Please assign a menu to the primary menu location under menu

NEWSಆರೋಗ್ಯನಮ್ಮರಾಜ್ಯ

ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!

ವಿಜಯಪಥ ಸಮಗ್ರ ಸುದ್ದಿ

ಬಗಬನೆ ಊಟ ಮಾಡುವುದರಿಂದ ಹಲವಾರು ತೊಂದರೆಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಿಮಗೆ ತಿಳಿಸಬಹಸುತ್ತಿದ್ದೇವೆ. ಹೌದು! ಗಬಗಬನೆ ಊಟ ತಿಂದಾಗ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು.

ತೂಕ ಹೆಚ್ಚಾಗುವುದು: ಗಬಗಬನೆ ತಿಂದಾಗ ದೇಹಕ್ಕೆ ಅಗತ್ಯವಿರುವ ಪ್ರಮಾಣದ ಆಹಾರ ಸರಿಯಾಗಿ ತಲುಪುವುದಿಲ್ಲ. ಇದರಿಂದಾಗಿ ಹೆಚ್ಚು ತಿನ್ನುವ ಪ್ರವೃತ್ತಿ ಉಂಟಾಗುತ್ತದೆ ಮತ್ತು ತೂಕ ಹೆಚ್ಚಾಗಬಹುದು.

ಮಧುಮೇಹ ಬರಬಹುದು: ಗಬಗಬನೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಇದು ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾಗಿ ಊಟ ಮಾಡುವಾಗ ಸರಿಯಾದ ಕ್ರಮದಲ್ಲಿ ಊಟ ಮಾಡಬೇಕಿದೆ.

ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು: ಗಬಗಬನೆ ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ನಾವು ಹಲವಾರು ದೈಹಿಕ ತೊಂದರೆಗೂ ಒಳಗಾಗಬಹುದು.

ಉಸಿರಾಟದ ತೊಂದರೆ: ಗಬಗಬನೆ ತಿನ್ನುವಾಗ ಆಹಾರವು ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಉಸಿರಾಟದ ತೊಂದರೆ ಉಂಟಾಗಬಹುದು. ಇದರಿಂದ ಜೀವಕ್ಕೂ ಹಾಣಿಯಾಗಬಹುದು.

ಪೌಷ್ಟಿಕಾಂಶದ ಕೊರತೆ: ಗಬಗಬನೆ ತಿಂದಾಗ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳು ದೊರೆಯುವುದಿಲ್ಲ. ಇದರಿಂದಾಗಿ ದೇಹವು ದುರ್ಬಲವಾಗಬಹುದು. ಈ ತೊಂದರೆಗಳನ್ನು ತಪ್ಪಿಸಲು, ಆಹಾರವನ್ನು ನಿಧಾನವಾಗಿ ಮತ್ತು ಚೆನ್ನಾಗಿ ಅಗಿದು ತಿನ್ನಬೇಕು. ಊಟ ಮಾಡುವಾಗ ಇತರ ಕೆಲಸಗಳಲ್ಲಿ ತೊಡಗಬಾರದು ಮತ್ತು ಆಹಾರದ ಬಗ್ಗೆ ಗಮನ ಹರಿಸಬೇಕು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ ಟಿವಿ ನೋಡಬೇಡ ಓದಿಕೊ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು ಸಂಬಳಗಾರ ವರ್ಗಕ್ಕೆ 2025ರ ಬಜೆಟ್​​ನಲ್ಲಿ ಭರ್ಜರಿ ಗಿಫ್ಟ್‌ಕೊಟ್ಟ ವಿತ್ತ ಸಚಿವರು THE UNION BUDGET 2025-26: ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ- ರೈತರಿಗೆ ನಿರಾಸೆ 8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್