ಮಂಡ್ಯ: ಕೆಆರ್ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬದ ದಿನವಾದ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿಗೆ ಬಾಗಿನ ಅರ್ಪಿಸಿದರು.
ತಾಯಿ ಕಾವೇರಿ ನಾಡಿನ ಜನರು ನೆಮ್ಮದಿಯಿಂದ ಬದುಕಲು ವರ್ಷಪೂರ್ತಿ ಇದೇರೀತಿ ತುಂಬಿ ತುಳುಕುತ್ತಿರಲಿ. ರೈತರು ಸಮೃದ್ಧವಾಗಿ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಿರಲೆಂದು ಪ್ರಾರ್ಥಿಸಿದರು.
ಸಚಿವರಾದ ಎಸ್.ಟಿ. ಸೋಮಶೇಖರ್, ಕೆ.ಸಿ.ನಾರಾಯಣಗೌಡ, ರಮೇಶ್ ಜಾರಕಿಹೊಳಿ, ಸಂಸದರಾದ ಪ್ರತಾಪ್ಸಿಂಹ, ಸುಮಲತಾ ಅಂಬರೀಷ್, ಶಾಸಕರಾದ ಶ್ರೀಕಂಥಯ್ಯ, ಮಂಡ್ಯ ಡಿಸಿ ವೆಂಕಟೇಶ್ ಸೇರಿ ಕೆಆರ್ಎಸ್ ಇಂಜಿನಿಯರ್ ಮತ್ತು ಅಧಿಕಾರಿಗಳು ಇದ್ದರು.