ಮೈಸೂರು: ನಗರದ ಜೆಎಲ್ಬಿ ರಸ್ತೆಯಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (RTO) ಯನ್ನು ಶುಕ್ರವಾರದಿಂದ ಮೂರು ದಿನಗಳ ವರೆಗೆ ಸೀಲ್ಡೌನ್ ಮಾಡಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕಚೇರಿಯ ಅಧೀಕ್ಷಕರಿಗೆ (Superintendent Officer) ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಜ್ ಮಾಡಿ ಸೀಲ್ಡೌನ್ ಮಾಡಲಾಗಿದೆ. ಇನ್ನು ಕಚೇರಿಯಲ್ಲಿ ಅಧಿಕಾರಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿರುವ ಸಿಬ್ಬಂದಿಯನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಕಚೇರಿಯನ್ನು ದಿಢೀರನ ಸೀಲ್ಡೌನ್ ಮಾಡಿದ್ದರಿಂದ ತಮ್ಮ ವಾಹನಗಳನ್ನು ಬಿಡಿಕೊಳ್ಳಲು ಮತ್ತು ಡಿಎಲ್ ಸೇರಿ ಇತರ ಕೆಲಸಕ್ಕಾಗಿ ಬಂದಿದ್ದ ಹಲವು ಮಂದಿ ಪರದಾಡುವಂತಾಯಿತು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail