VIJAYAPATHA.IN > ವಿಜಯಪಥ > NEWS > ನಮ್ಮಜಿಲ್ಲೆ > ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ
ಬೆಂ.ಗ್ರಾ: ನೊಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವಾರ್ಷಿಕ ಶೇಕಡಾ 16 ರಷ್ಟು ಬಡ್ಡಿ ವಿಧಿಸಬೇಕು.
ಹೆಚ್ಚುವರಿ ಬಡ್ಡಿ ವಿಧಿಸುತ್ತಿರುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಕಂಡ ಕಚೇರಿಗೆ ದೂರು ಸಲ್ಲಿಸಬಹುದು.
ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ, ಬೆಂಗಳೂರು ಪ್ರಾಂತ-ದೂ.ಸಂಖ್ಯೆ:080-26612911, ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೂ.ಸಂಖ್ಯೆ-080-22442152.
ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರ ಕಚೇರಿ ದೊಡ್ಡಬಳ್ಳಾಪುರ, ದೂ.ಸಂಖ್ಯೆ:9901539026 ಸಂಪರ್ಕಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಂಬಂಧಕರು ತಿಳಿಸಿದ್ದಾರೆ.
Related
Hardikrajd