ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲಕ ಮತ್ತು ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಕಾರ್ಮಿಕರಲ್ಲ ಅವರು ಸರ್ಕಾರವೇ ನೇಮಿಸಿಕೊಂಡಿರುವ ನೌಕರರು. ಅವರನ್ನು ಪದೇಪದೆ ಕಾರ್ಮಿಕರು ಎಂದು ದಿನಗೂಲಿಗಾರರಂತೆ ಬಿಂಬಿಸುವುದು ಕೆಲ ಸಂಘಟನೆಗಳ ನಾಯಕರಿಗೆ ಶೋಭೆ ತರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ AITUC ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಕೂಡ ಈ ಬಗ್ಗೆ ಸಾರಿಗೆ ನೌಕರರನ್ನು ಎಲ್ಲಿಯೂ ಕಾರ್ಮಿಕರು ಎಂದು ಸಂಬೋಧಿಸುವುದಿಲ್ಲ ಕಾರಣ ಅವರಿಗೆ ನೌಕರರಿಗೂ ಕಾರ್ಮಿಕರಿಗೂ ಇರುವ ವ್ಯತ್ಯಾಸದ ಬಗ್ಗೆ ಮೈಸೂರು ವಿಭಾಗದ ನಿವೃತ್ತ ಮಹಿಳಾ ನೌಕರರೊಬ್ಬರು ವಿವರವಾಗಿ ತಿಳಿಸಿದ್ದರಿಂದ ಅನಂತ ಸುಬ್ಬರಾವ್ ಅವರು ನೌಕರರು ಎಂದು ಕರೆಯುತ್ತಿದ್ದಾರೆ.
ಇನ್ನು ನೌಕರರು ಎಂದರೆ ಯಾರು ಕಾರ್ಮಿಕರು ಎಂದರೆ ಯಾರು ಎಂದು 2020ರಿಂದಲೂ ಪ್ರತಿ ಸಂಘಟನೆಗಳ ಮುಖಂಡರಿಗೆ ವಿಜಯಪಥ ವಿವರಣೆ ನೀಡುತ್ತಲೇ ಬಂದಿದೆ. ಅದನ್ನು ನಿವೃತ್ತ ಮಹಿಳಾ ನೌಕರರೊಬ್ಬರು ಚಾಲನಾ ಸಿಬ್ಬಂದಿಗಳನ್ನು ಕಾರ್ಮಿಕರು ಎಂದು ಕರೆದಿದ್ದಕ್ಕೆ ಇದು ತಪ್ಪು ಅವರು ನೌಕರರು ಎಂದು ವಿವರಣೆ ಸಹಿತ ತಿಳಿಸಿತ್ತು. ಹೌದು ಇದು ನಮಗೆ ಗೊತ್ತಾಗಿರಲಿಲ್ಲ ಎಂದು ಈಗ ನೌಕರರು ಎಂದೆ ಹೆಮ್ಮೆಯಿಂದ ಹೇಳುತ್ತಿದ್ದಾರೆ.
ಆದರೂ ಪ್ರಸ್ತುತ ಸಾರಿಗೆಯ ನೌಕರರಾಗಿರುವ ಕೆಲವರು ತಮ್ಮನ್ನು ತಾವೇ ಕಾರ್ಮಿಕರು ಎಂದು ಕರೆದುಕೊಳ್ಳುತ್ತಿದ್ದಾರೆ. ಜತೆಗೆ ಸಹೋದ್ಯೋಗಿಗಳನ್ನು ಕಾರ್ಮಿಕರು ಎಂದೇ ಹೇಳುತ್ತಾರೆ. ಅದರಲ್ಲೂ ನೌಕರರ ಪರವಾಗಿ ಹುಟ್ಟಿಕೊಂಡಿರುವ ಕೆಲ ನೌಕರರ ಪರ ಸಂಘಟನೆಗಳ ಮುಖಂಡರೂ ಕೂಡ ಕಾರ್ಮಿಕರು ಎಂದು ಪದೇಪದೆ ಕೆರೆಯುವುದು ಭಾರಿ ಮುಜುಗರವನ್ನು ಉಂಟು ಮಾಡುತ್ತಿದೆ.
ನೋಡಿ ಸ್ಪಷ್ಟವಾಗಿ ತಿಳಿದುಕೊಳ್ಳಿ ದಿನಗೂಲಿ ಕೆಲಸ ಮಾಡುವವರು ಮಾತ್ರ ಕಾರ್ಮಿಕರು. ಒಂದು ಸಂಸ್ಥೆಯಿಂದ ಅದೂಕೂಡ ಸರ್ಕಾರದ ಅಧೀನದಲ್ಲಿ ಬರುವ ಸಾರಿಗೆ ನಿಗಮದಲ್ಲಿ ನೇಮಕಗೊಂಡ ಬಳಿಕ ಅವರು ಕಾಯಂ ಕೆಲಸಗಾರರಾಗಿದ್ದರೆ ಅವರು ನೌಕರರಾಗಿರುತ್ತಾರೆ. ಇಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರು ನೌಕರರೆ.
ಆದರೆ, ಅವರವರ ಕೆಲಸ ಗುರುತಿಸುವುದಕ್ಕೆ ಸುಲಭವಾಗಲಿ ಎಂಬ ದೃಷ್ಟಿಯಿಂದ ಅಧಿಕಾರಿಗಳು ನೌಕರರು ಎಂದು ವರ್ಗೀಕರಣ ಮಾಡಲಾಗಿದೆ. ಅಧಿಕಾರಿಗಳು ಎಂದರೆ ಎ,ಬಿ,ಸಿ ಗ್ರೂಪ್‌ನ ನೌಕರರು. ಡಿ ಗ್ರೂಪ್‌ನ ನೌಕರರನ್ನು ಅಧಿಕಾರಿಗಳ ಗ್ರೂಪಿಗೆ ಸೇರಿಸಿಲ್ಲ ಕಾರಣ ಅವರು ಅಧಿಕಾರ ಚಲಾಯಿಸಲು ಬರುವುದಿಲ್ಲ ಮೇಲಧಿಕಾರಿಗಳು ಹೇಳಿದ ಕೆಲಸ ಮಾಡುವವರು ಎಂಬುವುದು.
ಇಲ್ಲಿ ಅಧಿಕಾರಿಗಳು ಎಂದರೆ ತಮ್ಮ ಕೆಳ ಹಂತದ ನೌಕರರಿಗೆ ಈ ಕೆಲಸ ಅಥವಾ ಆ ಕೆಲಸ ಮಾಡಿ ಎಂದು ಸೂಚನೆ ನೀಡುವವರು. ಹೀಗಾಗಿಯೇ ಎ,ಬಿ,ಸಿ ಗ್ರೂಪ್‌ನ ನೌಕರರನ್ನು ಅಧಿಕಾರಿಗಳ ವರ್ಗಕ್ಕೆ ಸೇರಿಸಲಾಗಿದೆ. ಇಲ್ಲಿ ಚಾಲನಾ ಸಿಬ್ಬಂದಿಗಳೂ ಕೂಡ ಒಂದು ದೃಷ್ಟಿಯಲ್ಲಿ ನೋಡಿದರೆ ಅಧಿಕಾರಿಗಳೆ. ಆದರೆ, ಅವರಿಗೆ ತಮ್ಮ ಕೆಳಹಂತದ ನೌಕರರಿಗೆ ಸೂಚನೆ ನೀಡಿ ಕೆಲಸ ಮಾಡಿಸುವ ಅವಕಾಶ ನೀಡದಿರುವುದರಿಂದ ಅವರನ್ನು ನೌಕರರು ಎಂದು ಕರೆಯಲಾಗುತ್ತದೆ.
ಇನ್ನು ಸಾರಿಗೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳನ್ನು ಒಳಗೊಂಡತೆ ಇನ್ನು ಹಲವಾರು ಹುದ್ದೆಗಳಲ್ಲಿ ಸಿ ಗ್ರೂಪ್ ನೌಕರರು ಇದ್ದಾರೆ ಉದಾ: ಡಿಎಂ, ಎಟಿಎಸ್, ಎಟಿಐ, ಟಿಸಿ ಹೀಗೆ ಹಲವಾರು ಹುದ್ದೆಗಳು ಇವೆ. ಇವರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದು ಕೆರೆಯುತ್ತಾರೆ. ಕಾರಣ ಎ ಮತ್ತು ಬಿ ಗ್ರೂಪ್ ನೌಕರರು ಇವರಿಗೆ ಈ ಕೆಲಸ ಮಾಡಬೇಕು ಎಂದು ಸೂಚನೆ ನೀಡುತ್ತಾರೆ. ಅವರು ನೀಡಿದ ಸೂಚನೆಯಂತೆ ಇವರು ನಡೆದುಕೊಳ್ಳಬೇಕಿದೆ. ಹೀಗಾಗಿ ಇವರನ್ನು ಸಿಬ್ಬಂದಿಗಳು ಎಂದು ಕರೆಯುವರು.
ಇನ್ನು ಮುಖ್ಯವಾಗಿ ಸಾರಿಗೆ ನಿಗಮಗಳಲ್ಲಿ ಯಾರು ಕೂಡ ಕಾರ್ಮಿಕರು ಇಲ್ಲ. ಎಲ್ಲ ಅವರವರ ವಿದ್ಯಾರ್ಹತೆಗೆ ತಕ್ಕುದಾಗಿ ನೌಕರಿಗೆ ನೇಮಕಗೊಂಡು ಬಂದಿರುವವರು. ಅವರು ದಿನಗೂಲಿಗೆ ಸೇರಿರುವವರಲ್ಲ, ಹೀಗಾಗಿ ಚಾಲನಾ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗಳು ಕೂಡ ನೌಕರರೆ ಹೊರತು ಕಾರ್ಮಿಕರಲ್ಲ. ಇನ್ನಾದರೂ ಈ ಪದ ಬಳಕೆಯನ್ನು ಬದಲಾಯಿಸಿಕೊಳ್ಳಿ.
ಈ ಮೊದಲೇ ಹೇಳಿದಂತೆ ಅಂತನ ಸುಬ್ಬರಾವ್ ಅವರಿಗೆ ನಿವೃತ್ತ ಮಹಿಳಾ ನೌಕರರೊಬ್ಬರು ವಿವರಿಸಿದ ಬಳಿಕ ಅವರು ಸಾರಿಗೆ ಸಿಬ್ಬಂದಿಯನ್ನು ಅದರಲ್ಲೂ ಚಾಲನಾ ಸಿಬ್ಬಂದಿಯನ್ನು ಕಾರ್ಮಿಕರು ಎಂದು ಕರೆಯದೆ ಇತ್ತೀಚಿನ ದಿನಗಳಲ್ಲಿ ನೌಕರರು ಎಂದು ಹೇಳುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಹುದ್ದೆಗೆ ತಕ್ಕ ಗೌರವದಿಂದ ನಡೆದುಕೊಳ್ಳಬೇಕಿದೆ.