NEWSನಮ್ಮಜಿಲ್ಲೆನಮ್ಮರಾಜ್ಯ

ಕಸ ಸಂಸ್ಕರಣೆಯಿಂದ ತ್ಯಾಜ್ಯ ಸಮಸ್ಯೆಗೆ ಮುಕ್ತಿ : ತುಷಾರ್ ಗಿರಿನಾಥ್

ಸ್ವಚ್ಛ ಸರ್ವೇಕ್ಷಣ -2023ರ ಕಾರ್ಯಕ್ರಮ"ದಡಿ ಶ್ರಮಿಸುತ್ತಿರುವವರಿಗೆ ಉತ್ತೇಜನಾ ಅಭಿನಂದನಾ ಸಮಾರಂಭ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ವಿಕೇಂದ್ರಿಕೃತ ಪದ್ಧತಿಯನ್ನು ಜಾರಿಗೊಳಿಸಿ ಸ್ಥಳೀಯ ಮಟ್ಟದಲ್ಲಿಯೇ ಕಸವನ್ನು ಸಂಸ್ಕರಣೆ ಮಾಡುವ ಪ್ರಕ್ರಿಯನ್ನು ಜಾರಿಗೊಳಿಸಿದಾಗ ಕಸದ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದು, ಅದಕ್ಕೆ ನಾಗರೀಕರೆಲ್ಲರೂ ಸಂಪೂರ್ಣ ಸಹಕಾರ ನೀಡಬೇಕಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಕೋಶದ ವತಿಯಿಂದ ಇಂದು ಟೌನ್ ಹಾಲ್ ನಲ್ಲಿ “ಸ್ವಚ್ಛ ಸರ್ವೇಕ್ಷಣ -2023ರ ಕಾರ್ಯಕ್ರಮ”ದಡಿ ಶ್ರಮಿಸುತ್ತಿರುವವರಿಗೆ ಹಮ್ಮಿಕೊಂಡಿದ್ದ ಉತ್ತೇಜನಾ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಮನೆ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿದಾಗ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ಆದ್ದರಿಂದ ನಗರದ ನಾಗರಿಕರೆಲ್ಲರೂ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ಪಾಲಿಕೆಯ ಕಸದ ವಾಹನಗಳಿಗೆ ನೀಡುವ ಮೂಲಕ ನಗರವನ್ನು ಸ್ವಚ್ಛತೆಯಿಂದಿರುವಂತೆ ಮಾಡಬೇಕು. ಕಸವನ್ನು ರಸ್ತೆ/ ಬೀದಿ ಬದಿ ಬಿಸಾಡುವುದು, ಸುಡುವುದನ್ನು ಮಾಡದೆ ಪ್ರತಿನಿತ್ಯ ತಪ್ಪದೆ ಪಾಲಿಕೆಯ ವಾಹನಗಳಿಗೆ ನೀಡುವ ಅಭ್ಯಾಸನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನಗರದ ಸ್ವಚ್ಛತೆಗಾಗಿ 16,000ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ನಗರವನ್ನು ಸ್ವಚ್ಛ ಮಾಡುತ್ತಾರೆ. ಅದಲ್ಲದೆ ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಮೂಲಕವೂ ಸ್ವಚ್ಛತೆ ಮಾಡಲಾಗುತ್ತದೆ. ಆದರೆ, ಮನೆ-ಮನೆಯಿಂದ ಕಸ ಸಂಗ್ರಹಿಸುವ ಪದ್ಧತಿಯನ್ನು ಸರಿಯಾಗಿ ಪಾಲಿಸದಿರುವ ಕಾರಣ ನಗರದಲ್ಲಿ ಕಸದ ಸಮಸ್ಯೆಯಿದೆ. ಅದೆಲ್ಲವನ್ನು ಮಾರ್ಪಾಡು ಮಾಡಬೇಕಾದರೆ ಎಲ್ಲ ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಇನ್ನು ರಾತ್ರಿ ವೇಳೆ ಬೀದಿ ಬದಿ ಕಸ ಬಿಸಾಡುವುದರಿಂದ ನಗರದಲ್ಲಿ ಸಾಕಷ್ಟು ಕಡೆ ಬ್ಲಾಕ್ ಸ್ಪಾಟ್ ಗಳು ಉತ್ಪತ್ತಿಯಾಗುತ್ತವೆ. ಅದನ್ನು ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛಗೊಳಿಸುತ್ತಾರೆ. ಇನ್ನೂ ಕೆಲವೆಡೆ ಸ್ವಚ್ಛ ಮಾಡಿ ಸೌಂದರ್ಯೀಕರಣ ಮಾಡಲಾಗಿದೆ. ಅದರೆ, ಮತ್ತದೇ ಸ್ಥಳದಲ್ಲಿ ಕೆಲವೇ ದಿನದಲ್ಲಿ ಬ್ಲಾಕ್ ಸ್ಪಾಟ್ ಉತ್ಪತ್ತಿಯಾಗುತ್ತದೆ. ಇದೆಲ್ಲವೂ ನಿಯಂತ್ರಣವಾದಾಗ ನಗರ ಸ್ವಚ್ಛನಗರವಾಗಿಸಲು ಸಾಧ್ಯ ಎಂದು ಹೇಳಿದರು.

ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಾಧ್ಯ: ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಬಿಬಿಎಂಪಿಗೆ ಕಳೆದ ಬಾರಿ ನಿರೀಕ್ಷಿತ ರ‍್ಯಾಂಕ್ ಲಭಿಸಿಲ್ಲ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ ಕಸದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಈ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕು. ಜೊತೆಗೆ ನಾಗರಿಕರಿಗೆ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿವಿಧ 5 ವರ್ಗಗಳಲ್ಲಿ ಪ್ರಶಸ್ತಿ ವಿತರಣೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಕೋಶದ ವತಿಯಿಂದ ನಮ್ಮ ನಡೆ, ಸ್ವಚ್ಛತೆಯ ಕಡೆ ಎಂಬ ಗುರಿಯೊಂದಿಗೆ ಹಾಗೂ ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ದ್ಯೇಯವಾಕ್ಯದೊಂದಿಗೆ “ಸ್ವಚ್ಛ ಸರ್ವೇಕ್ಷಣ-2023ರ ಕಾರ್ಯಕ್ರಮ”ದಡಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ರೀತಿಯ 5 ವರ್ಗಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ಕಾರ್ಯ ಮಾಡಿರುವವರಿಗೆ ಅಭಿನಂದಿಸಿ ಪ್ರಶಸ್ತಿ ವಿತರಿಸಲಾಯಿತು.

ವರ್ಗ 1: ಸ್ವಚ್ಛತಾ ಚಾಂಪಿಯನ್: ಘನತ್ಯಾಜ್ಯ ನಿರ್ವಹಣೆ ಚಟುವಟಿಕೆಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ 30 ನಾಗರಿಕರಿಕರನ್ನು ಗುರುತಿಸಿ ಸ್ವಚ್ಛತಾ ಚಾಂಪಿಯನ್ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ವರ್ಗ 2: ಅತ್ಯುತ್ತಮ ಕೊಡುಗೆ ನೀಡಿರುವ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿ: ಪ್ರತಿ ವಾರ್ಡ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ವಿಭಾಗದ ಸಿಬ್ಬಂದಿಯ ತ್ರೈಮಾಸಿಕ ಮನ್ನಣೆಯಾಗಿದ್ದು, ಇದಕ್ಕಾಗಿ ಒಟ್ಟು 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 24 ಮಾರ್ಷಲ್ ಮೇಲ್ವಿಚಾರಕರು, 26 ಪೌರಕಾರ್ಮಿಕರು/ಮೇಲ್ವಿಚಾರಕರು, 26 ಕಿರಿಯ ಆರೋಗ್ಯ ಪರಿವೀಕ್ಷಕರು, 9 ಲಿಂಕ್ ವರ್ಕರ್ಸ್, 31 ಮಾರ್ಷಲ್‌ಗಳು ಹಾಗೂ 3 ಪ್ಲಾಂಟ್ ಮ್ಯಾನೇಜರ್‌ಗಳನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು.

ವರ್ಗ 3: ವಾರ್ಡ್ ಶ್ರೇಯಾಂಕ: ಸ್ವಚ್ಛ ವಾರ್ಡ್: ಎಲ್ಲಾ ಹೋಟೆಲ್‌ಗಳು, ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಮಾರುಕಟ್ಟೆ, ಸರ್ಕಾರಿ ಕಛೇರಿಗಳು ಮತ್ತು ಸಾಮಾನ್ಯ ಶುಚಿತ್ವವನ್ನು ಒಳಗೊಂಡಿರುವ ಸ್ವಚ್ಛ ವಾರ್ಡ್ ಶ್ರೇಯಾಂಕವನ್ನು ಪ್ರತಿ ತಿಂಗಳು ಮಾಡಲಾಗುತ್ತದೆ. ಅದರಂತೆ ಪ್ರತಿ ತಿಂಗಳು ಶ್ರೇಯಾಂಕದ ಮೂಲಕ ಮೊದಲ 2 ವಾರ್ಡ್ ಗಳನ್ನು ಸ್ವಚ್ಛ ವಾರ್ಡ್ ಗಳನ್ನಾಗಿ ಗುರುತಿಸಲಾಗುತ್ತದೆ.

ವರ್ಗ 4: ಐಇಸಿ(ಮಾಹಿತಿ ಶಿಕ್ಷಣ ಸಂವಹನಗಳು) ಚಟುವಟಿಕೆಗಳು: ಸ್ಪರ್ಧೆ: ನಗರದ ನೈರ್ಮಲ್ಯ ಮಟ್ಟವನ್ನು ಸುಧಾರಿಸಲು ನಾಗರಿಕರಿಂದ ಜಿಂಗಲ್ಸ್, ಚಲನಚಿತ್ರಗಳು, ಪೋಸ್ಟರ್, ಡ್ರಾಯಿಂಗ್, ಭಿತ್ತಿಚಿತ್ರಗಳ ಮೂಲಕ ನೀಡುವ ಕಲ್ಪನೆಗಳನ್ನು ಪಡೆಯುವ ಸ್ಪರ್ಧೆಯನ್ನು ಆಯೋಜಿಸಿ, ನಾಗರಿಕರು ನೀಡುವ ಕಲ್ಪನೆಗಳನ್ನು ಕೂಲಕುಂಶವಾಗಿ ಪರಿಶೀಲಿಸಿದ ನಂತರ ಉತ್ತಮ ಪರಿಕಲ್ಪನೆಗಳನ್ನು ನೀಡಿರುವ ಮೊದಲ ಮೂರು ಸ್ಥಾನಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ವರ್ಗ 5: ಸ್ವಚ್ಛ ತಂತ್ರಜ್ಞಾನ, ನಾವೀನ್ಯತೆಗಳು ಮತ್ತು ಉತ್ತಮ ಅಭ್ಯಾಸ: ಸ್ವಚ್ ಟೆಕ್ನಾಲಜಿ ಚಾಲೆಂಜ್, ಆವಿಷ್ಕಾರಗಳು ಮತ್ತು ಅತ್ಯುತ್ತಮ ಅಭ್ಯಾಸದ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿನ ಅತ್ಯುತ್ತಮ ಅಭ್ಯಾಸಗಳಿಗಾಗಿ ಮೊದಲ 4 ಸ್ಥಾನಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಈ ವೇಳೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಜಂಟಿ ಆಯುಕ್ತ ಪರಶುರಾಮ್ ಶಿನ್ನಾಳಕರ್, ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಮುಖ್ಯ ಅಭಿಯಂತರ ಪರಮೇಶ್ವರಯ್ಯ, ಮುಖ್ಯ ಮಾರ್ಷಲ್ ರಾಜ್ ಭೀರ್ ಸಿಂಗ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ