NEWSನಮ್ಮಜಿಲ್ಲೆ

ಹದಗೆಟ್ಟ ರಸ್ತೆ ಬಗ್ಗೆ ಎಚ್ಚರವಿರಲಿ : ವಾಹನ ಸವಾರರಿಗೆ ಬೆಳಗಾವಿ ಪೊಲೀಸ್‌ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಈಗ ಎಲ್ಲ ಕಡೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು ಕಬ್ಬು ತುಂಬಿದ ಟ್ರ್ಯಾಕ್ಟರ್, ಟ್ರೇಲರ್, ಟ್ರಕ್ ಹಾಗೂ ಎತ್ತಿನ ಗಾಡಿಗಳು ರಸ್ತೆ ತುಂಬಾ ಓಡಾಡುತ್ತಿವೆ ಹಾಗೂ ನಿರಂತರ ಮಳೆಯ ಕಾರಣದಿಂದ ರಸ್ತೆಗಳು ಸಹ ತುಂಬಾ ಹದಗೆಟ್ಟಿದ್ದು ಕಾರಣ ದ್ವಿಚಕ್ರ ವಾಹನ ಅಥವಾ ಇನ್ನಾವುದೆ ವಾಹನ ಚಲಾಯಿಸುವಾಗ ತುಂಬಾ ಜಾಗರುಕತೆ ಮತ್ತು ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಹಾಗೂ ಎತ್ತಿನ ಗಾಡಿಗಳು ರಸ್ತೆ ಬದಿಯಲ್ಲಿ ನಿಂತಾಗ ಅವುಗಳಿಗೆ ಯಾವುದೇ ರಿಪ್ಲೇಕ್ಟರ್ ಮತ್ತು ಇಂಡಿಕೆಟರ್ ಇಲ್ಲ ಹಾಗೆ ನಿಂತ ವಾಹನಗಳು ರಾತ್ರಿ ವೇಳೆ ನಮ್ಮ ಕಣ್ಣಿಗೆ ಕಾಣುವುದಿಲ್ಲ ಇದರಿಂದ ಘೋರ ಹಾಗೂ ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ.

ಬೆಳಗಾವಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರಲ್ಲಿ ಜಾಗ್ರತೆ ಮೂಡಿಸಿ ರಿಪ್ಲೇಕ್ಟರ್ ಗಳನ್ನು ಅಳವಡಿಸುವ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿದೆ. ಆದರೂ ಈ ಬಗ್ಗೆ ನಿರಂತರವಾಗಿ ಜಾಗ್ರತೆ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಇನ್ನು ರಾತ್ರಿ ವೇಳೆಯಾಗಲಿ ಅಥವಾ ಹಗಲು ಹೊತ್ತಿನಲ್ಲಿ ಆಗಲಿ ವಾಹನವನ್ನು ನಿಧಾನವಾಗಿ ಮತ್ತು ಜಾಗೃತೆಯಿಂದ ಚಲಾಯಿಸಿ. ಅದರ ಜತೆಗೆ 1) ವಾಹನ ನೋಂದಣಿ 2) ವಾಹನ ವಿಮೆ 3) ಡ್ರೈವಿಂಗ್ ಲೈಸನ್ಸ್ 4) ಹೆಲ್ಮೆಟ್ 5) ಸೀಟ್ ಬೆಲ್ಟ್ ಕಡ್ಡಾಯವಾಗಿರಲಿ ಎಂದು ವಿನಂತಿಸಿದ್ದಾರೆ.

ಇನ್ನು ಪ್ರಮುಖವಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಬೇಡ. ಕಬ್ಬು ಸಾಗಾಟದ ವಾಹನಗಳಲ್ಲಿ ಅಬ್ಬರದ ಸಂಗೀತ ಅಳವಡಿಕೆ ಶಿಕ್ಷಾರ್ಹ ಅಪರಾಧ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸುರಕ್ಷಿತ ಅಂತರ ಇರಲಿ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ