NEWS

KKRTC: ವರ್ಗಾವಣೆಗೊಂಡು ಮೂರು ದಿನಗಳು ಕಳೆದರೂ ಕದಲದ ಕೊಪ್ಪಳ ಘಟಕ ಡಿಎಂ – ಮೇಲಧಿಕಾರಿಗಳ ಅದೇಶಕ್ಕೂ ಕಿಮ್ಮತ್ತಿಲ್ಲ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕೊಪ್ಪಳ: ಕಲ್ಯಾಣ ಕರ್ನಾಕಟ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ಘಟಕ ವ್ಯವಸ್ಥಾಪಕರು ಬಳ್ಳಾರಿ ವಿಭಾಗದ ಸಂಡೂರು ಘಟಕಕ್ಕೆ ವರ್ಗಾವಣೆಗೊಂಡು ಮೂರುದಿನಗಳು ಕಳೆದರೂ ಇನ್ನೂ ಸಂಡೂರಿನ ಘಟಕ್ಕೆ ಹೋಗಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದೇ ಡಿಸೆಂಬರ್‌ 10 ರಂದು ಕೊಪ್ಪಳ ವಿಭಾಗದ ಕೊಪ್ಪಳ ಘಟಕದ ವ್ಯವಸ್ಥಾಪಕ ಬಿ.ವಿ. ಭಟ್ಟೂರ ಅರವನ್ನು   ಸಂಡೂರು ಘಟಕಕ್ಕೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಆದರೆ ಅವರ ಆದೇಶವನ್ನು ಧಿಕ್ಕರಿಸಿ ಕೊಪ್ಪಳದಲ್ಲೇ ಉಳಿಯಬೇಕು ಎಂದು ಹಾಲಿ ಮಾಜಿ ಶಾಸಕರು ಮತ್ತು ಸಂಸದರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಘಟಕದಲ್ಲಿ ಭಟ್ಟೂರ ಅವರು ನೌಕರರಿಗೆ ತುಂಬ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇವರ ಕರ್ಮಕಾಂಡ ಹೇಳ ತೀರದಾಗಿದೆ ಎಂದು ಹೆಸರೇಳಲಿಚ್ಛಿಸಿದ ಘಟಕದ ಸಿಬ್ಬಂದಿ ಆರೋಪಿಸಿದ್ದಾರೆ.

ಇನ್ನು ಈ ಹಿಂದೆಯೂ 2-3 ಬಾರಿ ವರ್ಗಾವಣೆಗೊಂಡಿದ್ದರು ಆಗಲು ಶಾಸಕರು ಸಂಸದರಿಂದ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ತಂದು ವರ್ಗಾವಣೆ ಆದೇಶ ರದ್ದು ಮಾಡಿಸಿಕೊಂಡು ಘಟಕದಲ್ಲೇ ಉಳಿದುಕೊಂಡರು. ಈಗ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೂರು ದಿನ ಕಳೆದರೂ ಮೇಲಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಘಟಕದ ಸಿಬ್ಬಂದಿ ಆರೋಪಿಸಿದ್ದಾರೆ.

ಇನ್ನು ಘಟಕದಲ್ಲಿ ಭಾರಿ ಭ್ರಷ್ಟಾಚಾರ ಮಾಡಿಕೊಂಡು ಕೊಪ್ಪಳದಿಂದ ಕದಲದೆ ಅಲ್ಲೇ ಉಳಿದುಕೊಳ್ಳುವುದಕ್ಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಅದಕ್ಕೆ ಮೇಲಧಿಕಾರಿಗಳು ಅವಕಾಶ ಮಾಡಿಕೊಡದೆ ಘಟಕ ವ್ಯವಸ್ಥಾಪಕರನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಕ್ಕೂ ಸಿದ್ಧರಿದ್ದೇವೆ ಎಂದು ಘಟಕದ ಸಿಬ್ಬಂದಿ ಒತ್ತಾಯ ಪೂರ್ವಕ ಮನವಿ ಮಾಡಿದ್ದಾರೆ.

ಇನ್ನು ಘಟಕ ವ್ಯಸ್ಥಾಪಕರು ನೌಕರರಿಂದ ಲಂಚ ವಸೂಲಿ ಮಾಡುತ್ತಾರೆ ಎಂಬುದರ ಬಗ್ಗೆ ಸಿಬ್ಬಂದಿ ಪೋನ್‌ ಸಂಭಾಷಣೆಯಲ್ಲಿ ತೊಡಗಿರುವ ಆಡಿಯೋ ಕೂಡ ವಿಜಯಪಥಕ್ಕೆ ಲಭ್ಯವಾಗಿದ್ದು, ಡಿಎಂ ಅವರ ಭ್ರಷ್ಟಾಚಾರವನ್ನು ಅನಾವರಣಗೊಳಿಸಿದ್ದಾರೆ.

ಘಟಕದಲ್ಲಿ ಲಂಚ ಕೊಡದೆ ರಜೆ ಸಿಗುವುದಿಲ್ಲ, ರೂಟ್‌ಗಳು ಸಿಗುವುದಿಲ್ಲ ಎಂಬ ಆರೋಪವನ್ನು ಸಿಬ್ಬಂದಿ ಮಾಡಿದ್ದು, ಘಟಕದಲ್ಲಿ ನಡೆಯುತ್ತಿರುವ ಲಂಚವತಾರದಿಂದ ಬೇಸತ್ತಿದ್ದೇವೆ. ಹೀಗಾಗಿ ವರ್ಗಾವಣೆಗೊಂಡಿರುವ ಡಿಎಂ ಅವರು ಮತ್ತೆ ಇಲ್ಲೇ  ಉಳಿದುಕೊಳ್ಳುವ ಪ್ರಯತ್ನಕ್ಕೆ ಆದ್ಯತೆ ನೀಡಬಾರದು ಎಂದು ನೊಂದ ಸಿಬ್ಬಂದಿ ವರ್ಗ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಮತ್ತು ನಿಗದಮ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.

ವರ್ಗಾವಣೆ ಆದೇಶ ಹೊರಡಿಸಿರುವುದು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ