Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

6ನೇ ವೇತನಕ್ಕೆ ಒಳಪಟ್ಟರೆ ಇವೆರಡನ್ನೂ ಸಾರಿಗೆ ಕಾರ್ಮಿಕ ವರ್ಗ ಕಳೆದುಕೊಳ್ಳುತ್ತದೆ : ಎಐಟಿಯುಸಿ ಕುಮಾರ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೀವು ಒಂದ್ ಸೈಡ್ ಮಾತ್ರ ನೋಡಿ ಬರೆಯುತ್ತಿದ್ದೀರಿ. ನೀವು ಬರೆದಂತೆ ಅಲ್ಲಿ ಯಾರು, ಯಾರನ್ನು ಕಾಲಕಸದಂತೆ ನೋಡುತ್ತಿಲ್ಲ. ಏಕೆಂದರೆ ನಾವು ಇನ್ನೂ ಅಲ್ಲೇ ಇದ್ದಿವಿ. ಅಲ್ಲಿನ ವ್ಯವಸ್ಥೆ ಹೇಗಿದೆ ಅಂತ ನಮಗೆ ಗೊತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೊಂದ ನೌಕರರು ಸಾಮಾಜಿಕ ಜಾಲ ತಾಣಗಳಲ್ಲಿ ಎಐಟಿಯುಸಿ ಬಗ್ಗೆ ಹರಿಯಬಿಟ್ಟಿರುವ ವಿಷಯದ ಬಗ್ಗೆ ಎಐಟಿಯುಸಿ ಸಂಘಟನೆಯ ಸದಸ್ಯ ಕುಮಾರ್‌ ಈ ಹೇಳಿಕೆ ನೀಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇನ್ನೂ ಹುದ್ದೆಗಳ ಬಗ್ಗೆ ಬರೆದಿರುವಿರಿ. ಆಯಾ ಘಟಕಗಳ ಕಾರ್ಮಿಕ ವರ್ಗಕ್ಕೆ ಇವರ ನೇತೃತ್ವದಲ್ಲಿ ಸಾಗಬೇಕೆಂಬ ಹೆಬ್ಬಯಕೆ ಇದೆ. ಆದ್ದರಿಂದ ಅಷ್ಟೊಂದು ಜವಾಬ್ದಾರಿ ಅವರು ಹೊತ್ತಿದ್ದಾರೆ. ಅಲ್ಲದೇ ಕಾರ್ಮಿಕರ ಬಯಕೆ ಅದೇ ಆದಾಗ ಅದರಲ್ಲಿ ತಪ್ಪೇನಿದೆ?? ಎಂದು ಪ್ರಶ್ನಿಸಿದ್ದಾರೆ.

ನಿಮಗೆ ಈ ಹಿಂದೆಯೂ ಹೇಳಿದ್ದೆ ಪತ್ರಿಕಾ ಧರ್ಮವನ್ನು ಪಾಲಿಸಿ ಅಂತ. ಆದರೆ ಕೆಲ ದಿನಗಳಷ್ಟೇ ಪಾಲಿಸಿದಂತೆ ಇತ್ತು!! ಆದರೆ ಮತ್ತೆ ಇವತ್ತು ಈ ವರದಿ ಮಾಡಿದ್ದೀರಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ ಒಂದು ವರದಿ ಬರಬೇಕಾದರೆ ಆ ಮಾಹಿತಿ ವಸ್ತುನಿಷ್ಠವಾಗಿರಬೇಕು ಮತ್ತು ನಿಖರವಾಗಿಯೂ ಇರಬೇಕು. ಆದರೆ ನೀವು ಈ ವರದಿಯಲ್ಲಿ ಅದನ್ನು ಮರೆತಂತಿದೆ. ಏಕೆ ಅಂತ ನಮಗೆ ಕಾರಣ ಗೊತ್ತಿಲ್ಲ ಎಂದು ವಿಜಯಪಥದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಗ್ರಾಚ್ಯುಟಿ ಮತ್ತು ಓಪನ್ ಎಂಡಿಂಗ್ ಸ್ಕೇಲ್ ಬಗ್ಗೆಯೂ ನೀವು ನೌಕರರು ಬರೆದಿರುವಿರಿ. ಅವು ಏಕಪಕ್ಷೀಯವಾಗಿ ಆದಂತಹ ಆದೇಶಗಳು. ಇದಕ್ಕೆ ಸಂಬಂಧವಾಗಿ ಕೇಸ್ ಕೂಡ ದಾಖಲಾಗಿದೆಯಲ್ಲದೆ, ಜಂಟಿ ಕ್ರಿಯಾ ಸಮಿತಿಯ ಬೇಡಿಕೆಯಲ್ಲಿಯೂ ಇದೆ. ಅಂದರೆ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ನೀವು ನಾನು ಗಮನಿಸಿದಂತೆ ಒಂದು ಸಂಘಟನೆಯ ಪರವಾದ ವರದಿಗಳನ್ನೇ ಮಾಡಿದ್ದಿದೆ. ಆದರೆ ಅದೇ ಸಂಘಟನೆ ಈ ಗ್ರಾಚ್ಯುಟಿ ಮತ್ತು ಓಪನ್ ಎಂಡಿಂಗ್ ಸ್ಕೇಲ್ ಗಳು ಅವರ ಬೇಡಿಕೆಯಿಂದನೇ ಕಳೆದುಕೊಳ್ಳುತ್ತಿದ್ದಾರೆ. ಅದರ ಬಗ್ಗೆ ನಮ್ಮ ಅಭಿಪ್ರಾಯವೇನು?

ಏಕೆಂದರೆ ಆರನೇ ವೇತನಕ್ಕೆ ಒಳಪಟ್ಟರೆ ಇವೆರಡನ್ನೂ ಸಾರಿಗೆ ಕಾರ್ಮಿಕ ವರ್ಗ ಕಳೆದುಕೊಳ್ಳುತ್ತದೆ. ಇದರಿಂದ ಇಡೀ ಕಾರ್ಮಿಕ ಸಮೂಹಕ್ಕೆ ಅನ್ಯಾಯವಾಗುತ್ತದೆಯಲ್ಲ. ಇದು ಇವರು ಮಾಡುವ ಮೋಸ ಅಲ್ಲವಾ?? ಇದರ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮುಷ್ಕರದ ಸಮಯದಲ್ಲಿ ವಜಾ ಆದವರ ಬಗ್ಗೆ ಬರೆದಿರುವಿರಿ. ಯಾವ ಸಂಘಟನೆಯು ಕೂಡ ವಜಾ ಆದವರ ಬಗ್ಗೆ ಅಸಡ್ಡೆ ಮಾಡಿಲ್ಲ. ಅವುಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಿವೆ. ಅಲ್ಲದೇ ಈಗ ಜಂಟಿಯಾಗಿ ಬೇಡಿಕೆಯನ್ನು ಸಲ್ಲಿಸಿವೆ.

ಆದರೆ ಅದೇ ಕೂಟದ ಚಂದ್ರು ಒಂದು ಸಂಘಟನೆ ವಜಾ ಆದವರ ಪರವಾಗಿ ಹೋರಾಟ ಮಾಡುತ್ತಿರುವಾಗ ಯಾರೂ ಅಲ್ಲಿ ಹೋಗಬೇಡಿ ಅಂತ ವಿಡಿಯೋ ಮಾಡಿ ಬಿಟ್ಟನಲ್ಲ ಅದರ ಮರ್ಮವೇನು ಎಂದು ಕೂಡ ಪ್ರಶ್ನಿಸಿರುವ ಕುಮಾರ್‌, ಇನ್ನೂ ಬಹಳಷ್ಟಿದೆ…. ಮತ್ತೊಮ್ಮೆ ನೋಡೋಣ ಎಂದು ವಾಟ್ಸ್‌ಆಪ್‌ ಮೂಲಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ