ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಈಗಾಗಲೇ ಜನ ನಲುಗಿ ಹೋಗಿದ್ದಾರೆ ಈ ನಡುವೆ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹೋದರೆ ಸಾರಿಗೆ ಸಂಸ್ಥೆಗೆ ತುಂಬಾ ನಷ್ಟವಾಗುತ್ತದೆ. ಆದ್ದರಿಂದ ಬಸ್‌ಗಳಲ್ಲಿ ಹೆಚ್ಚು ಜನರನ್ನು ಹತ್ತಿಸಿಕೊಳ್ಳುವುದು ಅನಿವಾರ್ಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚುವಂತರ ಮಾಡಿದೆ.
ಇನ್ನು ಬೈಕ್‌ನಲ್ಲಿ ಮೂರು ಮೂರು ಜನ ಹೋಗುತ್ತಾರೆ ವಿಮಾನ, ರೈಲುಗಳಲ್ಲಿ ಒತ್ತೊತ್ತರಿಸಿಕೊಂಡು ಕೂರುತ್ತಾರೆ. ಆದರೆ ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ ಎಂದು ನೀವು ಹೇಳುತ್ತಿರಲ್ಲ ಎಂದು ಸಚಿವರು ಬೇಜವಾಬ್ದಾರಿ ಮಾಧ್ಯಮದವರಿಗೆ ಉತ್ತರ ಕೊಟ್ಟಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸಚಿವರು ಹೇಳಿದಿಷ್ಟು
ಕೊರೊನಾ ಪಾಸಿಟಿವ್ ಇರುವ ವಲಯಗಳಲ್ಲಿ ಅಂದರೆ ರೆಡ್ ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಉಳಿದೆಡೆ ಸಾಮಾನ್ಯರೀತಿಯಲ್ಲೇ ಬಸ್‌ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದು ಸಂಸ್ಥೆ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ.
ಹಾಗಾಗಿ ಬಸ್‌ಗಳಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳದೆ ಆರೋಗ್ಯವಾಗಿರುವವರು ಸಂಚರಿಸಬಹುದು. ಇನ್ನು ನಮ್ಮ ಸಂಸ್ಥೆಯಲ್ಲಿ ಮಾತ್ರವಲ್ಲ ರೈಲು ಮತ್ತು ವಿಮಾನಯಾನದಲ್ಲೂ ಇದೇ ರೀತಿ ಪಾಲನೆಯಾಗುತ್ತಿದೆ. ಅದನ್ನು ಬಿಟ್ಟು ನೀವು ನಮ್ಮ ಸಂಸ್ಥೆಯಲ್ಲಿ ಮಾತ್ರ ಎಂಬಂತೆ ಏಕೆ ಕೇಳುತ್ತೀರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಸಾರಿಗೆಯ ನಾಲ್ಕು ನಿಗಮಗಳ ಡಿಪೋಗಳ ವ್ಯವಸ್ಥಾಪಕರು ಮತ್ತು ಸಹಾಯಕ ಸಂಚಾರ ನಿರೀಕ್ಷರು ಚಾಲಕ ಮತ್ತು ನಿರ್ವಾಹಕರಿಗೆ ಮಿತಿ ಇಲ್ಲದೆ ಎಷ್ಟು ಜನ ಹತ್ತುತ್ತಾರೋ ಅಷ್ಟು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು ಎಂದು ಮೌಖಿಕವಾಗಿ ಆದೇಶಿಸಿದ್ದಾರೆ.
ನೀವು ಸಾಮಾಜಿಕ ಅಂತರ ಕಾಯ್ದುಕೊಂಡರೆ ಈಗಾಗಲೇ ನಷ್ಟದಲ್ಲಿರುವ ಸಂಸ್ಥೆ ಇನ್ನಷ್ಟು ನಷ್ಟಕ್ಕೆ ಹೋಗಲಿದೆ. ಇದರಿಂದ ನಿಮಗೆ ಸಂಬಳ ಕೊಡಲು ಕಷ್ಟವಾಗಲಿದೆ ಹೀಗಾಗಿ ನೀವು ಆದಷ್ಟು ಎಚ್ಚರಿ ವಹಿಸಿ ಪ್ರಯಾಣಿಕರನ್ನು ಅವರು ತಲುಪಬೇಕಿರುವ ಸ್ಥಳಕ್ಕೆ ತಲುಪಿಸಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail