ಬೆಂಗಳೂರು: 62 ಮಂದಿಗೆ ಕೋವಿಡ್ ಸೋಂಕಿರುವುದು ದೃಢ ಪಟ್ಟಿದ್ದು, ವೈದ್ಯರ ಸಲಹೆಯಂತೆ A Symptomatic, Mild Symptomatic ಇರುವವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳಿಸಲಾಗಿದೆ. ಇನ್ನು ಕೆಲವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ಸಂಬಂಧ ಜುಲೈ 30 ಹಾಗೂ 31 ರಂದು ಒಟ್ಟು 3,345 ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 62 ಮಂದಿಗೆ ಕೊರೊನಾ ಸೋಂಕು ಇರುವುದು ತಿಳಿಯಿತು ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಬೀದಿ ಗುಡಿಸುವ ಕಾರ್ಯದಲ್ಲಿ ತೊಡಗಿರುವ ಹಲವು ಪೌರಕಾರ್ಮಿಕರು ಕೋವಿಡ್ -19 ಸೋಂಕಿನಿಂದ ಒಳಗಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಇನ್ನು ಎಲ್ಲಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಪೈಕಿ Covid ರೋಗ ಲಕ್ಷಣಗಳಿರುವ ಮತ್ತು Comorbidities (50 ವರ್ಷ ಮೇಲ್ಪಟ್ಟ, ರಕ್ತದೊತ್ತಡ, ಮಧು ಮೇಹ ಇನ್ನಿತರೆ) ಇರುವ ಪೌರ ಕಾರ್ಮಿಕರನ್ನು ಆದ್ಯತೆ ಮೇರೆಗೆ ಪರಿಗಣಿಸಿ ಮತ್ತು ಉಳಿದ ಪೌರ ಕಾರ್ಮಿಕರನ್ನು ಕೆಲಸ ನಿರ್ವಹಿಸುವ ಸಮಯದಲ್ಲಿ ಹಂತ ಹಂತವಾಗಿ Covid Rapid Antigen Test (RAT) ಮಾಡಲಾಗುತ್ತದೆ ಎಂದರು.