Vijayapatha – ವಿಜಯಪಥ
Saturday, November 2, 2024
NEWSದೇಶ-ವಿದೇಶಸಿನಿಪಥ

ಜೂನಿಯರ್ ಕಲಾವಿದೆಯ ಗರ್ಭಿಣಿ ಮಾಡಿದ ಉದಯೋನ್ಮುಖ ನಟನ ಬಂಧನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹೈದರಾಬಾದ್: ನಾ ನಿನ್ನ ಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಜೂನಿಯರ್ ಕಲಾವಿದೆಯ ಗರ್ಭಿಣಿ ಮಾಡಿದ ಉದಯೋನ್ಮುಖ ನಟನನ್ನು ಜುಬ್ಲಿ ಹಿಲ್ಸ್ ಪೊಲೀಸರು ಬಂದಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವೆಂಕಟಗಿರಿಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸವಿರುವ ಜೂನಿಯರ್ ಆರ್ಟಿಸ್ಟ್ 25 ವರ್ಷದ ಯುವತಿ ಸೋನಿಗೆ (ಹೆಸರು ಬದಲಿಸಲಾಗಿದೆ) ಜುಬಿಲಿ ಹಿಲ್ಸ್ ರಸ್ತೆ ನಂ.45 ರಲ್ಲಿ ವಾಸವಿದ್ದ ಪ್ರಿಯಾಂತ್ ರಾವ್ (30) ಎಂಬುವರ ಜೊತೆ ಪರಿಚಯವಾಗಿದೆ.

ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ತಿರುಗಿದೆ. ನಂತರ ಲವ್ವಿಡವ್ವಿಯಾಗಿದ್ದು ಪ್ರಿಯಾಂತ್ ರಾವ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಪರಿಣಾಮ ಆಕೆ ಕಳೆದ ಜನವರಿಯಲ್ಲಿ ಗರ್ಭಿಣಿಯಾಗಿದ್ದರು.

ನಾನು ಈ ವಿಷಯವನ್ನು ಪ್ರಿಯಾಂತ್‌ಗೆ ತಿಳಿಸಿದಾಗ ಅವನು ಗರ್ಭಪಾತದ ಮಾತ್ರೆಗಳನ್ನು ನೀಡಿ ತೆಗೆದುಕೊಳ್ಳುವಂತೆ ಹೇಳಿದನು. ಬಳಿಕ ಆತನಿಗೆ ಮದುವೆಯಾಗಿ ಮಗಳಿದ್ದಾಳೆ ಎಂಬ ಸಂಗತಿ ಗೊತ್ತಾಯಿತು. ಆ ಬಗ್ಗೆ ಪ್ರಿಯಾಂತ್‌ನನ್ನು ವಿಚಾರಿಸಿದಾಗ, ಪತ್ನಿಗೆ ವಿಚ್ಛೇದನ ನೀಡುವುದಾಗಿ ಹೇಳಿ ನಂಬಿಸಿದ್ದ ಎಂದು ಆಕೆ ದೂರು ನೀಡಿದ್ದಾಳೆ.

ಇನ್ನು ಮುಂದುವರಿದು ದೂರಿನಲ್ಲಿ ಹೇಳಿಕೆ ನೀಡಿರುವ ಆಕೆ, ಇತ್ತೀಚೆಗೆ ಪ್ರಿಯಾಂತ್ ತಾಯಿಯ ಮುಂದೆ ನಮ್ಮ ಮದುವೆ ವಿಷಯ ಪ್ರಸ್ತಾಪಿಸಿದಾಗ ಆತ ನನ್ನನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಉಲ್ಲೇ ಖಿಸಿದ್ದಾರೆ.

ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುರಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ