Vijayapatha - ವಿಜಯಪಥ > Blog > NEWS > ದೇಶ-ವಿದೇಶ > ಡಾ.ಪುನೀತ್ ರಾಜ್‌ಕುಮಾರ್ ಸ್ಮರಣೆ: ಕನ್ನಡದಲ್ಲೇ ಟ್ವೀಟ್ ಮಾಡಿದ ದೆಗಲಿ ಸಿಎಂ ಅರವಿಂದ್ ಕೇಜ್ರಿವಾಲ್
ಡಾ.ಪುನೀತ್ ರಾಜ್‌ಕುಮಾರ್ ಸ್ಮರಣೆ: ಕನ್ನಡದಲ್ಲೇ ಟ್ವೀಟ್ ಮಾಡಿದ ದೆಗಲಿ ಸಿಎಂ ಅರವಿಂದ್ ಕೇಜ್ರಿವಾಲ್
Editordev29/10/2022
ನ್ಯೂಡೆಲ್ಲಿ:ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್‌ರವರ ಮೊದಲ ವರ್ಷದ ಪುಣ್ಯತಿಥಿಯಾದ ಶನಿವಾರದಂದು ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪುನೀತ್‌ರವರನ್ನು ಸ್ಮರಿಸಿಕೊಂಡರು.
“ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ” ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಅರವಿಂದ್ ಕೇಜ್ರಿವಾಲ್, “ನಾನು ಡಾ. ಪುನೀತ್ ರಾಜ್‌ಕುಮಾರ್‌ರವರನ್ನು ಪುಣ್ಯತಿಥಿಯಂದು ವಿಶೇಷವಾಗಿ ಸ್ಮರಿಸುತ್ತಿದ್ದೇನೆ. ಅವರ ಚಲನಚಿತ್ರಗಳು, ಹಾಡುಗಳು, ಸಹೃದಯಿ ವ್ಯಕ್ತಿತ್ವ, ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದೂ ತೊರೆಯುವುದಿಲ್ಲ ಎಂದೆನಿಸುವಂತೆ ಮಾಡಿವೆ. ಅವರು ಯಾವಾಗಲೂ ಕರುನಾಡಿನ ಪವರ್ ಸ್ಟಾರ್ ಆಗಿಯೇ ಇರುತ್ತಾರೆ” ಎಂದು ಹೇಳಿದ್ದಾರೆ.
ಕರ್ನಾಟಕದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಸೇರಿದಂತೆ ಅನೇಕ ಎಎಪಿ ಮುಖಂಡರು ಕೂಡ ಪುಣ್ಯತಿಥಿಯಂದು ಪುನೀತ್ ರಾಜ್‌ಕುಮಾರ್‌ರವರನ್ನು ಸ್ಮರಿಸಿಕೊಂಡರು.
Related
Editordev
Leave a reply