NEWSನಮ್ಮಜಿಲ್ಲೆನಮ್ಮರಾಜ್ಯ

ಒಂದು ದೇಶ ಒಂದೇ ಪರಿಹಾರ, ಅದು ಬಿಜೆಪಿಯ ನಿರ್ಮೂಲನೆ: ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಒಂದೇ ದೇಶ, ಒಂದೇ ಪರಿಹಾರ, ಅದು ಬಿಜೆಪಿಯನ್ನು ನಿರ್ಮೂಲನೆ ಮಾಡುವುದಾಗಿದೆ. ಒಂದು ದೇಶಕ್ಕೆ ಪರಿಹಾರ, ಬಿಜೆಪಿಗೆ ಬಿಡುಗಡೆ. ಒಂದು ದೇಶ, ಒಂದೇ ಶಿಕ್ಷಣ ಎಂದು ನಮ್ಮ ನಾಯಕರಾದ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅಗತ್ಯ ವಿರುವುದನ್ನು ಬಿಟ್ಟು ಉಳಿದದ್ದನ್ನೆಲ್ಲ ತರುತ್ತಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.

ನಗರದಲ್ಲಿ ಸೋಮವಾರ ಪಕ್ಷದ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಘೋಷಣೆ ಮತ್ತು ಜಿಲ್ಲಾ ಸಮಿತಿ ರಚನೆಗೆ ಸಂಬಂಧಿಸಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವ ಸಮಯದಲ್ಲಿ ಬೇಕಾದರೂ ಚುನಾವಣೆ ಬರಬಹುದು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ಬರುವ ಕಾರಣದಿಂದ ಪಕ್ಷ ಸಂಘಟನೆಗೆ ಆಮ್ ಆದ್ಮಿ ಪಕ್ಷ ಮುಂದಾಗಿದೆ. ಈ ಚುನಾವಣೆಗಳಿಗೆ ತಯಾರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಆದ್ಯತೆಯಾಗಿದ್ದು, ಅದರೊಂದಿಗೆ ಸದಸ್ಯತ್ವ ನೋಂದಣಿಯನ್ನು ಮಾಡಲು ಮುಂದಾಗಿದ್ದೇವೆ. ಈ ಮೂಲಕ ಮೂರು ಪಕ್ಷಗಳ ಎದುರು ಹೋರಾಡಬೇಕಿದೆ. ಸೆಪ್ಟೆಂಬರ್ 10ರ ನಂತರ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯದಾದ್ಯಂತ ಪ್ರವಾಸ ಮಾಡಲು, ಸದಸ್ಯತ್ವ ನೋಂದಣಿ ಮಾಡಲು ಚಿಂತಿಸಲಾಗಿದೆ. ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿಯೇ ಉಳಿದುಕೊಂಡು ಜನಸಾಮಾನ್ಯರ ಬಳಿ ಜೊತೆ ಚರ್ಚೆ ಮಾಡಿ, ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ 5 ದಿನ ಸೇರಿದಂತೆ ರಾಜ್ಯದ ಎಲ್ಲಾ ಭಾಗಕ್ಕೂ ಭೇಟಿ ನೀಡಿ ಪಕ್ಷವನ್ನು ಬಲಪಡಿಸಲು ಶ್ರಮಿಸಲಾಗುವುದು. ಪ್ರತಿ ಜಿಲ್ಲೆಯ ಎರಡು ಭಾಗಗಳಿಗೆ ಪ್ರವಾಸ ಮಾಡಿ ಚರ್ಚಿಸಲಾಗುವುದು ಎಂದರು.

ಚುನಾವಣೆಯ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಅವೆಲ್ಲವೂ ಕೇವಲ ರಾಮಮಂದಿರ ಉದ್ಘಾಟನೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದೆ. ನಾವ್ಯಾರು ರಾಮನ ವಿರೋಧಿಯಲ್ಲ, ನಾವು ರಾಮ ಭಕ್ತರೆ. ಆದರೆ, ಸಾವಿರಾರು ಕೋಟಿ ರೂ. ಖರ್ಚು ಮಾಡಿ ರಾಮಮಂದಿರ ನಿರ್ಮಾಣ ಮಾಡುವ ಬದಲೂ ಎಲ್ಲ ಊರುಗಳಲ್ಲಿನ ದೇಗುಲಗಳನ್ನು ಉದ್ಧಾರ ಮಾಡಬೇಕಿತ್ತು.

ಚುನಾವಣೆಯ ವರ್ಷದಲ್ಲಿಯೇ ರಾಮಮಂದಿರ ಉದ್ಘಾಟನೆ ಅಗತ್ಯ ಏನಿತ್ತು. ಸರ್ಕಾರದ ಇತರೆ ಕಾರ್ಯಕ್ರಮಗಳು ಜನರನ್ನು ಮುಟ್ಟುವಲ್ಲಿ ವಿಫಲವಾಗಿದ್ದು, ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಜನರ ಮುಂದೆ ಬರುತ್ತಿದೆ ಎಂದು ದೂರಿದರು.

ದೇವರ ಬಗ್ಗೆ ಅಪಾರವಾದ ಪ್ರೀತಿ ಇದ್ದರೂ ಕೂಡ ಕೇಂದ್ರ ನಡೆ ಬಗ್ಗೆ ಗುಮಾನಿ ಬರುತ್ತಿದೆ. ಅವರದ್ದು ರಾಮಮಂದಿರದ ಉದ್ದೇಶ ಮಾತ್ರವಲ್ಲ. ಅದರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುವುದೇ ಅವರ ಉದ್ಧೇಶ. ಕಳೆದ 9 ವರ್ಷದಿಂದ ಅವರೇ ಅಧಿಕಾರದಲ್ಲಿದ್ದಲೂ ಮಹಿಳಾ ಮೀಸಲಾತಿಯನ್ನು ಏಕೆ ತರಲಿಲ್ಲ.

ವಿಶೇಷ ಅಧಿವೇಶನವನ್ನು ಕರೆದಿದ್ದಾದರೂ ಏಕೆ?. ನಿಮಗೆ ಬೇಕಾದಂತೆ ಚುನಾವಣೆ ಮಾಡಿಕೊಳ್ಳುತ್ತಿರುವಿರಿ. ರಾಜ್ಯಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುತ್ತಿದ್ದೀರಿ ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ದೆಹಲಿಯಲ್ಲಿ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿರುವುದು. ಒಂದೇ ದೇಶ, ಒಂದು ಚುನಾವಣೆಯು ಎಲ್ಲಾ ರಾಜ್ಯಗಳ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿಗಳು ನಾಗಣ್ಣ, ಪ್ರಧಾನ ಕಾರ್ಯದರ್ಶಿ ಸಂಜು ಸೆಹಮಾನ್, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಉಪಸ್ಥಿತರಿದ್ದರು.

ಪಕ್ಷದ ನೂತನ ಪದಾಧಿಕಾರಿಗಳ ಘೋಷಣೆ: ಕರ್ನಾಟಕ ಕಾರ್ಯದರ್ಶಿಗಳಾಗಿ ಅನಂತ್ ಕುಮಾರ್ ಬುಗಾಡಿ, ಬಸವರಾಜ್ ಮುದಿಗೌಡರ, ಗುರುಮೂರ್ತಿ ಬಿ, ಜವರೇಗೌಡ, ಕಾರ್ತಿಕ್ ಕೃಷ್ಣ, ಸೀತಾರಾಮ್ ಜಿ, ರವಿಕುಮಾರ್, ಸಿದ್ದರಾಜು ಎಂ, ಸುರೇಶ್ ಬಿ, ಉಷಾ ಮೋಹನ್ ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿಗಳಾಗಿ ಅಹಮದ್ ಶಾನ್, ಮಹದೇವಸ್ವಾಮಿ, ಪ್ರೇಮಕುಮಾರ್, ರಾಘವೇಂದ್ರ ಕೆಎಲ್, ರಾಜಾ ಶ್ಯಾಂಸುಂದರ್ ನಾಯಕ, ಸಂತೋಷ್ ಕಾಮತ್, ಶರಣಪ್ಪ ಸಜ್ಜಿಹೊಲ, ವೇಣುಗೋಪಾಲ್ ಪುಚ್ಚಪ್ಪಾಡಿ ಆಯ್ಕೆಯಾಗಿದ್ದಾರೆ.

ಆಯ್ಕೆಗೊಂಡ ನೂತನ ಜಿಲ್ಲಾಧ್ಯಕ್ಷರ ಪಟ್ಟಿ: ವಿಜಯಪುರ- ಭೋಗೇಶ ಸೊಲ್ಲಾಪುರ. ಬಾಗಲಕೋಟೆ- ಶಶಿಧರ್ ಹಳಗಲಿಮಠ. ಧಾರವಾಡ- ಪ್ರವೀಣ್ ನಡಕಟ್ಟಿನ. ರಾಯಚೂರು- ವೀರೇಶ್ ಯಾದವ್. ಕೊಪ್ಪಳ- ಕನಕಪ್ಪ ಮಾಳಗಾವಿ. ಬಳ್ಳಾರಿ- ಮಂಜುನಾಥ. ವಿಜಯನಗರ- ನಾರಿ ಶ್ರೀನಿವಾಸ್. ದಾವಣಗೆರೆ- ಕೆಎಸ್ ಶಿವಕುಮಾರಪ್ಪ.

ಶಿವಮೊಗ್ಗ- ಶಿವಕುಮಾರ ಗೌಡ. ಚಿಕ್ಕಮಗಳೂರು- ಲಿಂಗಾರಾಧ್ಯ. ಚಿತ್ರದೂರ್ಗ- ಜಗದೀಶ್ ಬಿಇ. ತುಮಕೂರು- ಜಯರಾಮಯ್ಯ. ಕೋಲಾರ- ಎಂ ರವಿಶಂಕರ್. ಚಿಕ್ಕಬಳ್ಳಾಪುರ- ಸಿ ಬೈರೆಡ್ಡಿ. ರಾಮನಗರ- ಬೈರೇಗೌಡ. ಮಂಡ್ಯ- ಬೊಮ್ಮಯ್ಯ. ಹಾಸನ- ಆನಂದ್. ಮೈಸೂರು- ರಂಗಯ್ಯ ಎಲ್. ಚಾಮರಾಜನಗರ- ಹರೀಶ್. ದಕ್ಷಿಣ ಕನ್ನಡ- ಡಾ. ವಿಶುಕುಮಾರ್. ಉಡುಪಿ- ಡೇನಿಯಲ್ ರಂಗರ್. ಬೆಂಗಳೂರು- ಡಾ. ಸತೀಶ್ ಕುಮಾರ್.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...