ವಾಷಿಂಗ್‌ಟನ್: ವಿಶ್ವಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಅಮೆರಿಕದಲ್ಲಿ ಮುಂದುವರಿಸಿದ್ದು, ಕೋವಿಡ್ -19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಸಾಗುತ್ತಿದ್ದು, ಇರುವರೆಗೂ 10,35,800 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ ಸುಮಾರು 60 ಸಾವಿರ ಮಂದಿ ಮೃತಪಟ್ಟಿದ್ದಾರೆ.
ಈ ಅಂಕಿ ಅಂಶಗಳ ಮೂಲಕ ಅಮೆರಿಕ ಇಂದು ಜಗತ್ತಿನ 3ನೇ ಒಂದರಷ್ಟು ಸೋಂಕಿತರನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಯಮಸ್ವರೂಪಿ ಕೊರೊನಾ ತನ್ನ ಕಬಂಧ ಬಾಹುವನ್ನು ಚಾಚಿದ್ದು, ನಾಗರಿಕರು ತತ್ತರಿಸಿ ಹೋಗಿದ್ದಾರೆ.
ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 30.70 ಲಕ್ಷ ದಾಟಿದ್ದು, ಈವರೆಗೂ 2.18 ಲಕ್ಷ ಜನರು ಸಾವಿಗೀಡಾಗಿದ್ದಾರೆ. 9.5 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದು, ಮನೆಗೆ ಮರಳಿದ್ದಾರೆ ಎಂದು ವಿಶ್ವಾ ಆರೋಗ್ಯ ಸಂಸ್ಥೆ ತಿಳಿಸಿದೆ.
ಇನ್ನು ಅಮೆರಿಕದ ನಂತರ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಸ್ಪೇನ್‌ನಲ್ಲಿ. 2.32 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 24 ಸಾವಿರ ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಇಟಲಿಯಲ್ಲಿಯೂ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 27 ಸಾವಿರಕ್ಕೂ ಹೆಚ್ಚು ಏರಿಕೆ ಆಗಿದೆ.
ಫ್ರಾನ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ತಲಾ1.60 ಲಕ್ಷಕ್ಕಿಂತಲೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕ್ರಮವಾಗಿ 23 ಸಾವಿರ ಮತ್ತು 21 ಸಾವಿರ ಮಂದಿ ಅಸುನೀಗಿದ್ದಾರೆ.
ಚೀನಾದಲ್ಲಿ 82,858 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, 4,633 ಜನರು ಸಾವನ್ನಪ್ಪಿದ್ದಾರೆ. 77 ಜನರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ವಾಸ್ತವದ ವರದಿ ಇನ್ನು ಸಸಿಗಬೇಕಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದಾರೆ.