ಬೆಂಗಳೂರು: ಸಾರಿಗೆ ನೌಕರರ ಕನಸ್ಸು ನನಸಾಗುವತ್ತ ನಮ್ಮ ಸರ್ಕಾರ ಹೆಜ್ಜೆ ಇಡುತ್ತಿದೆ ಎಂದು ಸಾರಿಗೆ ಬಿ.ಶ್ರೀರಾಮುಲು ಹೇಳಿದ್ದಾರೆ.
ನಮಗೂ ಸಾರಿಗೆ ನೌಕರರ ಸಮಸ್ಯೆ ಅರ್ಥವಾಗುತ್ತಿದೆ. ಹೀಗಾಗಿ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸುವುದು ಕಷ್ಟಸಾಧ್ಯವಾಗಿದ್ದರೂ ನಮ್ಮ ಸರ್ಕಾರ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದುಕ್ಕೆ ಹಿಂದೆ ಸರಿಯುತ್ತಿಲ್ಲ. ಆದರೆ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇಲ್ಲಿಯವರೆಗೂ ಮುಂದಿಡಿದ್ದೆವು ಎಂದು ಸಮಾರಂಭ ಒಂದರಲ್ಲಿ ನೌಕರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೆ ಇನ್ನು ಮುಂದೆ ಈರೀತಿಯ ಸಮಸ್ಯ ಆಗದಂತೆ ಶಾಶ್ವತ ಮುಕ್ತಿ ನೀಡಲು ಸರ್ಕಾರ ಮುಂದಡಿ ಇಟ್ಟಿದ್ದು ಅತೀಶೀಘ್ರದಲ್ಲೇ ನೌಕರರ ಬೇಡಿಕೆಯಂತೆ ವೇತನ ನೀಡುವ ಸಂಬಂಧ ಸಿಹಿ ಸುದ್ದಿ ನೀಡಲಾಗುವುದು ಎಂದು ಸ್ವತಃ ಸಾರಿಗೆ ಸಚಿವ ಶ್ರೀರಾಮುಲು ಅವರೆ ನೌಕರರಿಗೆ ತಿಳಿಸಿದ್ದಾರೆ.
ಇನ್ನು ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲೂ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಆ ವೇಳೆ ನಾನೆ ಸಾರಿಗೆ ಸಚಿವನಾಗಲಿದ್ದು ಬಜೆಟ್ನಲ್ಲೂ ಹಣ ಮೀಸಲಿಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ವೇತನ ಆಯೋಗದ ಮಾದರಿಯಲ್ಲೇ ನಮ್ಮ ಸರ್ಕಾರ ಈಗ ರಾಜ್ಯ ಸರ್ಕಾರಿ ನೌಕರರಿಗೆ ರಚಿಸಿರುವ 7ನೇ ವೇತನ ಆಯೋಗದಂತೆ ಸಾರಿಗೆ ನೌಕರರಿಗೂ ಇದೆ ಮಾದರಿಯಲ್ಲಿ ವೇತನ ನೀಡಲಾಗುವುದು ಎಂದು ನೌಕರರಿಗೆ ಪರೋಕ್ಷವಾಗಿ ತಿಳಿಸಿದ್ದಾರೆ.