ಶಿರಸಿ: ಪ್ರಯಾಣಿಕರು ಬಸ್ನಲ್ಲಿ ಮರೆತು ಬಿಟ್ಟುಹೋಗಿದ್ದ 6-7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾರಸುದಾರರಿಗೆ ವಾಪಸ್ ಮಾಡುವ ಮೂಲಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ಘಟಕದ ಚಾಲನಾ ಸಿಬ್ಬಂದಿ ಪ್ರಮಾಣಿಕತೆ ಮೆರೆದಿದ್ದಾರೆ.
ನಿರ್ವಾಹಕ ಸೇವಾಲಾಲ್ ರಾಥೋಡ್ ಹಾಗೂ ಚಾಲಕ ವಿನೋದ್ ನಾಯ್ಕ್ ಪ್ರಯಾಣಿಕರು ಬಿಟ್ಟು ಹೋಗಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಬೆಳ್ಳಿ ಬಂಗಾರದ ಆಭರಣಗಳನ್ನು ವಾರಸುದಾರರಿಗೆ ಮರಳಿಸಿ ತಮ್ಮ ಸೇವಾ ಪ್ರಾಮಾಣಿಕತೆಯನ್ನು ಮೆರೆದ ಚಾಲನಾ ಸಿಬ್ಬಂದಿ.
ಬಸ್ನಲ್ಲಿ ಪ್ರಯಾಣಿಕರು ಚಿನ್ನಾಭರವನ್ನು ಬಿಟ್ಟು ಹೋಗಿರುವ ವಿಷಯವನ್ನು ಕೂಡಲೇ ಸಿರ್ಸಿ ಘಟಕ ವ್ಯವಸ್ಥಾಪಕ ಸರ್ವೇಶ್ ನಾಯಕ್ ಅವರ ಗಮನಕ್ಕೆ ತಂದಿದ್ದಾರೆ. ಅವರು ಆ ಎಲ್ಲ ಆಭರಣಗಳನ್ನು ಪಡೆದು ಜೋಪಾಮ ನಾಡಿದ್ದರು.
ಇನ್ನು ಚಾಲನಾ ಸಿಬ್ಬಂದಿಯ ಈ ಪ್ರಾಮಾಣಿಕತನವನ್ನು ಶಿರಸಿ ವಿಭಾಗಿಯ ನಿಯಂತ್ರಾಧಿಕಾರಿ ಶ್ರೀನಿವಾಸ್ ನಾಯಕ್ ಶ್ಲಾಘಿಸಿದ್ದು, ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿದ್ದಾರೆ. ಇಂತಹ ನೌಕರರು ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಚಾಲನಾ ಸಿಬ್ಬಂದಿಯ ಕಾರ್ಯವನ್ನು ಕೇಂದ್ರ ಕಚೇರಿಗೆ ಶಿಫಾರಸು ಮಾಡಿ ಪ್ರಶಸ್ತಿ ಪತ್ರ ಮತ್ತು ಗೌರವವನ್ನು ಸಲ್ಲಿಸುವುದಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಆಭರಣಗಳನ್ನು ಮರಳಿ ಪಡೆದ ವಾರಸುದಾರರು ಸಹ ಹರ್ಷ ವ್ಯಕ್ತಪಡಿಸಿದ್ದು ಪ್ರಾಮಾಣಿಕತೆ ಮೆರೆದ ಸಿಬ್ಬಂದಿಗಳಿಬ್ಬರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು.
ನಿಮ್ಮ ವಿಜಯಪಥ ಕನ್ನಡ ಯೂ ಟೂಬ್ ಚಾಲನ್ಅನ್ನು ಸಬ್ಸ್ಕ್ರೈಬ್ ಮಾಡಿಕೊಂಡು ಉತ್ತೇಜಿಸಿ… ಸಂಪಾದಕರು.