಳ ಮೆರವಣಿಗೆ ಆರಂಭವಾಯಿತು. ಕೀಲುಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಹೀಗೆ ಹತ್ತು ಹಲವು ಬಗೆಯ ಕಲಾ ಪಾಂಡಿತ್ಯ ಪ್ರದರ್ಶನಗೊಂಡಿದೆ. ಸ್ತಬ್ಧ ಚಿತ್ರಗಳ ಯಾತ್ರೆಯಲ್ಲಂತೂ ಪುನೀತ್ ರಾಜ್ ಕುಮಾರ್ ಟ್ಯಾಬ್ಲೋ ವಿಶೇಷ ಸ್ಥಾನ ಪಡೆದಿದೆ. ಪೊಲೀಸ್ ಬ್ಯಾಂಡ್ ಸಹ ವೀಕ್ಷಕರಿಗೆ ಮುದ ನೀಡುತ್ತಿದೆ.

3ನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯುಗೆ ನಿಶಾನೆ ಆನೆಯಾಗಿ ಅರ್ಜುನ, ನೌಫತ್ ಮತ್ತು ಸಾಲಾನೆಯಾಗಿ ಗೋಪಿ, ಧನಂಜಯ, ಮಹೇಂದ್ರ, ಭೀಮ, ಗೋಪಾಲಸ್ವಾಮಿ ಸಾಥ್ ನೀಡಿದರೆ, ಕಾವೇರಿ ಮತ್ತು ಚೈತ್ರ ಎಂಬ ಹೆಣ್ಣಾನೆಗಳು ಕುಮ್ಕಿ ಆನೆಗಳ ಪಾತ್ರವಹಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ಅರಮನೆ ಆವರಣ ದಾಟಿದ ಜಂಬೂ ಸವಾರಿ ರಾಜಪಥದಲ್ಲಿ ಸಾಗಿ ದಸರಾ ಮೆರಗು ಹೆಚ್ಚಿಸಿದೆ. ಸಾವಿರಾರು ಮಂದಿ ಕಣ್ತುಂಬಿಕೊಂಡು ಸಂತಸ ಪಡುತ್ತಿದ್ದಾರೆ. ಸುಮಾರು 25 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ನೀರಿಕ್ಷೆಗೂ ಮೀರಿ ಜನ ಸೇರಿದ್ದಾರೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC