NEWSಕೃಷಿನಮ್ಮಜಿಲ್ಲೆ

ಬನ್ನೂರು ಹೋಬಳಿಯಲ್ಲಿ ಭಾರಿ ಮಳೆ – ಒಡೆದ ವಿಶ್ವೇಶ್ವರಯ್ಯ ನಾಲೆ: ರೈತರಿಗೆ ಸಂಕಷ್ಟ

ಯಾಚೇನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳ ರೈತರ ಭತ್ತದ ಜಮೀನು ಜಲಾವೃತ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತಾಲೂಕಿನ ಬನ್ನೂರು ಹೋಬಳಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ವಿಶ್ವೇಶ್ವರಯ್ಯ ನಾಲೆ ಮತ್ತು ಮಣಸಿಕ್ಯಾತನಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಭತ್ತದ ಗದ್ದೆಗಳು ಜಲಾವೃತವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ.

ಮೆಣಸಕ್ಯಾತನಹಳ್ಳಿಗೆ ಹೋಗುವ ಸಿದ್ದನಘಟ್ಟ ಸಮೀಪ ವಿಸಿ ನಾಲೆ ಒಡೆದ ಪರಿಣಾಮ 50-60 ಎಕರೆ ಭತ್ತದ ಗದ್ದೆಗಳು ಸಂಪೂರ್ಣ ಮುಳುಗಿ ಹೋಗಿಗೆ. ಅಲ್ಲದೆ ಮೆಣಸಿಕ್ಯಾತನಹಳ್ಳಿ ಕೆರೆ ಕೋಡಿ ಬಿದ್ದಿದ್ದು ಈ ಎರಡೂ ಘಟನೆಗಳ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳಾದ ಯಾಚೇನಹಳ್ಳಿ, ಕೆಂಪೇಗೌಡನಕೊಪ್ಪಲು, ದೇಸವಳ್ಳಿ ರೈತರ ಭತ್ತದಗದ್ದೆಗಳು ಜಲಾವೃತವಾಗಿವೆ. ಅಲ್ಲದೆ ಮತ್ತೀತಾಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು.

ವಿಷಯ ತಿಳಿದ ಕೂಡಲೇ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಮತ್ತು ಕ್ಷೇತ್ರದ ಶಾಸಕ ಅಶ್ವಿನ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಡೆದ ನಾಲೆಯನ್ನು ಜೆಸಿಬಿಯಿಂದ ಕಲ್ಲು ಇತರೆ ವಸ್ತುಗಳನ್ನು ತಂದು ಹಾಕಿ ಮುಚ್ಚಲು ಹರಸಾಹಸ ಪಟ್ಟರು. ಕೊನೆಗೂ ಒಡೆದ ಸ್ಥಳವನ್ನು ಮುಚ್ಚುವಲ್ಲಿ ಸಫಲರಾದರು. ಇನ್ನು ಜಲಾವೃತವಾಗಿ ಬೆಳೆ ನಷ್ಟವಾಗಿರುವ ರೈತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಖುದ್ದು ಸ್ಥಳಕ್ಕೇ ಭೇಟಿ ನೀಡಿದ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಶುಕ್ರವಾರ ಸುರಿದ ವ್ಯಾಪಕ ಮಳೆಯಿಂದಾಗಿ ನಾಲೆಯ ಆಸುಪಾಸಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಮೆಣಸಿಕ್ಯಾತನಹಳ್ಳಿ ಕೆರೆ ಕೋಡಿ ಬಿದ್ದಿದ್ದರಿಂದ ಜಮೀನಿಗೆ ನೀರುನುಗ್ಗಿದೆ. ಪರಿಣಾಮ ಈ ಭಾಗದ ಜಮೀನುಗಳಲ್ಲಿ ಫಸಲುಗಳು ನಾಶವಾಗಿದೆ. ಭಾರಿ ಮಳೆಯ ಪರಿಣಾಮ ನೆರೆ ಹೆಚ್ಚಾಗಿದ್ದರಿಂದ ನಾಲೆಗೆ ನೀರು ನುಗ್ಗಿದೆ. ಜಮೀನುಗಳ ಬೆಳೆ ಪ್ರವಾಹದಲ್ಲಿ ಕೊಚ್ಚಿ ಕೊಂಡುಹೋಗಿದೆ.

ನಾಲೆಯ ನೀರಿನ ಜೊತೆಗೆ ಮರಳು, ಮಣ್ಣು ಕೂಡ ಜಮೀನುಗಳನ್ನು ಸೇರಿದೆ. ಈ ಭಾಗದ ಜನ ಹಾಗೂ ವಾಹನ ಸಂಚಾರಕ್ಕೆ ಇದರಿಂದ ತೊಂದರೆಯಾಗಿತ್ತು. ರೈತರು ಜಮೀನುಗಳಿಗೆ ಹೋಗಿ ಬರಲು ಪರದಾಡುವಂತಾಗಿತ್ತು.

ಈ ವಿಸಿ ನಾಲೆಯ ನೀರನ್ನು ನಂಬಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ವ್ಯವಸಾಯ ಮಡುತ್ತಿದ್ದಾರೆ. ಈಗ ನಾಟಿಯೆಲ್ಲ ಮುಗಿಸಿ ಭತ್ತ ಒಡೆಗಡೆಯುವ ಸಮಯವಾಗಿರುವುದರಿಂದ ರೈತರು ಈಗ ಹಾಕಿದ ಫಸಲು ಕೈ ಸೇರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ನೀಡಬೇಕು ಎಂದು ಜಲಾವೃತಗೊಂಡ ಭತ್ತದ ಗದ್ದೆಯ ರೈತರು ಮನವಿ ಮಾಡಿದ್ದಾರೆ.

ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಯಾಚೇನಹಳ್ಳಿ ಗ್ರಾಮದ ಭಾಗದಲ್ಲಿ ಬರುವ ವಿಶ್ವೇಶ್ವರಯ್ಯ ನಾಲೆ ಒಡೆದಿತ್ತು. ಇದರಿಂದ ಅಕ್ಕ-ಪಕ್ಕದ ಭತ್ತದ ಗದ್ದೆಯ ಫಸಲು ಹಾನಿಗೆ ಒಳಗಾಗಿದೆ. ವಿಷಯ ತಿಳಿದ ಕೂಡಲೇ ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಧಾವಿಸಿದೆ. ಖುದ್ದು ಅಧಿಕಾರಿಗಳೊಡನೆ ಸ್ಥಳ ಪರಿಶೀಲನೆ ನಡೆಸಿ ಕಾಲುವೆ ಒಡಕಿನ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಬೆಳೆ ಹಾನಿ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಕೂಡಲೇ ಸ್ಥಳ ಪರಿಶೀಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದೇನೆ.
l ಎಂ.ಅಶ್ವಿನ್‌ ಕುಮಾರ್‌, ಶಾಸಕರು, ತಿ.ನರಸೀಪುರ

 

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ