ಬೆಂಗಳೂರು: ಇಂದು ಬೆಳಗ್ಗೆ 7 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ 425 ಕ್ಕೆ ಏರಿಕೆ ಕಂಡಿದೆ.
ಬುಧವಾರ ಮಧ್ಯಾಹ್ನದವರೆಗಿನ ಮಾಹಿತಿಯಂತೆ ಬೆಂಗಳೂರಿನ ಇಬ್ಬರು, ಕಲಬುರಗಿಯ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 425ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೆ 17ಮಂದಿ ಅಸುನೀಗಿದ್ದು, 279 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 129ಮಂದಿ ಗುಣಮುಖರಾಗಿದ್ದಾರೆ. ಅಂದರೆ ಮೂರು ದಿನದ ಇಂದೆ ಇದ್ದ 280 ಮಂದಿಯಲ್ಲಿ ನಿನ್ನೆ ಒಂದೇದಿನ 17 ಮಂದಿ ರೋಗ ಮುಕ್ತರಾಗಿ ಮನೆಗೆ ಮರಳಿರುವುದರಿಂದ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಇಂದಿಗೂ ಇಳಿಮುಖವಾಗಿದೆ ಎಂದೇ ಹೇಳಬಹುದಾಗಿದೆ.
ಇದನ್ನೂ ಓದಿರಿ ಇಂದು ಮತ್ತೆ 10 ಮಂದಿಗೆ ಕೊರೊನಾ ಪಾಸಿಟಿವ್
ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಮತ್ತು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ನಾಗರಿಕರು ಕೂಡ ಅವರ ಶ್ರಮಕ್ಕೆ ಕೈಜೋಡಿಸುವ ಮೂಲಕ ಈ ವಿಶ್ವಮಾರಿ ಕೊರೊನಾವನ್ನು ದೇಶದಿಂದ ಬಡಿದೋಡಿಸಲು ಮುಂದಾಗಬೇಕು.
ದೇಶದಲ್ಲಿ 19,984ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 19,984 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 640 ಮಂದಿ ಮೃತಪಟ್ಟಿದ್ದಾರೆ. 3,870ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 25,65,059 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 1,77,496 ಜನರು ಮೃತಪಟ್ಟಿದ್ದಾರೆ. 6,86,634 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.