ನಮ್ಮಜಿಲ್ಲೆಸಂಸ್ಕೃತಿ

ಬೀಡನಹಳ್ಳಿಯಲ್ಲಿ ಮಾರಮ್ಮನ ದೇವಿಯ ವೀರಹಬ್ಬ ಸಡಗರ ಸಂಭ್ರಮದಿಂದ ಜರುಗಿತು

ವಿಜಯಪಥ ಸಮಗ್ರ ಸುದ್ದಿ

ಬೀಡನಹಳ್ಳಿ: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮ ದೇವತೆ ಬೀಡನಹಳ್ಳಿ ಮಾರಮ್ಮನ ದೇವಿಯ ವೀರಹಬ್ಬ ಸಡಗರ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಸೋಮವಾರದ ನಂತರ ಜರುಗುವ ವೀರಹಬ್ಬ ಡಿ.3 ಮತ್ತ ಡಿ.4ರಂದು ಗ್ರಾಮದ ಮುಖಂಡರು ಆಯೋಜನೆ ಮಾಡಿದ್ದು, ಅದರಂತೆ ಸಂಭ್ರಮ ಸಡಗರದಿಂದ ನರವೇರಿತು.

ಬನ್ನೂರು ಹೆಗ್ಗೆರೆಯಿಂದ ಮಂಗಳವಾರ ಸಂಜೆ ಮಜ್ಜನದ ಗಂಗೆ ತಂದು ಪೂಜೆಗಳನ್ನು ಕಟ್ಟಲಾಯಿತು. ಬುಧವಾರ ಮುಂಜಾನೆ ಪೂಜೆಗಳನ್ನು ಹೂ ಹೊಂಬಾಳೆಯಿಂದ ಅಲಂಕರಿಸಿ ಬಾಯಿಬೀಗ ಇರುವವರು ಮಡಿವಂತಿಕೆಯಿಂದ ಒಪ್ಪತ್ತು ಇದ್ದು ಗ್ರಾಮ ದೇವಿಗೆ ಬಾಯಿಬೀಗ ಸೇವೆ ಮಾಡಿ ಹರಕೆ ತೀರಿಸಿದರು.

ಈ ಹಬ್ಬದ ಪ್ರಮುಖ ವಿಷಯವಾದ ವೀರರ ಕುಣಿತ ಅಭಿಮಾನಿಗಳ ಸೂರೆಗೊಂಡಿತು. ಹೌದು ಪ್ರತಿ ವರ್ಷವೂ ನಂಜಾಪುರ ಗ್ರಾಮದ ವೀರರು ಬಂದು ಈ ಸಾಂಪ್ರದಾಯಿಕ ಹಾಗೂ ಸಾಸ್ಕೃತಿಕ ಕಾರ್ಯವನ್ನು ನಡೆಸಿಕೊಡುತ್ತಾರೆ. ಅದರಂತೆ ಪ್ರತಿ ವರ್ಷವರು ಅವರಿಗೆ ಸಂಭಾವನೆ ಕೊಡುವ ಮೂಲಕ ಆಮಂತ್ರಣ ನೀಡಿ ಕರೆಯಲಾಗುತ್ತದೆ.

ಬೀಡನಹಳ್ಳಿ ಗ್ರಾಮದ ಮುಖಂಡರ ಆಹ್ವಾನವನ್ನು ಸ್ವೀಕರಿಸಿ ಈ ಹಬ್ಬಕ್ಕೆ ಕಳಸಪ್ರಾಯವಾದ ವೀರರ ಕುಣಿತವನ್ನು ಮಾಡುವ ಮೂಲಕ ಹಬ್ಬಕ್ಕೆ ಮೆರುಗನ್ನು ನೀಡುತ್ತ ಬಂದಿದ್ದಾರೆ. ಅದರಂತೆ ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆ ವರೆಗೂ ತಮ್ಮ ವೀರರ ಪ್ರದರ್ಶನವನ್ನು ಸಾಂಸ್ಕೃತಿಕವಾಗಿ ತೋರಿಸಿ ಹಾಡು ಕುಣಿತದೊಂದಿಗೆ ಮನರಂಜನೆ ಜತೆಗೆ ಭಕ್ತಿಯನ್ನು ಸಾರುವ ಕೈಂಕರ್ಯವನ್ನು ನೆರವೇರಿಸಿದರು.

ಇನ್ನು ಗ್ರಾಮದಲ್ಲಿ ಎರಡು ದಿನಗಳು ಜರುಗಿದ ಈ ಹಬ್ಬಕ್ಕೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದೆ. ಜತೆಗೆ ನಯನಮನೋಹರವಾದ ವೀರರ ಕುಣಿತವನ್ನು ರಾತ್ರಿ ಪೂರ್ತಿ ಕಣ್ತುಂಬಿಕೊಂಡರು. ಬುಧವಾರ ಬೆಳಗ್ಗೆ ಗ್ರಾಮದ ಪ್ರತಿ ಮನೆಯ ಹೆಂಗಳೆಯದರು ತಂಬಿಟ್ಟಿನ ಆರತಿಯೊಂದಿಗೆ ಬಂದು ಮಾರಮ್ಮ ದೇವಿಗೆ ಸಾಮೂಹಿಕವಾಗಿ ಪೂಜೆ ನೆರವೇರಿಸುವ ಮೂಲಕ ಹಬ್ಬ ಪೂರ್ಣಗೊಳಿಸಿದರು.

Deva
the authorDeva

Leave a Reply

error: Content is protected !!
Latest news
BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ? KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು