ಬೆಂಗಳೂರು: ಎಐಟಿಯುಸಿ ಎಂಬ ಸಂಘಟನೆಗೆ ಕೆಎಸ್‌ಆರ್ಟಿಸಿಯ 4 ನಿಗಮಗಳ ಕಾರ್ಮಿಕರು ಆಟಕ್ಕುಂಟು ಲೆಕ್ಕಕ್ಕಿಲ್ಲ. ಏಕೆಂದರೆ ಅವರಿಗೆ ಇಲ್ಲಿ ಅಧಿಕಾರ ಮಾತ್ರ ಬೇಕು ಕಾರ್ಮಿಕರ ಸಂಕಷ್ಟಗಳು ಬೇಡ. ಇಲ್ಲಿ ಬೇಕಿರುವುದು ಅಧಿಕಾರ ಮತ್ತು ಅದರ ರುಚಿಯಷ್ಟೆ.
ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಎಷ್ಟು ಸಂಘಟನೆಯಲ್ಲಿ ಅಧಿಕಾರವನ್ನು ಅನುಭವಿಸಿದ್ದಾರೆ ಎಂಬ ಅಂಕಿ ಅಂಶವನ್ನು ನಾವು ಹಾಕಿದ್ದೇವೆ ನೋಡಿ. ಎಲ್ಲ ಎಲ್ಲ ವಲಯದಲ್ಲೂ ಲಾಭದಾಯಕ ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಇವರು. ಹಾಗಾಗಿ ಕೆಎಸ್‌ಆರ್ಟಿಸಿಯಲ್ಲಿ ಚುನಾವಣೆ ನಡೆಸದೆ ಕಾರ್ಮಿಕರ ಏಳಿಗೆಯನ್ನು ಸಹ ಮಾಡದೆ ಅಧಿಕಾರದ ಲಾಲಾಸೆಯಿಂದ ಅಧಿಕಾರಿಗಳ ಜತೆ ಕೈಜೋಡಿಸಿಕೊಂಡು ತಮ್ಮಗಳ ಉದ್ಧಾರಕ್ಕಾಗಿ ಸಂಘಟನೆಯನ್ನು ಮುಡಿಪಾಗಿ ಇಟ್ಟುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೊಂದ ಸಾರಿಗೆ ನೌಕರರ ಹಾಕಿರುವ ಪ್ರತಿಗಳು ವೈರಲ್ ಆಗುತ್ತಿವೆ.
ಅದರಲ್ಲಿ ಪ್ರಮುಖವಾಗಿ ಹರಿದಾಡುತ್ತಿರುವ ವಿಷಯಗಳು ಕೆಎಸ್‌ಆರ್‌ಟಿಸಿ ನೌಕರರ ಇತ್ತೀಚಿನ ಪರಿಸ್ಥಿತಿಯನ್ನು ನೋಡಿ… ಒಬ್ಬರಿಗೊಬ್ಬರು ಹೊಡೆದು ಬಡಿದಾಡಿಕೊಂಡು ಸಾಯುವ ದಿನಗಳು ದೂರವಿಲ್ಲ. ಮಾನ್ಯತೆ ಪಡೆದ ಸಂಘಟನೆ ಅಂತ ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಲೇ 1998 ರಿಂದ 2012 ರವರೆಗೆ (ಮೂಲೆಗುಂಪಾಗಿ) ಅಂದು ಕಾರ್ಮಿಕರ ಸಮಸ್ಯೆ, ಗೋಳು ಏನೆಂದು ತಿಳಿಯುವ ಗೋಜಿಗೆ ಹೋಗಲಿಲ್ಲ.
ಇನ್ನು 2012ರಲ್ಲಿ ಮುಂಚೂಣಿಗೆ ಬಂದ್ರು ಏನಕ್ಕೆ ಸ್ವಾಮಿ ಮಾನ್ಯತೆ ಪಡೆದ ಸಂಘಟನೆ ಅಂತ ಇದ್ರು 15 ವರ್ಷಗಳ ಕಾಲ ಕಾರ್ಮಿಕರ ಸಮಸ್ಯೆ ಕೇಳದೆ ಯಾವ ಬಿಲದಲ್ಲಿ ಅಡಗಿ ಕುಳಿತುಕೊಂಡಿದ್ರು ಎಂಬುದು ಗೊತ್ತಿಲ್ಲ. ಇದರಿಂದ ಸೇವಾವಧಿ ನೌಕರರಿಗೆ 1/2 ಗ್ರಾಚ್ಯುಟಿ ಮಾತ್ರ. ಇದ್ರಿಂದ ಒಬ್ಬಬ್ಬ ನೌಕರರಿಗೆ ಕನಿಷ್ಠ 5 ಲಕ್ಷದಿಂದ 10 ಲಕ್ಷ ರೂ.ಗಳಷ್ಟು ನಷ್ಟ. ಅಲ್ಲದೇ Onen Ended scale ನಿಂತು ಹೋಗಿದೆ. ಇದರಿಂದ ಕೂಡ ನಿರಂತರವಾಗಿ ದುಡಿದ ನೌಕರರಿಗೆ ಎಷ್ಟು ನಷ್ಟ ಅಂತ ನಿಮಗೆ ಗೊತ್ತೇ?
2012, 2016ರಲ್ಲಿ ವಜಾ ಆದ ನೌಕರರ ಬಗ್ಗೆ ಆಗಲಿ ಅಥವಾ ಇತ್ತೀಚೆಗೆ ಮುಷ್ಕರದಿಂದ 2000ಕ್ಕೂ ಹೆಚ್ಚು ನೌಕರರು ವಜಾ ಆದ ಬಗ್ಗೆ ಆಗಲಿ ಹಾಗೂ ಕಾರ್ಯಕರ್ತರ ಮೇಲೆ ಸಾವಿರಾರು ಪೊಲೀಸ್ ಕೇಸ್ ಹಾಕಿರುವ ಬಗ್ಗೆ ಆಗಲಿ ಕಿಂತಿತ್ತೂ ಕಾಳಜಿ ಇಲ್ಲದ ಇವರಿಗೆ, ಬರೀ ಮೊಸಳೆ ಕಣ್ಣೀರು. ಯಾರೇ ಕಾರ್ಯಕರ್ತರು ನಮ್ಮ ಕೆಲಸಗಳಿಗೆ ತಿಂಗಳುಗಟ್ಟಲೆ ಫೆಡರೇಷನ್ ಆಫೀಸಿಗೆ ಅಲೆಯಬೇಕು ಎಂಬ ಮನಸ್ಥಿತಿ ಹೊಂದಿರುವ ಸಂಘಟನೆ.
ಈ ರೀತಿ ಸಾವಿರಾರು ಕಾರ್ಯಕರ್ತರು ಅಲೆದು ಅಲೆದು ಬೇಸತ್ತು, ಫೆಡರೇಷನ್ ಅಫೀಸಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಇವರ ಹಿಟ್ಲರ್ ದರ್ಬಾರ್‌ಗಳನ್ನು ಕಣ್ಣಾರೆ ನೋಡಿ, ಮೂರು ಮುಖಂಡರು ಫೆಡರೇಷನ್ ಬಿಟ್ಟು ಹೋಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇವರ ಕಾಲಕಸವಾಗಿ ಬಿದ್ದಿದ್ದರೆ ಮಾತ್ರ ಗಮನ ಹರಿಸುತ್ತಾರೆ. ಇಲ್ಲವಾದಲ್ಲಿ ಕೆಂಗಣ್ಣಿಗೆ ಗುರಿಯಾಗೋದು ಕಟ್ಟಿಟ್ಟ ಬುತ್ತಿ.
ಇನ್ನು ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್‌ನ ಮುಂಚೂಣಿ ನಾಯಕರಿಗೆ ಮಾತ್ರ ಕಿಂಚಿತ್ತೂ ತೊಂದ್ರೆ ಆದ್ರೂ ಅವರಿಗೆ ಎಲ್ಲ ರೀತಿಯ ಧನ ಸಹಾಯ / ವೈದ್ಯಕೀಯವಾಗಿ ಹಣದ ನೆರವು ಸೇರಿದಂತೆ ಎಲ್ಲ ಅನುಕೂಲತೆಗಳನ್ನು ಕಲ್ಪಿಸುತ್ತಾರೆ. ಆದರೆ ಕಾರ್ಮಿಕರಿಗೆ ತೊಂದರೆ ಆದರೆ ತಿರುಗಿಯೂ ನೋಡೋದಿಲ್ಲ. ಕಾರ್ಯಕರ್ತರಿಗೆ ತೊಂದರೆ ಆದ್ರೆ ಗೋಳು ಗ್ಯಾರಂಟಿ.
ಈ ರೀತಿ ಸಾವಿರಾರು ಉದಾಹರಣೆಗಳು ಇವೆ. ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯಭಾಸ್ಕರ್ ಅವರು MICO ನಲ್ಲಿ ಡಿಸ್ಮಿಸ್ ಆಗಿ ಕೆಎಸ್‌ಆರ್‌ಟಿಸಿಗೆ ಬಂದ ದಿನದಿಂದ ಈವರೆಗೆ ಫೆಡರೇಷನ್ ಎಐಟಿಯುಸಿಯಿಂದ ಎಲ್ಲ ಸಕಲ ಸಲತ್ತುಗಳನ್ನು ಪಡೆಯುತ್ತಲೇ, MICOದಿಂದ ಡಿಸ್ಮಿಸ್ ಆದ ಮೇಲೆ ಇವರೇ ಬಹಳ ಮುತುವರ್ಜಿ ವಹಿಸಿ ಡಿಸ್ಮಿಸ್ ಆದ ಸಂಬಂಧ ಕೇಸನ್ನು ಹಾಕಿ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಅಂದಾಜು ತಿಂಗಳಿಗೆ ರೂ.50,000/ ಪಡೆಯುತ್ತಿಲ್ಲವೇ?
ಅದೇ ಕಾರ್ಮಿಕರಿಗೆ ನ್ಯಾಯದೊರಕಿಸಿಕೊಡುವಲ್ಲಿ ಏಕೆ ತಾರತಮ್ಯ? ಇದು ಮೈಕೋ ಆಡಳಿತ ವರ್ಗದೊಂದಿಗೆ ಒಳ ಒಪ್ಪಂದವೇ? ಇದೇ ವಿಜಯಭಾಸ್ಕರ್ ಅವರು ಮೊದಲು AITUC ಯಿಂದ CITUಗೆ ಹೋಗಿ MICO ಕಂಪನಿಯಲ್ಲಿ ಸೂರ್ಯ ನಾರಾಯಣರಾವ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರನ್ನು ಮತ್ತೆ ಏಕಾಏಕಿ AITUCಗೆ ಬರಮಾಡಿಕೊಂಡು ಎಲ್ಲ ಮಹತ್ತರ ಹುದ್ದೆಗಳನ್ನು ನೀಡಿರುವ ಒಳಮರ್ಮವೇನು ಎಂದು ಪ್ರಶ್ನಿಸಿದ್ದಾರೆ.
ನಿಮಗಿದು ಗೊತ್ತೇ? ಈ ಇಬ್ಬರೂ ನಾಯಕರು, ಎಷ್ಟು ಹುದ್ದೆಗಳನ್ನು ಹೊಂದಿದ್ದಾರೆ ಎಂದು. ಅದರ ಪಟ್ಟಿ ಇಲ್ಲಿದೆ ನೋಡಿ.
ಅಬ್ಬಾ ಸಾಕೇನ್ರಿ ಹುದ್ದೆಗಳು ! ಇವರಿಬ್ಬರೇ ಎತ್ತರಕ್ಕೆ ಬೆಳೆಯಬೇಕು. ಇತ್ತೀಚಿಗೆ ಅನಂತಸುಬ್ಬರಾವ್ ಬಳಿ ಇರುವ ಹುದ್ದೆಗಳನ್ನು ಕ್ರಮೇಣ ವಿಜಯಭಾಸ್ಕರ್‌ಗೆ ಮಾತ್ರ ವರ್ಗಾವಣೆ ಮಾಡಲು ಸಂಚು. ಯಾಕೆ ಇತರರಿಗೆ ಈ ಹುದ್ದೆಗಳ ಹಂಚಿಕೆ ಇಲ್ಲ. ಈ ಹಿಂದಿರುವ ಗುಟ್ಟು ರಟ್ಟಾಗುವುದೇ ಎಂಬ ಭಯವೇ? ಅಥವಾ ಆದಾಯ ಕುಗ್ಗುತ್ತದೆ ಎಂಬ ಅನುಮಾನವೇ? ಅಥವಾ KSRTC – AITUC ಯಲ್ಲಿ ಇಂತಹ ಹುದ್ದೆಗಳನ್ನು ನಿರ್ವಹಿಸಲು ಸಮರ್ಥರಿಲ್ಲವೇ? ಅಥವಾ ಬುದ್ಧಿವಂತರಿಲ್ಲವೇ?
ಇಷ್ಟೆಲ್ಲಾ ಹುದ್ದೆಗಳನ್ನು ಇವರಿಬ್ಬರೇ ನಿಭಾಯಿಸಿಕೊಂಡು ಇನ್ನೂ ಕೆಎಸ್‌ಆರ್‌ಟಿಸಿಯ ನೌಕರರಿಗೆ ಕೆಲಸ ಮಾಡಿಕೊಡಲು ಟೈಮ್ ಎಲ್ಲಿಂದ ಸಿಗಬೇಕು ಇವರಿಗೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಇಂಥ ಹಲವಾರು ಪ್ರಶ್ನೆಗಳನ್ನು ನೊಂದ ಸಾರಿಗೆ ನೌಕರರು ಕೇಳುತ್ತಿರುವುದು ತುಂಬಾ ವೈರಲ್ ಆಗುತ್ತಿದೆ.