ಕರ್ನಾಲ್: ಹರಿಯಾಣದ ಕರ್ನಾಲ್ನಲ್ಲಿ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಒಬ್ಬರ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಯಮುನಾನಗರದ ಕ್ರೈಂಬ್ರಾಂಚ್ ಎಎಸ್ಐ ಸಂಜೀವ್ ಕುಮಾರ್ ಎಂಬುವರೆ ಪಾತಕಿಗಳು ಹಾರಿದ ಗುಂಡಿಗೆ ಬಲಿಯಾದವರು. ಪೊಲೀಸ್ ಅಧಿಕಾರಿಯ ಮನೆಯ ಸಮೀಪವೇ ಕೊಲೆ ಮಾಡಲಾಗಿದೆ. ವಾಕಿಂಗ್ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದಾರೆ.
ಸಂಜೀವ್ ಹರಿಯಾಣ ಪೊಲೀಸ್ ಠಾಣೆಯ ಎಎಸ್ಐಯಾಗಿದ್ದು, ಯಮುನಾಗರದ ರಾಜ್ಯ ಅಪರಾಧ ವಿಭಾಗದಲ್ಲಿ ನೇಮಕಗೊಂಡಿದ್ದರು.
ಪಾತಕಿಗಳು ಎಸ್ಐ ಹಣೆಯ ಮತ್ತು ಸೊಂಟಕ್ಕೆ ಗುಂಡು ಹೊಡೆದಿದ್ದು ಆ ಗುಂಡುಗಳು ಹೊಕ್ಕಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಸಂಜೀವ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು.
ಕೃತ್ಯದ ಬಳಿಕ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ತಂಡ ಘಟನಾ ಸ್ಥಳ ತಲುಪಿದೆ. ಅಲ್ಲಿ ಕೆಲವು ಬುಲೆಟ್ ಶೆಲ್ಗಳು ಬಿದ್ದಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಸುದ್ದಿ ತಿಳಿದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದು, ದುಃಖದ ಮಡುವಿನಲ್ಲಿ ಗೋಳಾಡುತ್ತಿದ್ದಾರೆ.