ಮೈಸೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಇಂದು ಸಂಸತ್ ಸ್ಥಾನದಿಂದ ಅನರ್ಹ ಗೊಳಿಸಿರುವುದು. ದೇಶದ ದ್ವೇಷಿಯ ರಾಜಕಾರಣಕ್ಕೆ ಮುನ್ನಡೆ ಬರೆದಂತಾಗಲಿದೆ ಎಂದು ಕಬ್ಬು ಬೆಳೆಗಾರರಸ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್
ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಗೊಂಡ ಚುನಾಯಿತ ಪ್ರತಿನಿಧಿಗೆ ಅನರ್ಹಗೊಳಿಸಿರುವುದು ಆ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದಂತಾಗಿದೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ವಿರೋಧಿಗಳ ಧ್ವನಿ ಅಡಗಿಸುವ ಕಾರ್ಯಕ್ಕೆ ಈ ಮೂಲಕ ಮುಂದಾಗಿರುವುದು ಸಂವಿಧಾನದ ವಿರೋಧಿ ಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಇದನ್ನೇ ಮುಂದುವರಿಸಿಕೊಂಡು ಹೋದರೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಈ ರೀತಿ ಕಾರ್ಯ ಮಾಡುವುದು ಅಕ್ಷಮ್ಯ ಅಪರಾಧ ಎಂದು ರಾಜ್ಯಾಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಈ ನಡೆಯನ್ನು ಖಂಡಿಸುತ್ತದೆ. ವಿಶ್ವ ನಾಯಕರೇನಿಸಿಕೊಂಡಿರುವ ಪಕ್ಷದಲ್ಲಿ ಈ ರೀತಿ ನಡೆ ನೆರೆ ರಾಷ್ಟ್ರಗಳಲ್ಲಿ ನಡೆಯುತ್ತಿತ್ತು ಇದೀಗ ಭಾರತದಲ್ಲಿ ನಡೆಯುತ್ತಿರುವುದು. ಶೋಚನೀಯ ಸಂಗತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.