NEWSನಮ್ಮರಾಜ್ಯಶಿಕ್ಷಣ-

KSRTC ಬಸ್‌ಹಿಂದೆ ಓಡಿದ ವಿದ್ಯಾರ್ಥಿಗಳು: ಸಾಮಾಜಿಕ ಜಾಲತಾಣಗಳಲ್ಲೇ ಸಚಿವರ ತರಾಟೆಗೆ ತೆಗೆದುಕೊಂಡ ಜನರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಂದ ಹಣ ಪಾವತಿ ಮಾಡಿಕೊಂಡು ರಿಯಾಯಿತಿ ಬಸ್‌ ಪಾಸ್‌ಗಳನ್ನು ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವಿತರಿಸಲಾಗಿದೆ. ಅದೂ ಕೂಡ ಮನೆಯಿಂದ ಕಾಲೇಜು, ಶಾಲೆ ಇರುವ ಮಾರ್ಗದಲ್ಲಷ್ಟೇ ಓಡಾಡಬೇಕು. ಆದರೆ, ಆ ಮಾರ್ಗದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್‌ ವ್ಯವಸ್ಥೆ ಮಾಡದೆ ಪರದಾಡುವಂತೆ ಮಾಡುತ್ತಿದೆ ಸಾರಿಗೆ ಇಲಾಖೆ.

ಇತ್ತ ಬರಿ ವಿದ್ಯಾರ್ಥಿಗಳನ್ನೇ ಹತ್ತಿಸಿಕೊಂಡು ಹೋದರೆ ನಿರ್ವಾಹಕರಿಗೆ ಆದಾಯ ತರುವಲ್ಲಿ ವಿಫಲರಾಗಿದ್ದೀರ ಏಕೆ ಎಂದು ಕಾರಣ ಕೇಳಿ ಮೆಮೋ ಕೊಡುತ್ತಾರೆ. ಅತ್ತ ವಿದ್ಯಾರ್ಥಿಗಳಿಗೆ ಪಾಸ್‌ ವಿತರಿಸಿ ಅವರನ್ನು ಕರೆದುಕೊಂಡು ಹೋಗುವುದಕ್ಕೆ ಕಡಿವಾಣ ಹಾಕುತ್ತಾರೆ. ಇದು ಯಾವ ನ್ಯಾಯ ಎಂದು ಈಗ ಜನರು ಕೇಳುತ್ತಿದ್ದಾರೆ.

ಅದಕ್ಕೆ ಮೊನ್ನೆ ನಡೆದಿರುವ ಒಂದು ಘಟನೆಯ ವಿಡಿಯೋ ಟ್ವೀಟರ್‌ನಲ್ಲಿ ವೈರಲಾಗಿದೆ. ಹೌದು! ಕೆಎಸ್​ಆರ್​ಟಿಸಿ ಬಸ್ ಹತ್ತಲು ಶಾಲಾ ವಿದ್ಯಾರ್ಥಿಗಳು ಹರಸಾಹಸಪಡುತ್ತಿದ್ದು ಅದರ ಹಿಂದೆ ಓಡಿ ಅದನ್ನು ಹತ್ತುವ ದೃಶ್ಯದ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆಎಸ್​ಆರ್​ಟಿಸಿ ಆಡಳಿತ ಮಂಡಳಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಹೆಚ್ಚುವರಿ ಬಸ್ ಸೇವೆಯನ್ನು ಕಲ್ಪಿಸುವುದಾಗಿ ಹೇಳಿದೆ. ಆದ್ರೆ ವೈರಲ್ ಆದ ವಿಡಿಯೋ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಾಜ್ಯದ ವಿದ್ಯಾರ್ಥಿಗಳು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ತಲುಪಲು ಸರ್ಕಾರಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ಕಡೆಗಳಲ್ಲಿ ಬಸ್​ಗಳ ಮೇಲೆ, ಬಸ್​ ಬಾಗಿಲಲ್ಲಿ ನೇತಾಡಿಕೊಂಡು ಪಯಾಣ ಮಾಡುವ ಪದ್ಧತಿ ಈಗಲೂ ನಮ್ಮಲ್ಲಿದೆ. ಅದರಂತೆಯೇ ಕರ್ನಾಟಕದಲ್ಲಿ ಸೆರೆ ಹಿಡಿಯಲಾದ ವಿಡಿಯೋ ಒಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಬಸ್​​ ನಿಲ್ದಾಣದಲ್ಲಿ ಬಸ್​ಗಾಗಿ ಕಾದು ನಿಂತಿದ್ದ ಕೆಲ ಶಾಲಾ ಮಕ್ಕಳ ಗುಂಪು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಬರುತ್ತಿದ್ದಂತೆ ಅದರ ಹಿಂದೆ ಓಡಿದ್ದಾರೆ. ಇದನ್ನು ಚಿತ್ರಿಕರಿಸಲಾಗಿದ್ದು ಈ ವಿಡಿಯೋವನ್ನು ಮಂಗಳವಾರ ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಮಕ್ಕಳು ಬಸ್ ಪಾಸ್‌ಗೆ ಹಣ ಪಾವತಿಸಿದರೂ, ವಿದ್ಯಾರ್ಥಿಗಳು ಬಸ್ ಹಿಂದೆ ಓಡಬೇಕೇ ಎಂದು ಶೀಷಿಕೆ ನೀಡಿ KSRTC ಅನ್ನು ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿ ಕೆಎಸ್​ಆರ್​ಟಿಸಿ ಟ್ವಿಟ್ಟರ್ ಹ್ಯಾಂಡಲ್ ಪ್ರತಿಕ್ರಿಯಿಸಿದ್ದು ಬಸ್ ನಿಲ್ದಾಣ ಮತ್ತು ಬಸ್​ನ ನಂಬರ್ ಬಗ್ಗೆ ಮಾಹಿತಿ ಕೇಳಿದೆ. ಇದಕ್ಕೆ ಉತ್ತರಿಸಿದ ಮತ್ತೊಬ್ಬ ಟ್ವಿಟರ್ ಬಳಕೆದಾರ ಎಲ್ಲೆಡೆ ಇದೇ ಪರಿಸ್ಥಿತಿ ಇದೆ. ಪಾಸ್ ಇದ್ದವರನ್ನು ಅಸಡ್ಡೆಯಿಂದ ನೋಡುವ ಕೀಳು ಸಂಸ್ಕೃತಿ ತೊಲಗಬೇಕು ಎಂದಿದ್ದಾರೆ.

ಅದಕ್ಕೆ ಕೆಎಸ್‌ಆರ್‌ಟಿಸಿ ಪ್ರತಿಕ್ರಿಯಿಸಿದ್ದು ನಿಮ್ಮ ಟ್ವೀಟ್ ಅನ್ನು ಪರಿಶೀಲನೆಗಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂದಿದೆ. ಸದ್ಯ ವೈರಲ್ ಆದ ಈ ವಿಡಿಯೋದಿಂದಾಗಿ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು ಈ ವಿಡಿಯೋ ಸಂಬಂಧ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸಾರಿಗೆ ಸವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ