ಬೆಂಗಳೂರು: ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಮಳೆಯಿಂದ ಬ್ರಹ್ಮಗಿರಿಯ ಬೆಟ್ಟ ಕುಸಿದು ತಲಕಾವೇರಿಯ ದೇವಸ್ಥಾನದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಸೇರಿ 5 ಜನ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ನೋವಾಗಿದೆ. ಎನ್‌ಡಿಆರ್‌ಎಫ್ ತಂಡ ಶೋಧ ನಡೆಸುತ್ತಿದ್ದಾರೆ.ಆ ಕುಟುಂಬ ಸುರಕ್ಷಿತವಾಗಿ ಮರಳಲಿ ಎಂದು ತಾಯಿ ಕಾವೇರಮ್ಮನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪ್ರಾರ್ಥಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಡಿರುವ ಅವರು ಶೀಘ್ರದಲ್ಲಿ ನಾಪತ್ತೆಯಾಗಿರುವವರು ಜೀವಂತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸಿದ್ದಾರೆ.
ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಮಳೆಯಿಂದ ಬ್ರಹ್ಮಗಿರಿಯ ಬೆಟ್ಟ ಕುಸಿದು ತಲಕಾವೇರಿಯ ದೇವಸ್ಥಾನದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಸೇರಿ 5 ಜನ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ನೋವಾಗಿದೆ. ಎನ್‌ಡಿಆರ್‌ಎಫ್ ತಂಡ ಶೋಧ ನಡೆಸುತ್ತಿದ್ದಾರೆ.ಆ ಕುಟುಂಬ ಸುರಕ್ಷಿತವಾಗಿ ಮರಳಲಿ ಎಂದು ತಾಯಿ ಕಾವೇರಮ್ಮನಲ್ಲಿ ಪ್ರಾರ್ಥಿಸುತ್ತೇನೆ. pic.twitter.com/euEqRxEZan
— Dr Sudhakar K (@mla_sudhakar) August 6, 2020