ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಲಾಕ್‌ಡೌನ್ ಮಾಡಲಾಗುತ್ತಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ ಮತ್ತೊಂದೆಡೆ ಕೆಲವೊಂದನ್ನು ಸಡಿಲಮಾಡಲಾಗಿದೆ. ಇದರಿಂದ ಜನರು ಗೊಂದಲ್ಲಕ್ಕೆ ಸಿಲುಕಿದ್ದಾರೆ.
ಇದನ್ನು ನೋಡಿದರೆ ಯಾವ ಪುರುರ್ಷಾತಕ್ಕೆ ಈ ಲಾಕ್‌ಡೌನ್ ಮಾಡುತ್ತಿತೋ ಕಾಣೆ ಸರ್ಕಾರ. ಅಂದರೆ, ಸರ್ಕಾರ ಒಂದುಕಡೆ ತೊಟ್ಟಿಲನ್ನು ತೂಗುವ ಕೆಲಸವನ್ನು ಚಾಚುತಪ್ಪದೆ ಮಾಡುತ್ತಿದ್ದು, ಇನ್ನೊಂದೆಡೆ ಮಗು ಚಿವುಟುವುದನ್ನು ಮರೆಯುತ್ತಿಲ್ಲ. ಅದಂರೆ ಜನರನ್ನು ಯಾಮಾರಿಸುವ ರೀತಿಯಲ್ಲಿ ನಡೆದು ಕೊಳ್ಳುತ್ತಿದೆ. ಇದರಿಂದ ಜನರು ಗೊಂದಲಕ್ಕೆ ಸಿಲುಕಿದ್ದು, ಸರ್ಕಾರದ ಈ ನಡೆಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ನಿಷೇಧಾಜ್ಞೆ (ಕರ್ಫ್ಯೂ ) ಜಾರಿಗೊಳಿಸಿದೆ. ಆದರೆ ಹಿಂಬಾಗಿಲಿನಿಂದ ಕೆಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಅಂದರೆ ಮಟನ್‌ಸ್ಟಾಲ್, ಚಿಕನ್ ಅಂಗಡಿ ಹೀಗೆ ಹಲವು ವ್ಯಾಪರಿ ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದೆ. ಆದರೂ ಮನೆಯಿಂದ ಯಾರು ಹೊರಬರಬೇಡಿ ಎಂದು ಹೇಳುತ್ತಿದೆ.
ಸರ್ಕಾರದ ಈ ನಡೆಯನ್ನು ನೋಡಿದರೆ. ಅರ್ಧಂಬರ್ಧ ಬೆಂದ ಅನ್ನ (ಮುಳ್ಳಕ್ಕಿಯಂತೆ)ದಂತೆ ಕಾಣುತ್ತಿದೆ, ಇತ್ತ ಜನರನ್ನು ಹೊರಬರಬೇಡಿ ಎನ್ನುವುದು ಅತ್ತ ಎಲ್ಲದಕ್ಕೂ ಅನುವು ಮಾಡಿಕೊಡುವುದು. ಇದರಿಂದ ಜನರು ಈಗಾಗಲೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಜನತೆಗೆ ಅನುಕೂಲ ಮಾಡಿಕೊಡುವ ನಡೆಯೋ ಅಥವಾ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಮಾಡುತ್ತಿರುವ ಕುತಂತ್ರವೋ ಎಂದು ಗೊಣಗುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕೊರೊನಾ ಮಹಾಮಾರಿಗೆ ಇಡೀ ವಿಶ್ವವೇ ನಲುಗುತ್ತಿರುವ ಈ ಸಮಯಲ್ಲಿ ನಾಡಿನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಈರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯೇ? ಇನ್ನು ಸಾರಿಗೆ ಬಸ್‌ಗಳನ್ನು ಒಂದೆಡೆ ಬಿಟ್ಟು ಜನರಿಲ್ಲದಿದ್ದರೂ ಓಡಿಸಲಾಗುತ್ತಿದೆ. ಇದುಕೂಡ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಕೊಡುತ್ತಿದೆ. ಆದರೂ ಸರ್ಕಾರದೆ ಈ ನಡೆ ತಿಳಿಯದಾಗಿದೆ.
ಇನ್ನು ಕರುನಾಡಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಳೆದ ನಾಲ್ಕು ದಿನದಿಂದ ಶತಕ ಬಾರಿಸುತ್ತಿದೆ. ಅದರಲ್ಲೂ ಇಂದು ದ್ವಿಶತಕ ಬಾರಿಸುವ ಮೂಲಕ ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಆದರೂ ಈ ಬಗ್ಗೆ ಆರೋಗ್ಯ ಇಲಾಖೆ ಸರಿಯಾದ ಮಾಹಿತಿ ಕೊಡುವಲ್ಲೂ ವಿಫಲವಾಗುತ್ತಿದೆ.
ಈ ಹಿಂದೆ ಮಾಧ್ಯಮಗಳಿಗೆ ಕೊರೊನಾ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ಕಳೆದ ನಾಲ್ಕು ದಿನದಿಂದ ನೀಡುತ್ತಿಲ್ಲ. ಇದರಿಂದ ನಾಡಿನಲ್ಲಿ ಕೊರೊನಾ ಸೋಂಕಿತರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಇಂದು ಜನರಲ್ಲಿ ಇರುವ ಆತಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಈ ಹಿಂದಿನಂತೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ಆ ಮೂಲಕ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail