Thursday, October 31, 2024
NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೂಟದ ಸೈಕಲ್‌ ಜಾಥಾ 12ನೇ ದಿನ – ನೂರಾರು ನೌಕರರಿಂದ ರ‍್ಯಾಲಿ- ಬೀದರ್‌ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟದಿಂದ ಬೃಹತ್ ಸೈಕಲ್‌ ಅ.10ರಂದು ಬಳ್ಳಾರಿಯಲ್ಲಿ ಚಾಲನೆಗೊಂಡಿದ್ದು, ಇಂದಿಗೆ 12ನೇ ದಿನಗಳನ್ನು ಪೂರ್ಣಗೊಳಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಶುಕ್ರವಾರ ಬೀದರ್‌ ತಲುಪಿದ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ನೌಕರರು, ಸರ್ಕಾರಕ್ಕೆ ಮತ್ತು ನಿಗಮಗಳ ಆಡಳಿತ ಮಂಡಳಿಗೆ ಎಚ್ಚರಿಕೆ ಸಂದೇಶ ರವಾನಿಸಲು ಇಂದು ಪ್ರತಿಭಟನಾ ರ‍್ಯಾಲಿ ಕೂಡ ಮಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ರಾಜ್ಯದ ಕೆಲವು ಮುಖಂಡರು ಕಳೆದ 12 ದಿನಗಳಿಂದ ಸೈಕಲ್ ಜಾಥಾ ಪ್ರಾರಂಭಿಸಿದ್ದು ಈ ಮೂಲಕ ರಾಜ್ಯಾದ್ಯಂತ ಸೈಕಲ್ ಮೇಲೇರಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತ ಸರಕಾರದ ಗಮನ ಸೆಳೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೀದರ ನಗರಕ್ಕೆ ಜಾಥಾ ಆಗಮಿಸಿದ್ದು ಅದನ್ನು ಬೀದರ ನೌಕರರ ಕೂಟ ಸ್ವಾಗತಿಸಿ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟದಿಂದ ಸಾರಿಗೆ ನೌಕರರ ಅಗತ್ಯ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಬೀದರ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪತಿಭಟನಾ ರ‍್ಯಾಲಿ ಹಾಗೂ ಸೈಕಲ್ ಜಾಥಾ ಜರುಗಿತು.

ಕಳೆದ 7 ವರ್ಷಗಳಿಂದ ಸಾರಿಗೆ ನೌಕರರ ವೇತನ ಹೆಚ್ಚಳವಾಗಿಲ್ಲ. ಅಲ್ಲದೇ ಮಾಡಿದ ಹೆಚ್ಚುವರಿ ಕೆಲಸಕ್ಕೂ ಸರಿಯಾದ ಭತ್ಯೆ, ಸವಲತ್ತು ಇಲ್ಲ. ಇವುಗಳ ಈಡೆರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ 2021ರಲ್ಲಿ ಮುಷ್ಕರ ಮಾಡಲಾಯಿತು. ಆ ವೇಳೆ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಸರಕಾರ ಗುಬ್ಬಿ ಮೇಲೆ ಬೃಹ್ಮಾಸ್ತ್ರ ಎಂಬಂತೆ ಅಮಾಯಕ ಕಾರ್ಮಿಕರನ್ನು ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಕೇಸು ಮಾಡಿ ಅಮಾನವಿಯವಾಗಿ ನಡೆದುಕೊಂಡಿತ್ತು.

ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಕೂಡಲೆ ಸರಕಾರಿ ನೌಕರರ ಮಾದರಿಯಲ್ಲಿ ವೇತನ ಹೆಚ್ಚಿಸಬೇಕು. ಭ್ರಷ್ಟಾಚಾರ ಹಾಗೂ ಕಿರುಕುಳ ಮುಕ್ತ ನಿಯಮ ಜಾರಿಗೆ ತರಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ನಿರತರು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ರಾಜ್ಯ ಸರಕಾರ ಕಳೆದ ವರ್ಷ ಸಾರಿಗೆ ನೌಕರರಿಗೆ ನಿಡಿದ್ದ ಲಿಖಿತ ಭರವಸೆಗಳನ್ನು ಈಡೆರಿಸಬೇಕು, ವೇತನದ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ಬಸವರಾಜ ಚಾಮರೆಡ್ಡಿ ಮಾತನಾಡಿ, ಸಾರಿಗೆ ಸಂಸ್ಥೆ ದೇಶದಲ್ಲೆ ಅತ್ಯತ್ತಮ ಸೇವೆ ನೀಡುತ್ತಿದ್ದು ಅದನ್ನು ಖಾಸಗಿಕರಣಕ್ಕೆ ಚಿಂತನೆ ಮಾಡುತ್ತಿರುವ ಸರಕಾರದ ಕ್ರಮ ಖಂಡಿಸಿದರು. ನಮ್ಮ ನೌಕರರು ಹಗಲಿರುಳೆನ್ನದೆ ಕಷ್ಟ ಪಡುತ್ತಿದ್ದು, ದುಡಿಮೆಗೆ ತಕ್ಕ ಕೂಲಿ ಕೊಡದಿರುವುದು ಅನ್ಯಾಯ ಎಂದು ಖಂಡಿಸಿದರು.

ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶಿವಯೋಗಿ ಮಾತನಾಡಿ, ಸಾರಿಗೆ ನೌಕರರ ಅಗತ್ಯ ಬೇಡಿಕೆಗಳನ್ನು ಕೂಡಲೇ ಈಡೆರಿಸಬೇಕು. ಸರಕಾರ ಚುನಾವಣಾ ಪ್ರಚಾರಕ್ಕಾಗಿ ಎಲ್ಲ ವರ್ಗದ ಜನರಿಗೆ ಹಲವು ಬಗೆಯ ಉಚಿತ ಪಾಸುಗಳನ್ನು ಕೊಟ್ಟು ಅದರ ಹಣ ನಿಗಮಕ್ಕೆ ನೀಡದೆ ಇರುವ ಕಾರಣ ನಿಗಮಕ್ಕೆ ನಷ್ಟ ಉಂಟಾಗುತ್ತಿದೆ. ಇದಿಗ ಚುನಾವಣೆ ಸಮೀಪ ಬಂದಿದ್ದು ನೀತಿ ಸಂಹಿತೆ ಜಾರಿಗೆ ಮುನ್ನ ನಮ್ಮ ಸಂಬಳ ಹೆಚ್ಚಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದರು.

ಸೈಕಲ್ ಜಾಥಾದ ಪ್ರಮುಖರಾದ ಅನೀಲ್‌ ಕುಮಾರ, ಸತೀಶ್‌, ಸಂತೋಷ, ಕೃಷ್ಣ, ಮಕಂದರ್, ಕೇಶವ ಇದ್ದು ಬೀದರ ಕೂಟದ ಮುಖಂಡರಾದ ಅನೀಲ ಪಾಟಿಲ್, ಶಾತಕುಮಾರ ದೇಸೋಳೆ, ಶಿವಾನಂದ ಸೀತಾಳಗೇರಾ, ನಟರಾಜ, ಮಲ್ಲಯ್ಯ ಸ್ವಾಮಿ, ಚಂದ್ರಶೇಖರ್, ಕೈಲಾಸಯ್ಯ, ಶರಣಪ್ಪ ಶೆಂಬೆಳ್ಳಿ, ಸಂತೋಷ, ಸಿದ್ದಲಿಂಗ, ಪ್ರಕಾಶ ಕನ್ನಾಳೆ, ಲಕ್ಷö್ಮಣ, ನಾಗಲಿಂಗಪ್ಪ, ಬಸಯ್ಯ ಸ್ವಾಮಿ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ