ಬೀದರ್: ಯಾದಗಿರಿ ಜಿಲ್ಲೆಯಿಂದ 190 ಕಿಮೀ ದೂರದ ಬೀದರ್‌ನತ್ತ ಕಳೆದ 17ರಂದು ಹೊರಟ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಸೈಕಲ್ ಜಾಥಾ ಇಂದು ಬೆಳಗ್ಗೆ ಬೀದರ್ ತಲುಪಿದೆ. ನಾಳೆ ಅ.21ರಂದು ಬೀದರ್‌ನಲ್ಲಿ ಒಂದು ಜಾಗೃತಿ ಸಮಾವೇಶ ಮಾಡಿ ಬಳಿಕ ಬೀದರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದೆ.
ಇನ್ನು ಬುಧವಾರ ರಾತ್ರಿ ಚಾಂಗಲೇರ ಗ್ರಾಮದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೊಡಿದ್ದು ಇಂದು ಬೀದರ್ ಕಡೆಗೆ ಜಾಥಾ ಮುಂದು ವರೆಸುತಿದ್ದೇವೆ. ಅ.21ರಂದು ಬೀದರ್ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಲಿದ್ದೇವೆ ಎಂದು ಜಾಥಾದ ನೇತೃತ್ವ ವಹಿಸಿರುವ ಚಂದ್ರಶೇಖರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಈ ಬೃಹತ್ ಸೈಕಲ್ ಜಾಥಾ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದ್ದು ಬೀದರ್ ಕಡೆಗೆ ಸಾಗುತ್ತಿದೆ.
ಈ ನಡುವೆ ಮೊನ್ನೆ ಮಾರ್ಗಮಧ್ಯೆ ಸೇಡಂ ಹತ್ತಿರ ಸೇಡಂ ಘಟಕದ ಸಹೋದ್ಯೋಗಿಗಳು ಸೈಕಲ್ ಜಾಥಾ ನಿರತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಅಂದು ಮುಂಜಾನೆ ಗೌಡನಹಳ್ಳಿ ಗ್ರಾಮದ ಬೋಜಲಿಂಗೆಶ್ವರ ದೇವಸ್ಥಾನದಿಂದ ಹೊರಟ ಜಾಥಾ ರಾತ್ರಿವೇಳೆಗೆ ಸುಲೆಪೇಟೆ ತಲುಪಿ, ಕಟ್ಟಂಗೇಶ್ವರ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿತು.
ಮತ್ತೆ ನಿನ್ನೆ ಮುಂಜಾನೆ ಜಾಥಾ ಆರಂಭಿಸಿ ಚಿಚ್ಚೋಳಿ ಘಟಕದಲ್ಲಿ ನೌಕರರನ್ನು ಭೇಟಿ ಮಾಡಿ ಬೀದರ್‌ನತ್ತ ಸಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೊಡಿತು. ಇಂದು ಮತ್ತೆ ಬೀದರ್ ಕಡೆಗೆ ಜಾಥಾ ಸಾಗುತ್ತಿದೆ.
ಇಂದು ರಾತ್ರಿ ಬೀದರ್ ತಲುಪಿ ಅಕ್ಟೋಬರ್ 21ರಂದು ಎಲ್ಲ ನೌಕರರು ಒಂದೆಡೆ ಸಮಾವೇಶಗೊಳ್ಳಲಿದ್ದಾರೆ. ಒಟ್ಟಾರೆ ಅಕ್ಟೋಬರ್ 10ರಿಂದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ಆರಂಭವಾಗಿರುವ ಸೈಕಲ್ ಜಾಥಾ ರಾಜ್ಯದ ಮೂಲೆ ಮೂಲೆಯನ್ನು ತಲುಪುತ್ತಿದೆ.
ಈ ಮೂಲಕ ಸಾರಿಗೆ ನೌಕರರ ಸಮಸ್ಯೆಯನ್ನು ಜನರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದು, ರಾಯ್ಜದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಾರಿಗೆಯ ನೂರಾರು ನೌಕರರು ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.
ಇನ್ನು ಈಗಾಗಲೇ ಬಳ್ಳಾರಿ ಡಿಸಿ, ರಾಯಚೂರು ಡಿಸಿ ಮತ್ತು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ನಾಳೆ ಬೀದರ್ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನೌಕರರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಿದೆ.