ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗ ಸಂಭವಿಸುವ ಅಪಘಾತಕ್ಕೆ 1.15 ಕೋಟಿ ರೂ. ಪರಿಹಾರ ಸಿಗಲಿದೆ. ಅಲ್ಲದೇ ಸಿಬ್ಬಂದಿ ಸಾಮಾನ್ಯವಾಗಿ ಮೃತಪಟ್ಟರು 10 ಲಕ್ಷ ರೂ. ಪರಿಹಾರ ನೀಡಲಾಗುವುದು.
ಹೌದು! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ ನೌಕರರ ಕುಟುಂಬಕ್ಕೆ ಬಿಎಂಟಿಸಿ ನಿಗಮ ಈ ಮೂಲಕ ಗುಡ್‌ನ್ಯೂಸ್ ಕೊಟ್ಟಿದ್ದು, ಕೆಎಸ್‌ಆರ್‌ಟಿಸಿ ಮಾದರಿಯಲ್ಲೇ ಒಂದು ಕೋಟಿ ರೂ. ಅಪಘಾತ ವಿಮೆ ನೀಡುವುದಾಗಿ ತಿಳಿಸಿದೆ.
ಅದು ಫೆ.19ರಿಂದಲೇ ಅಂದರೆ ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ಮೇರೆಗೆ ಈ ಸೌಲಭ್ಯ ನೀಡಲಾಗಿದೆ. ಇದರಿಂದ ಬಿಎಂಟಿಸಿಯ 28,000 ನೌಕರರ ಕುಟುಂಬಗಳಿಗೆ ಈ ಸೌಲಭ್ಯ ದೊರಕಲಿದ್ದು, ಇದಕ್ಕಾಗಿ ನೌಕರರ ವೇತನದಿಂದ ಒಂದಷ್ಟು ಹಣವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.