NEWSನಮ್ಮರಾಜ್ಯಸಿನಿಪಥ

1968ರಿಂದಲ್ಲೂ ನನೆಗುದಿಗೆ ಬಿದ್ದಿರುವ ಚಿತ್ರನಗರಿ ಕನಸಿಗೆ ಡಿಸಿಎಂ ಅಶ್ವಥನಾರಾಯಣ ಜೀವ ತುಂಬುವರೇ?

ವಿಜಯಪಥ ಸಮಗ್ರ ಸುದ್ದಿ

ದ್ದೇಶಿತ ಚಿತ್ರನಗರಿಯನ್ನು ಬೆಂಗಳೂರಿನ ಹೆಸರುಘಟ್ಟದಲ್ಲಿಯೇ ನಿರ್ಮಿಸಲಾಗುತ್ತದೆಯೆಂದು ಉಪ ಮುಖ್ಯಮಂತ್ರಿ ಅಶ್ವಥನಾರಾಯಣ   ಹೇಳಿರುವುದು ಸ್ವಾಗತಾರ್ಹ.

ಏಕೆಂದರೆ, 1968 ರಲ್ಲಿಯೆ ಆಗಿನ ಮೈಸೂರು ರಾಜ್ಯ ಸರ್ಕಾರವು ಹೆಸರುಘಟ್ಟದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ 347 ಎಕರೆಯನ್ನು ಮಂಜೂರು ಮಾಡಿತು, ಪುನಃ ಅ ಅದೇಶವನ್ನು ರದ್ದುಪಡಿಸಿತು.

ಚಲನಚಿತ್ರ ಹಾಗೂ ಚಿತ್ರರಂಗದ ಬಗ್ಗೆ ಅಪಾರ ಅರಿವು, ಆಸಕ್ತಿ ಇದ್ದ  ಡಿ.ದೇವರಾಜ ಅರಸು ಅವರು 1972 ರಲ್ಲಿ ಮುಖ್ಯಮಂತ್ರಿ ಆಗುತ್ತಾರೆ. ಅವರು ಚಿತ್ರನಗರಿ ನಿರ್ಮಾಣಕ್ಕಾಗಿ ಹೆಸರುಘಟ್ಟದಲ್ಲಿ ಜಮೀನು

ಗುರುತಿಸಿದರು ಕಾರಣನಂತರಗಳಿಂದ ಅದು ನನೆಗುದಿಗೆ  ಬಿದ್ದಿತ್ತು.1984 ರಲ್ಲಿ ಮುಖ್ಯಮಂತ್ರಿ ಅದ ರಾಮಕೃಷ್ಣ ಹೆಗಡೆ ಅವರು ಕನ್ನಡ ಚಿತ್ರರಂಗಕ್ಕೆ 50 ವರ್ಷವಾದ ಕಾರಣಕ್ಕಾಗಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿಮಾತನಾಡುತ್ತ ಹೆಸರುಘಟ್ಟದಲ್ಲಿ ಚಿತ್ರನಗರಿ ಅದರೆ, ಬಾಲಿವುಡ್‌ನ ಹಿಂದಿ ಭಾಷೆ ಹಾಗೂ ಹಾಲಿವುಡ್‌ನ ಇಂಗ್ಲಿಷ್ ಅಲ್ಲದೆ ತಮಿಳು, ತೆಲುಗು ಇತರೆ ಭಾಷೆಗಳ ಶೂಟಿಂಗ್ ಕೂಡ ಮಾಡಲು ನಿರ್ಮಾಪಕರು ಆಸಕ್ತರಾಗಿದ್ದಾರೆ,  ಹಾಗೂ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ಬರುವುದೆಂದು  ಪ್ರಸ್ತಾಪಿಸಿದ್ದರೆಂದು ಅಂದು ಕಾರ್ಯಕ್ರಮದ ಸಮಿತಿಯ ಸದಸ್ಯರಲ್ಲಿ ‌ಒಬ್ಬರಾಗಿದ್ದ ಡಾ. ಬಿ.ವಿ. ವೈಕುಂಠರಾಜು ಅವರು ತಮ್ಮ ವಾರಪತ್ರಿಕೆಯ ಸಂಪಾದಕರ ಡೈರಿಯಲ್ಲಿ ದಾಖಲಿಸಿದ್ದಾರೆ.

ಇವೆಲ್ಲಾ ಕಾರಣಗಳಿಗಾಗಿ ಚಿತ್ರನಗರಿ ಬೆಂಗಳೂರಿನಲ್ಲಿ ನಿರ್ಮಾಣವಾಗ ಬೇಕೆನ್ನುವುದು ಸಹಜ ಮತ್ತು ನ್ಯಾಯ ಸಮ್ಮತ ಬೇಡಿಕೆಯಾಗಿದೆ.
                                                                          l ಆರ್. ವೆಂಕಟರಾಜು

1 Comment

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?