NEWSಕ್ರೀಡೆದೇಶ-ವಿದೇಶ

ಹೈವೋಲ್ಟೆಜ್​ ಕದನ: ಸೋಲಿನಿಂದ ಕಂಗೆಟ್ಟಿರೋ ಅರ್​​​ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆರ್​​​ಸಿಬಿ v/s ಮುಂಬೈ ಬಿಗ್​ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್​​ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೆಜ್​ ಕದನ ನಡೆಯಲಿದೆ.

ಹ್ಯಾಟ್ರಿಕ್​ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರೋ ಮುಂಬೈ ಇಂಡಿಯನ್ಸ್​, ‘ರಾಯಲ್​ ಚಾಲೆಂಜ್’​ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಆದ್ರೆ ಸೋಲಿನಿಂದ ಕಂಗೆಟ್ಟಿರೋ ಅರ್​​​ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚಾಗಿದೆ. ಆರ್​​​ಸಿಬಿ ಇಂದು ಗೆಲ್ಲಬೇಕು ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು.

ಇಂದಿನ ಪಂದ್ಯದಲ್ಲಿ ಆರ್​​ಸಿಬಿ ತಂಡದಲ್ಲಿ ಎಲ್ಲರೂ​ ನಿರೀಕ್ಷೆ ಮಾಡ್ತಿರೋ ಮೊದಲ ಬದಲಾವಣೆಯೇ ಇದು. ಪರ್ಫಾಮ್​ ಮಾಡಲು ತಿಣುಕಾಡ್ತಿರೋ ಕ್ಯಾಮರೂನ್​ ಗ್ರೀನ್​ ಕಿತ್ತು ಬಿಸಾಕಿ ವಿಲ್​ ಜಾಕ್ಸ್​​ಗೆ ಚಾನ್ಸ್​ ನೀಡಬೇಕು ಅನ್ನೋದು ಫ್ಯಾನ್ಸ್​ ಆಗ್ರಹವಾಗಿದೆ. ವಿಲ್​ ಜಾಕ್ಸ್​​, ಫಾಫ್​ ಡುಪ್ಲೆಸಿ ಜೊತೆ ಇನ್ನಿಂಗ್ಸ್​ ಓಪನ್​ ಮಾಡಿದ್ರೆ ತಂಡಕ್ಕೆ ಅದ್ದೂರಿ ಆರಂಭ ಸಿಗುತ್ತೆ ಅನ್ನೋ ನಿರೀಕ್ಷೆಯಿದೆ.

ನಂಬರ್​ 3 ವಿರಾಟ್​ ಕೊಹ್ಲಿ ಫೇವರಿಟ್​ ಸ್ಲಾಟ್​. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ಸದ್ಯ ಸಾಲಿಡ್​ ಫಾರ್ಮ್​ನಲ್ಲಿರೋ ವಿರಾಟ್​ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್​​ಸಿಬಿಯ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಸ್ಟ್ರೆಂಥ್​ ಹೆಚ್ಚಲಿದೆ.

ವೈಫಲ್ಯದ ಸುಳಿಗೆ ಸಿಲುಕಿರೋ ರಜತ್​ ಪಟಿದಾರ್​ಗೆ ಗೇಟ್​ ಪಾಸ್​ ನೀಡಿ ಲೆಫ್ಟ್​ ಆರ್ಮ್​ ಬ್ಯಾಟರ್​ ಅನುಜ್​ ರಾವತ್​ಗೆ ಚಾನ್ಸ್​ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್​ ರಾವತ್​ ಕಣಕ್ಕಿಳಿದ್ರೆ, ಬ್ಯಾಟಿಂಗ್​ ಲೈನ್​ ಅಪ್​ಗೆ ಅಡ್ವಾಂಟೇಜ್​​ ಆಗಲಿದೆ. ಮಿಡಲ್​ ಆರ್ಡರ್​ಗೆ ಲೆಫ್ಟ್​ – ರೈಟ್​ ಕಾಂಬಿನೇಶನ್​​ನ ಬಲ ಬರಲಿದೆ.

ಲೋವರ್​​ ಆರ್ಡರ್​​ನಲ್ಲಿ ಗ್ಲೆನ್​ ಮ್ಯಾಕ್ಸ್​​ವೆಲ್​, ದಿನೇಶ್​ ಕಾರ್ತಿಕ್​ ಆಡಿದ್ರೆ, ಆರ್​​ಬಿಯ ಬಲ ದುಪ್ಪಟ್ಟಾಗಲಿದೆ. ಅನುಭವಿಗಳಾದ ಇಬ್ಬರೂ ಒತ್ತಡವನ್ನ ನಿಭಾಯಿಸಬಲ್ಲರು. ಫಿನಿಷರ್​ ರೋಲ್​ ಪ್ಲೇ ಮಾಡುವ ಕಲೆ ಇಬ್ಬರಲ್ಲೂ ಇದ್ದು, ಡೆತ್​ ಓವರ್​​ಗಳಲ್ಲಿ ರನ್​ ಕೊಳ್ಳೆ ಹೊಡೆಯಬಲ್ಲರು.

ಇನ್ನು ಒಂದು ಪಂದ್ಯ ಆಡಿ ಬಳಿಕ ಬೆಂಚ್​ಗೆ ಸೀಮಿತವಾಗಿರುವ ಕರಣ್​ ಶರ್ಮಾಗೆ ಮತ್ತೆ ಅವಕಾಶ ನೀಡಬೇಕು. ಅನುಭವಿ ಸ್ಪಿನ್ನರ್ ಕಮ್​ಬ್ಯಾಕ್​​ ಸ್ಪಿನ್​ ವಿಭಾಗದ ಬಲ ಹೆಚ್ಚಿಸಲಿದೆ. ಮಯಾಂಕ್​ ಡಾಗಾರ್​​ಗಿಂತ ಕರಣ್​ ಶರ್ಮಾ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ.

ಆರ್​​​ಸಿಬಿಯ ಬೌಲಿಂಗ್​ ಡಿಪಾರ್ಟ್​​ಮೆಂಟ್​ಗೆ​ ಸರ್ಜರಿ ಮಾಡ್ಲೇಬೇಕಿದೆ. ಮೊಹಮ್ಮದ್​ ಸಿರಾಜ್​, ರೀಸಿ ಟೋಪ್ಲಿ ಜೊತೆಗೆ ವೇಗಿ ವೈಶಾಖ್​ ವಿಜಯ್​ ಕುಮಾರ್​​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಬೇಕಿದೆ. ಮೂವರು ವೇಗಿಗಳ ಬಲ ಬೌಲಿಂಗ್​ ವಿಭಾಗದ ಸ್ಟ್ರೆಂಥ್​ ಹೆಚ್ಚಿಸಲಿದೆ.

ಮಹಿಪಾಲ್​ ಲೋಮ್ರೋರ್​, ಯಶ್​ ದಯಾಳ್​ರನ್ನ ಇಂಪ್ಯಾಕ್ಟ್​ ಪ್ಲೇಯರ್ ಅವಕಾಶದಲ್ಲಿ ಟಾಸ್​ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್​ ಆದ್ರೆ ಲೋಮ್ರೋರ್​, ಬೌಲಿಂಗ್​ ಆದ್ರೆ ಯಶ್​​ ದಯಾಳ್​ರನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಿ, ಇನ್ನಿಂಗ್ಸ್​ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್​​ಸಿಬಿಗೆ ಕಷ್ಟದ ವಿಚಾರವೇನಲ್ಲ.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ